twitter
    For Quick Alerts
    ALLOW NOTIFICATIONS  
    For Daily Alerts

    ಅಣ್ಣಾವ್ರು ಇದ್ದಿದ್ರೆ ಇದನ್ನ ಒಪ್ತಿದ್ರಾ ಹೇಳಿ ಶಿವಣ್ಣ?

    By ಜೀವನರಸಿಕ
    |

    ವರನಟ, ಗಾನಗಂಧರ್ವ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಮನಸ್ಸು ಮಾಡಿದ್ರೆ ಯಾವತ್ತೋ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಗದ್ದುಗೆಯನ್ನ ಸುಲಭವಾಗಿ ಏರಿಬಿಡ್ತಿದ್ರು. ಗೋಕಾಕ್ ಚಳವಳಿಯ ಸಂದರ್ಭದಲ್ಲಿ ರಾಜಕೀಯಕ್ಕೆ ಬರ್ತೀರಾ ಅಂತ ರಾಜ್ ರನ್ನ ಪತ್ರಕರ್ತರು ಕೇಳಿದ್ದಕ್ಕೆ ಏನಂದಿದ್ರು ಗೊತ್ತಾ?

    "ನನ್ನನ್ನ ಕನ್ನಡಿಗರು ರಾಜಕುಮಾರ ಅಂತ ಕರೆದಿದ್ದಾರೆ. ನಾನು ರಾಜಕುಮಾರನಾಗಿಯೇ ಇರ್ತೀನಿ, ರಾಜಕಾರಣಿ ಆಗೋದಿಲ್ಲ" ಅಂದಿದ್ರು. ಈಗ ರಾಜ್ ಕುಟುಂಬದ ಹಿರಿಯ ಸೊಸೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ರಾಜಕೀಯಕ್ಕೆ ಬರೋದು ಗ್ಯಾರಂಟಿಯಾಗ್ತಿದೆ. [ಎಲ್ಲೆಲ್ಲೋ ಜಾರಿದೆ ನಟಿ ರಮ್ಯಾ ಮೇಡಂ ಮನಸು]

    ಗೀತಾ ಶಿವರಾಜ್ ಕುಮಾರ್ ಜೆಡಿಎಸ್ ನಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ತಿದ್ದಾರೆ. ಶಿವಣ್ಣ ಅವಶ್ಯಕತೆ ಬಿದ್ರೆ ಪ್ರಚಾರವನ್ನೂ ಮಾಡ್ತೀನಿ ಅಂದಿದ್ದಾರೆ. ಆದರೆ ಅಭಿಮಾನಿಗಳು ಈಗಾಗ್ಲೇ ಸ್ಪರ್ಧಿಸೋದು ಬೇಡ ಅಂತಿದ್ದಾರೆ.

    ರಾಜ್ ಕುಟುಂಬಕ್ಕೆ ರಾಜಕೀಯ ಬೇಡ ಅನ್ನೋದು ಎಷ್ಟೋ ಜನರ ಆಶಯ. ಆದರೆ ಸ್ವತಃ ಶಿವಣ್ಣ ಹೇಳೋದು ರಾಜಕೀಯ ಅಪ್ಪಾಜಿಗೆ ವೈಯಕ್ತಿಕವಾಗಿ ಇಷ್ಟವಿರ್ಲಿಲ್ಲ. ರಾಜಕೀಯವೇ ಬೇಡ ಅಂತಿದ್ರೆ ರಾಜಕಾರಣ ಹಿನ್ನೆಲೆಯ ಕುಟುಂಬದ ಗೀತಾನನ್ನ ಯಾಕೆ ಮದ್ವೆ ಮಾಡ್ತಿದ್ರು ಅಂತ.

    ಆದ್ರೂ ಶಿವಣ್ಣ ಒಂದ್ಸಾರಿ ಯೋಚ್ನೆ ಮಾಡಿ ರಾಜ್ ಕುಟುಂಬ ಕೂಡ ರಾಜಕೀಯ ಅನ್ನೋ ಹೊಲಸಿಗೆ ಇಳೀತು ಅನ್ನೋ ಕಳಂಕ ಬರಬಾರ್ದಲ್ವಾ. ಅಣ್ಣಾವ್ರು ಇದ್ದಿದ್ರೆ ಇದನ್ನ ಒಪ್ತಿದ್ರಾ, ಹೇಳಿ ಶಿವಣ್ಣ?

    English summary
    Hatrick hero, Century Star and son of Cultural Icon of Kannada late Dr Rajkumar, Shivrajkumar clarifying his stand on his wife Geetha's (Former CM late Bangarappa's daughter) interests to pitch her political career from Shimoga. Shivanna do you think Rajkumar would have agreed your stand, if he was alive today?
    Wednesday, March 12, 2014, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X