»   » ಹಾಲಿವುಡ್ ನಲ್ಲೂ 'ವೀರಪ್ಪನ್' ಹವಾ ಶುರು ಮಾಡ್ತಾರಂತೆ ವರ್ಮಾ

ಹಾಲಿವುಡ್ ನಲ್ಲೂ 'ವೀರಪ್ಪನ್' ಹವಾ ಶುರು ಮಾಡ್ತಾರಂತೆ ವರ್ಮಾ

Posted by:
Subscribe to Filmibeat Kannada

ಸದ್ಯಕ್ಕೆ ಎಲ್ಲೆಡೆ ನಿರ್ದೇಶಕ ವರ್ಮಾ ಆಕ್ಷನ್-ಕಟ್ ಹೇಳಿದ್ದ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾನೇ ಸದ್ದು ಮಾಡುತ್ತಿದೆ. ಈಗಾಗಲೇ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಿರುವ ಸಿನಿಮಾ ಇನ್ನೇನು ಹಾಲಿವುಡ್ ಕ್ಷೇತ್ರದಲ್ಲೂ ಸದ್ದು ಮಾಡಲು ತಯಾರಾಗಿದೆ.

ಹೌದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಯಶಸ್ವಿ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾವನ್ನು ಹಾಲಿವುಡ್ ನಲ್ಲೂ ಬಿಡುಗಡೆ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಈ ಮಾತನ್ನು ಖುದ್ದಾಗಿ ವರ್ಮಾ ಅವರೇ ಸಿನಿಮಾ ಯಶಸ್ವಿಯಾದ ನೆಪದಲ್ಲಿ ಚಿತ್ರತಂಡ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಖಚಿತಪಡಿಸಿದ್ದಾರೆ.[ವರ್ಮಾ ಅವರ 'ವೀರಪ್ಪನ್' 10 ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?]'ಕಿಲ್ಲಿಂಗ್ ವೀರಪ್ಪನ್' ಸಿನಿಮಾವೇ ಅಲ್ಲದಿದ್ದರೂ, ವೀರಪ್ಪನ್ ಕುರಿತ ಚಿತ್ರವನ್ನು ಹಾಲಿವುಡ್ ನಲ್ಲಿ ಮಾಡುವುದಕ್ಕೆ ಆರ್.ಜಿ.ವಿ ಅವರು ತಯಾರಿ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಏನಪ್ಪಾ ಅಂದ್ರೆ ದುಬೈನಲ್ಲಿ ನೆಲೆಸಿರುವ ಅವರ ಸ್ನೇಹಿತರಂತೆ.


ಈಗಾಗಲೇ ವರ್ಮಾ ಅವರ ಗೆಳೆಯ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾವನ್ನು ನೋಡಿದ್ದು, ವೀರಪ್ಪನ್ ಕುರಿತಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಹಾಲಿವುಡ್ ಸಿನಿಮಾ ನಿರ್ಮಿಸಲು ಆಲೋಚನೆ ಮಾಡುತ್ತಿದ್ದಾರೆ.[ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ]ಕುಖ್ಯಾತ ಕಾಡುಗಳ್ಳ ವೀರಪ್ಪನ್ ಬಗ್ಗೆ ಕರ್ನಾಟಕ, ತಮಿಳುನಾಡು ಮತ್ತು ಇಲ್ಲಿನವರಿಗೆ ಬಿಟ್ಟು ಹೊರ ದೇಶದಲ್ಲಿ ಅಷ್ಟಾಗಿ ಗೊತ್ತಿಲ್ಲದ ಕಾರಣ ಚಿತ್ರದಲ್ಲಿ ವೀರಪ್ಪನ್ ಅಂತ್ಯಕ್ಕೆ ಮಾತ್ರ ಪ್ರಾಮುಖ್ಯತೆ ಕೊಡದೆ, ವೀರಪ್ಪನ್ ಬೆಳೆದು ಬಂದ ದಾರಿ ಮತ್ತು ಆತನನ್ನು ಹಿಡಿಯುವುದಕ್ಕೆ ಏನೆಲ್ಲಾ ಕಸರತ್ತು ಮಾಡಲಾಯಿತು ಎಂಬುದನ್ನು ಹಾಲಿವುಡ್ ಚಿತ್ರದಲ್ಲಿ ವಿವರಿಸಲಾಗುತ್ತದಂತೆ.


ಆದ್ದರಿಂದ ಸಿನಿಮಾವನ್ನು ಮತ್ತೊಮ್ಮೆ ಮೊದಲಿನಂತೆ ಚಿತ್ರೀಕರಣ ಮಾಡಲಾಗುತ್ತದೆ. ವೀರಪ್ಪನ್ ಬಗ್ಗೆ ಮಾಹಿತಿ ಸಂಗ್ರಹಿಸಿ, ಪುಸ್ತಕ ಬರೆಯಲು ಭಾರತಕ್ಕೆ ಬಂದ ವಿದೇಶಿ ಪತ್ರಕರ್ತರ ಕುರಿತ ಘಟನೆಗಳು ಚಿತ್ರದಲ್ಲಿರುತ್ತವೆ ಎಂದು ಆರ್.ಜಿ.ವಿ ತಿಳಿಸಿದ್ದಾರೆ.

English summary
If everything goes as planned, then director Ramgopal Verma might take his 'Killing Veerappan' to Hollywood. Ram Gopal Verma himself confirmed that he might do 'Killing Veerappan' in Hollywood.
Please Wait while comments are loading...

Kannada Photos

Go to : More Photos