»   » ಡಾ.ವಿಷ್ಣುವರ್ಧನ್ ನೆನಪಲ್ಲಿ ಸ್ನೇಹಲೋಕ ಕ್ರಿಕೆಟ್ ಕಪ್

ಡಾ.ವಿಷ್ಣುವರ್ಧನ್ ನೆನಪಲ್ಲಿ ಸ್ನೇಹಲೋಕ ಕ್ರಿಕೆಟ್ ಕಪ್

Posted by:
Subscribe to Filmibeat Kannada

'ಸ್ನೇಹ ಲೋಕ ಕ್ರಿಕೆಟ್ ಕ್ಲಬ್' ವತಿಯಿಂದ ಡಾ.ವಿಷ್ಣುವರ್ಧನ್ ಸ್ಮರಣಾರ್ಥವಾಗಿ ಆಗಸ್ಟ್ 16ರಂದು ಎಂದಿನಂತೆ ಬೆಂಗಳೂರು ಜಯನಗರ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ 'ಡಾ.ವಿಷ್ಣುವರ್ಧನ್ ಟ್ರೋಫಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್' ನಡೆಯಲಿದೆ.

ಈ ಬಾರಿಯ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಸಮಾರಂಭವನ್ನು ಕ್ರಿಕೆಟ್ ಲೋಕದ ತಾರೆಯರಾದ ಜಿ.ಆರ್ ವಿಶ್ವನಾಥ್, ಸಯ್ಯದ್ ಕಿರ್ಮಾನಿ ಹಾಗೂ ರಘುರಾಮ್ ಅವರು ಚಾಲನೆ ನೀಡಲಿದ್ದಾರೆ.

ಈ ಟೂರ್ನಮೆಂಟ್ ಆಗಸ್ಟ್ 16ರಂದು ಪ್ರಾರಂಭಗೊಂಡು ಅಕ್ಟೋಬರ್ 11ರವರೆಗೂ ಪ್ರತಿ ವೀಕೆಂಡ್ ನಲ್ಲಿ ನಡೆಯಲಿದೆ. ಈ ಬಾರಿ ಸುಮಾರು 11 ಕಾರ್ಪೊರೇಟ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ.

ವಿಶೇಷವಾಗಿ ಈ ವರ್ಷದ ಟೂರ್ನಮೆಂಟ್ ನ ಪ್ರಾಯೋಜಕತ್ವವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಹಿಸಿಕೊಂಡಿದ್ದು, ಪ್ರಶಸ್ತಿ ವಿತರಣೆಯ ಜವಾಬ್ದಾರಿ ಜೊತೆಗೆ ನಗದು ಬಹುಮಾನ ನೀಡಲಾಗುತ್ತಿದೆ ಎಂದು ಡಾ.ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಫೈನಲ್ ಪಂದ್ಯಾಟ ಅಕ್ಟೋಬರ್ 11ರಂದು ನಡೆಯಲಿದ್ದು, ಟೂರ್ನಮೆಂಟ್ ನಲ್ಲಿ ಗೆದ್ದ ತಂಡದವರಿಗೆ 25 ಸಾವಿರ ನಗದು ಬಹುಮಾನದ ಜೊತೆಗೆ ಟ್ರೋಫಿ ನೀಡಲಾಗುತ್ತದೆ.

English summary
Dr Vishnuvardhan Trophy Cricket Tournament being promoted by the Snehaloka Cricket club is all set to be launched on the 16th of August. The tournament will be held on Jayanagar National College grounds Bengaluru.
Please Wait while comments are loading...

Kannada Photos

Go to : More Photos