»   » ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸಿಂಪಲ್ ಸುನಿ

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸಿಂಪಲ್ ಸುನಿ

Written by:
Subscribe to Filmibeat Kannada

ಈ ವರ್ಷ (2017) ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಮತ್ತು ನಿರ್ದೇಶಕರ ಸರಣಿ ಮದುವೆ ಗಳು ನಡೆಯುತ್ತಿವೆ. ಯಶ್ ಮತ್ತು ರಾಧಿಕಾ ಅವರ ಮದುವೆ ನಂತರ ನಿರ್ದೇಶಕರ ಮದುವೆ ಗಳೇ ಹೆಚ್ಚಾಗಿ ನಡೆಯುತ್ತಿರುವುದು ಇನ್ನೊಂದು ವಿಶೇಷತೆ ಆಗಿದೆ.[ಅಲಮೇಲಮ್ಮನಿಗೆ ಆಪರೇಶನ್ ಮಾಡಲು ಹೊರಟ ಸಿಂಪಲ್ ಸುನಿ]

simple suni

ಸದ್ಯದಲ್ಲೇ ಸಾಲು ಸಾಲಾಗಿ ಲವ್ ಸ್ಟೋರಿ ಸಿನಿಮಾಗಳಿಗೆ ಆಕ್ಷನ್ ಹೇಳುತ್ತಿರುವ ಸಿಂಪಲ್ ಸುನಿ ಸಪ್ತಪದಿ ತುಳಿಯಲಿದ್ದಾರಂತೆ. ಹಾಗೆ ಇವರು ಸಹ ಲವ್ ಕಮ್ ಆರೇಂಜ್ ಮ್ಯಾರೇಜ್ ಆಗುತ್ತಿದ್ದಾರಂತೆ.

ನಿರ್ದೇಶಕ ಸಿಂಪಲ್ ಸುನಿ, ತಾವು ಸೌಂದರ್ಯ ಗೌಡ ಎಂಬುವವರನ್ನು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಈಗ ಇಬ್ಬರ ಕುಟುಂಬಗಳ ಅನುಮತಿ ಮದುವೆಗೆ ದೊರಕಿದ್ದು, ಫೆಬ್ರವರಿ 17 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಮಾಹಿತಿಯನ್ನು ಮೂಲಗಳ ಪ್ರಕಾರ ತಿಳಿಯಲಾಗಿದೆ.[ವಿಮರ್ಶೆ; ಖುಷ್-ಖುಷಿಯಾದ 'ಸಿಂಪಲ್' ಲವ್ ಸ್ಟೋರಿ]

simple suni 1

ಅಂದಹಾಗೆ ಸಿಂಪಲ್ ಸುನಿ ಕೈ ಹಿಡಿಯಲಿರುವ ಸೌಂದರ್ಯ ಗೌಡ ಅವರು ಎಲ್ಎಲ್‌ಬಿ ಓದಿದ್ದು, ಅವರು ಸಹ ಸುನಿಯ ಸಿನಿಮಾ ಗಳಿಗೆ ಸಾಥ್ ಕೊಡಲಿದ್ದಾರಂತೆ. ಈ ಬಗ್ಗೆ ಸಿಂಪಲ್ ಸುನಿ ಮಾತ್ರ ಅಧಿಕೃತ ಮಾಹಿತಿಯನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ.

English summary
Director Suni, better known as Simple Suni, will get marry in February 17.
Please Wait while comments are loading...

Kannada Photos

Go to : More Photos