»   » ಡಾ.ರಾಜ್ ಕುಮಾರ್ 9 ನೇ ಪುಣ್ಯತಿಥಿಗೆ ಜನಸಾಗರ

ಡಾ.ರಾಜ್ ಕುಮಾರ್ 9 ನೇ ಪುಣ್ಯತಿಥಿಗೆ ಜನಸಾಗರ

Posted by:
Subscribe to Filmibeat Kannada

ಕನ್ನಡ ಕಲಾಲೋಕ ಎಂದಿಗೂ ಮರೆಯದ ಹೆಸರು ಡಾ.ರಾಜ್ ಕುಮಾರ್. ಬೆಳ್ಳಿತೆರೆಯಲ್ಲಿ 5 ದಶಕಗಳ ಕಾಲ ಮಿಂಚಿದ ಈ ಮಹಾನ್ ಚೇತನ ನಮ್ಮನ್ನಗಲಿ ಇಂದಿಗೆ 9 ವರ್ಷ. ಆದ್ರೆ, ನಟಸಾರ್ವಭೌಮನ ನೆನಪು ಮಾತ್ರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಜರಾಮರ.

ಡಾ.ರಾಜ್ ಕುಮಾರ್ ಪುಣ್ಯತಿಥಿಯ ಅಂಗವಾಗಿ ಇಂದು ಅವರ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಜನಸಾಗರವೇ ಹರಿದು ಬಂದಿತ್ತು. ಮರೆಯದ ಮಾಣಿಕ್ಯ ಮಲಗಿರುವ ಮಣ್ಣಿಗೆ ನಮನ ಸಲ್ಲಿಸುತ್ತಾ ಅಭಿಮಾನಿ ವೃಂದ ಅಣ್ಣಾವ್ರ ಸ್ಮರಣೆ ಮಾಡಿದರು. ['ಬಂಗಾರದ ಮನುಷ್ಯ'ನ ಬಂಗಾರದಂತಹ ಚಿತ್ರಗಳು]

rajkumar

ಪತ್ನಿ ಪಾರ್ವತಮ್ಮ ರಾಜ್ ಕುಮಾರ್, ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬದ ಸದಸ್ಯರು ಡಾ.ರಾಜ್ ಸಮಾಧಿಗೆ ಪೂಜೆ ಸಲ್ಲಿಸಿದರು. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]

ಇದೇ ವೇಳೆ ನಾಯಂಡಹಳ್ಳಿ-ಕಂಠೀರವ ಸ್ಟುಡಿಯೋ-ತುಮಕೂರು ರಸ್ತೆಗೆ 'ಡಾ.ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ' ಅಂತ ನಾಮಕರಣ ಮಾಡಲಾಯಿತು. ಕೇಂದ್ರ ಸಚಿವ ಅನಂತ್ ಕುಮಾರ್ ಈ ರಸ್ತೆಯನ್ನ ಉದ್ಘಾಟಿಸಿದರು. ಶಾಸಕ ಪ್ರಿಯಾಕೃಷ್ಣ ಮತ್ತು ಡಾ.ರಾಜ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. [ನಾವು ನೀವು ಅರಿಯದ ರಾಜ್ ಅಪರೂಪದ ಸಂಗತಿಗಳು]

ವರನಟ ಡಾ.ರಾಜ್ ಕುಮಾರ್ ಅವರಿಗೆ 'ಭಾರತ ರತ್ನ' ನೀಡಬೇಕು ಅಂತ ಇದೇ ಸಂದರ್ಭದಲ್ಲಿ ಅಭಿಮಾನಿಗಳು ಒತ್ತಾಯಿಸಿದರು. ಡಾ.ರಾಜ್ ಪುಣ್ಯತಿಥಿ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಟ್ವಿಟ್ಟರ್ ನಲ್ಲೂ ಅಭಿಮಾನಿಗಳು ಡಾ.ರಾಜ್ ಕುಮಾರ್ ಪುಣ್ಯಸ್ಮರಣೆ ಮಾಡುತ್ತಿದ್ದಾರೆ.

rajkumar

English summary
Karnataka's Matinee Idol Dr.Rajkumar 9th Death Anniversary today (April 12th). On this occasion, Nayandahalli-Kanteerava Studio-Tumakuru Road has been renamed as 'Dr.Rajkumar Punyabhumi Road' inaugurated by Central Minister Ananth Kumar.
Please Wait while comments are loading...

Kannada Photos

Go to : More Photos