twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಪ್ರೇಕ್ಷಕರು ತೆಲುಗು, ತಮಿಳರಂತೆ ಕುರಿಗಳಲ್ಲ

    By Rajendra
    |

    ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಚಿತ್ರಗಳು ಬೇಕೆ ಬೇಡವೆ ಎಂಬ ಬಗ್ಗೆ ನಡೆದಷ್ಟು ಚರ್ಚೆ ಬಹುಶಃ ಇನ್ಯಾವ ವಿಚಾರವಾಗಿಯೂ ನಡೆದಿರಲಿಕ್ಕಿಲ್ಲ. ಇದು ಪಿಎಚ್ ಡಿ ಮಾಡಬೇಕೆನ್ನುವವರಿಗೆ ಒಳ್ಳೆಯ ಸಬ್ಜೆಕ್ಟ್ ತರಹ ಕಾಣುತ್ತಿದೆ.

    ಡಬ್ಬಿಂಗ್ ಬೇಕೆ ಬೇಡವೆ ಎಂಬ ಬಗ್ಗೆ ಈಗಾಗಲೆ ಸಾಕಷ್ಟು ಚರ್ಚೆ, ವಾದ ವಿವಾದಗಳು ನಡೆದಿವೆ, ನಡೆಯುತ್ತಿವೆ. ಸದ್ಯಕ್ಕೆ ಈ ಚರ್ಚೆಗೆ ಫುಲ್ ಸ್ಟಾಪ್ ಬೀಳುವ ಲಕ್ಷಣಗಳು ಕಾಣುತ್ತಿಲ್ಲ. ನಮ್ಮ ಪ್ರಜ್ಞಾವಂತ ಓದುಗರು ಡಬ್ಬಿಂಗ್ ಬಗ್ಗೆ ಏನು ಹೇಳುತ್ತಾರೆ ನೋಡೋಣ ಬನ್ನಿ.[ಡಬ್ಬಿಂಗ್ ಪರ-ವಿರೋಧ ಸಂಶಯಕ್ಕೆ ಸುರೇಶ್ ಉತ್ತರ]

    ಕೆಲವರಂತೂ ಡಬ್ಬಿಂಗ್ ಎಂದರೇನೇ ಉರಿದುಬೀಳುತ್ತಾರೆ. ಇನ್ನೂ ಕೆಲವರು ಡಬ್ಬಿಂಗ್ ಬೇಡ ಎನ್ನುವವರ ವಿರುದ್ಧ ಆಜನ್ಮವೈರಿ ಎಂಬಂತೆ ನೋಡುತ್ತಾರೆ. ಕೆಲವರಂತೂ ಡಬ್ಬಿಂಗ್ ಬೇಕೆ ಬೇಕು ಎಂದು ಪಟ್ಟುಹಿಡಿದಿದ್ದಾರೆ.[ಡಬ್ಬಿಂಗ್ ಬೇಡ ಅನ್ನೋರಿಗೆ ಪ್ರಶ್ನೆ-ಪರಿಹಾರಗಳು]

    ಒಟ್ಟಾರೆಯಾಗಿ ಡಬ್ಬಿಂಗ್ ಪರ, ವಿರೋಧದ ಚರ್ಚೆ ನಾನಾ ಮಗ್ಗುಲುಗಳಲ್ಲಿ ಪ್ರವಹಿಸುತ್ತಿದೆ. ಆಯ್ದ ಕೆಲವು ಕಾಮೆಂಟ್ಸ್ ಇಲ್ಲಿವೆ ನೋಡಿ. ಡಬ್ಬಿಂಗ್ ಪರ ಅಥವಾ ವಿರೋಧದ ಬಗ್ಗೆ ನೀವೂ ನಿಮ್ಮ ಸ್ಪಷ್ಟ ನಿಲುವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಬಹುದು. ಡಬ್ಬಿಂಗ್ ಬೇಕು ಅಥವಾ ಬೇಡ ಎನ್ನುವುದಾದರೆ ಅದಕ್ಕೆ ಸೂಕ್ತ ಕಾರಣ ಕೊಡಿ.[ಡಬ್ಬಿಂಗ್ ಪರ ಪಿಟೀಷನ್,'ಮಠ' ಗುರು ಬೆಂಬಲ]

    ಡಬ್ಬಿಂಗ್: ನಮ್ಮ ಭಾಷೆ ಸಂಸ್ಕೃತಿ ಮೇಲೆ ಹೇರಿಕೆ

    ಡಬ್ಬಿಂಗ್: ನಮ್ಮ ಭಾಷೆ ಸಂಸ್ಕೃತಿ ಮೇಲೆ ಹೇರಿಕೆ

    ನಮಗೆ ಬೇರೆ ಭಾಷೆ ಮತ್ತು ಸಂಸ್ಕ್ರತಿ ಹೇರಿಕೆ ತುಂಬಾ ಜಾಸ್ತಿ ಆಗಿದೆ. ಬೇರೆ ಭಾಷೆಯ ಹಬ್ಬ, ಮದುವೆ, ಸಂಪ್ರದಾಯ ನೋಡಿ ನಮಗೆ ನಮ್ಮತನ ಅನ್ನೋದು ಏನು ಅನ್ನುವುದು ಏನೆಂದು ಮರೆತು ಹೋಗಿದೆ. (Prem)

    ಲೋಕಲ್ ಹೀರೋಗಳನ್ನು ನೋಡಿ ಸಾಕಾಗಿದೆ

    ಲೋಕಲ್ ಹೀರೋಗಳನ್ನು ನೋಡಿ ಸಾಕಾಗಿದೆ

    Our movies are full of imported heroines, singers, musicians technicians, you have to see only to see the "so called acting" of local heroes. (ಯುವ ಕನ್ನಡಿಗ)

    ನಿಮ್ಮ ಬಗ್ಗೆ ನಿಮಗೇ ನಂಬಿಕೆ ಇಲ್ವಾ?

    ನಿಮ್ಮ ಬಗ್ಗೆ ನಿಮಗೇ ನಂಬಿಕೆ ಇಲ್ವಾ?

    That is true for Tamil, Telugu and Hindi also. Much more infact. In Telugu there will be at least 25-30 dubbed films every year from tamil alone. And some 5-10 from Kannada. Know how popular Eega made Sudeep?

    Are you not confident about yourself? Let's all make sure we only watch kannada movies or no movies. Initially it will be chaos but then industry will have to work with it all. Competition bEDa aMdre hEge? sutta mutta china, pakistan ilwa namma vairigaLu? naavu oMdu dEsha aagi mEl bartilva? (Shravan)

    ಏನೇ ಕೂಗಾಡಿದರೂ ಕೋರ್ಟಿನಲ್ಲಿ ವಾದ ನಿಲ್ಲಲ್ಲ

    ಏನೇ ಕೂಗಾಡಿದರೂ ಕೋರ್ಟಿನಲ್ಲಿ ವಾದ ನಿಲ್ಲಲ್ಲ

    ಮಾಡೋದು ವ್ಯಾಪಾರ ಇದರಲ್ಲಿ ಭಾಷೆ ಎಲ್ಲಿಂದ ಬಂತು. ಡಬ್ಬಿಂಗ್ ಬೇಡ ಅನ್ನೋದು mrtpc( Monapoly restrictions and trade practices act ) ಕಾನೂನಿನ ಪ್ರಕಾರ ತಪ್ಪು ಏನೇ ಕೂಗಾಡಿದರು ಕೋರ್ಟಿನಲ್ಲಿ ವಾದ ನಿಲ್ಲಲ್ಲ. (somu)

    ಕನ್ನಡ ಪ್ರೇಕ್ಷಕರು ತೆಲುಗು, ತಮಿಳರಂತೆ ಕುರಿಗಳಲ್ಲ

    ಕನ್ನಡ ಪ್ರೇಕ್ಷಕರು ತೆಲುಗು, ತಮಿಳರಂತೆ ಕುರಿಗಳಲ್ಲ

    ಡಬ್ಬಿಂಗ್ ಬೇಕು ಎನ್ನುತ್ತಿರುವ ನಿರ್ಮಾಪಕರು ಕಡಿಮೆ ದುಡ್ಡಿನಲ್ಲಿ ಲಾಭ ಮಾಡಿಕೊಳ್ಳಬೇಕು ಎಂಬ ಅವಕಾಶವಾದಿಗಳು ಏಕೆಂದೆರೆ ಒಂದು ಚಿತ್ರ ಮಾಡಬೇಕಾದರೆ 3-4 ತಿಂಗಳುಗಳ ಪರಿಶ್ರಮ ಬೇಕಾಗುತ್ತೆ. ಆದರೆ ಡಬ್ಬಿಂಗ್ ಮಾಡಲು 1-2 ವಾರ ಸಾಕು. ಮುಖ್ಯವಾಗಿ ಅವರು ಉದಾಸೀನ ಮಾಡುತ್ತಿರುವ ವಿಷಯವೇನೆಂದರೆ ಕನ್ನಡ ಪ್ರೇಕ್ಷಕರು ತೆಲುಗು, ತಮಿಳು ಪ್ರೇಕ್ಷಕರ ಥರ ಕುರಿಗಳಲ್ಲ. ಚಿತ್ರ ಉತ್ತಮವಾಗಿದ್ದರೆ ಅಷ್ಟೇ ಅವರು ನೋಡುವುದು ಸುಮ್ಮನೆ "ನನ್ನ ಗಂಡನ ಹೆಂಡತಿ" ಅಂತಹ ಕಿತ್ತೋಗಿರೋ ಸಿನಿಮಾಗಳನ್ನು ಮೂಸಿಯೂ ನೋಡಲ್ಲ, ಕನ್ನಡಿಗರು ಅನ್ಯಭಾಷಿಕರ ತರಹ ಭಾಷಾಭಿಮಾನವನ್ನು ತೋರಿಕೆಗೆ ಹೊಂದಿಲ್ಲ. (magadheera)

    ಡಬ್ಬಿಂಗ್ ನಿಂದ ಕನ್ನಡಿಗರಿಗೆ ಯಾವುದೇ ಅನಾನುಕೂಲ ಇಲ್ಲ

    ಡಬ್ಬಿಂಗ್ ನಿಂದ ಕನ್ನಡಿಗರಿಗೆ ಯಾವುದೇ ಅನಾನುಕೂಲ ಇಲ್ಲ

    ಡಬ್ಬಿಂಗ್ ನಿಂದ ಕನ್ನಡ ಜನರಿಗೆ ಯಾವುದೇ ಅನಾನುಕೂಲ ಇಲ್ಲ. ಚಿತ್ರರಂಗಕ್ಕೆ ಮಾತ್ರವೇ ನಷ್ಟ. ಮೊದಲು ಬೇರೆಭಾಷೆಯಿಂದ ಡಬ್ ಆಗಿರೋ ಚಿತ್ರಗಳು ಕರ್ನಾಟಕದ theator ಗಳಲ್ಲಿ ಓಡೋದನ್ನ ನಿಲ್ಲಿಸಲಿ. ಕನ್ನಡದವರು ಅನಿವಾರ್ಯವಾಗಿ ಬೇರೆ ಭಾಷೆಯ ಅಂದರೆ ತಮಿಳು , ತೆಲುಗು, ಹಿಂದಿಯಲ್ಲಿ ಡಬ್ ಆಗಿರೋ ಚಿತ್ರಗಳನ್ನ ನೋಡ್ತಾರೆ. ಆಗ ಕನ್ನಡ ಚಿತ್ರಗಳನ್ನ ಮರೆತು ಬೇರೆ ಭಾಷೆಗಳನ್ನ ಕಲೀತಾರೆ. ಕೇವಲ ಸ್ವಾರ್ಥದಿಂದ ಡಬ್ಬಿಂಗ್ ಬೇಡ ಅನ್ನೋದು ಸೂಕ್ತ ಅಲ್ಲ. ಡಬ್ಬಿಂಗ್ ಬೇಕು ಬೇಡ ಅನ್ನೋದು ಜನರಿಗೆ, ವೀಕ್ಷಕರಿಗೆ ಬಿಡಿ. (raju)

    ಪರಭಾಷೆ ಚಿತ್ರಗಳ ಕಡೆಗೆ ವಾಲಿದ ಪ್ರೇಕ್ಷಕರು

    ಪರಭಾಷೆ ಚಿತ್ರಗಳ ಕಡೆಗೆ ವಾಲಿದ ಪ್ರೇಕ್ಷಕರು

    ಅವ್ರು ಕಣ್ಣ ತೆಗೀತಾರೋ ಬಾಯ್ ತೆಗೀತಾರೋ ಏನೋ ಆಗ್ಲಿ. ಉತ್ತಮ ಚಲನಚಿತ್ರಗಳು ಪ್ರೊಗ್ರಾಮ್ ಗಳು ಸಿಗದೇ ಬಹುತೇಕ ಕನ್ನಡಿಗರು ಪರಭಾಷಾ ಸಿನಿಮಾ, tv ಸೀರಿಯಲ್, ಚಾನೆಲ್ಲುಗಳಿಗೆ ಮೊರೆ ಹೋಗುತ್ತಿರುವುದಂತೂ ನಿಜ.

    When it comes to boons kannadigas can read so many translated, novels, stories, poems and so on, why there is dual policy on dubbing by the government ? (ಯುವ ಕನ್ನಡಿಗ)

    ಕನ್ನಡಿಗರು ಉದ್ಯೋಗ ಕಳೆದುಕೊಳ್ಳುತ್ತಾರೆ.

    ಕನ್ನಡಿಗರು ಉದ್ಯೋಗ ಕಳೆದುಕೊಳ್ಳುತ್ತಾರೆ.

    Kannada cinema market is restricted to karnataka only, if dubbing is implemented there will be very very less theatres for direct kannada cinemas,and lakhs of kannadighas working in kannada cinemas and tv serials will loose jobs,sri yuva kannadigha would you like to see our kannadighas cinema and tv serial workers be job less and his family members hungry,tell me,jai karnataka. (PRAS)

    ಪ್ರಶ್ನೆಯಲ್ಲೇ ಉತ್ತರ ಇದೆ

    ಪ್ರಶ್ನೆಯಲ್ಲೇ ಉತ್ತರ ಇದೆ

    The question you are asking itself has the answer.
    When the market gets competitive there will many shifts, re-alignments and transition. The supporting artists will get into better paying jobs as long as they are talented

    Monopoly kills competition and makes eveyone incompetent and less capable. This exactly what has plagued the Kannada cinema. They should become competent to go to bigger marketFYI best example you have seen in the recent past is the economic liberalization and the new internet as the result of which you and me are able to write here - beware. (ಯುವ ಕನ್ನಡಿಗ)
    ಈಗೆಲ್ಲಾ ಬಿಜಿನೆಸ್ ಮುಖ್ಯ ಭಾಷೆ ಅಲ್ಲ ಗುರು

    ಈಗೆಲ್ಲಾ ಬಿಜಿನೆಸ್ ಮುಖ್ಯ ಭಾಷೆ ಅಲ್ಲ ಗುರು

    ಡಬ್ಬಿಂಗ್ ಬಂದರೆ ಇಲ್ಲಿನ ಕಲಾವಿದರಿಗೆ, ತಂತ್ರಜ್ಞರಿಗೆ, ನಾಟಕ, ಸಿನಿಮಾ, ಧಾರವಾಹಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಭಯ ನಮ್ಮನ್ನು ಕಾಡುತ್ತಿದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಆದರೆ ಡಬ್ಬಿಂಗ್ ಬಂದರೆ ಕನ್ನಡ ಭಾಷೆ ಉಳಿಯುತ್ತೆ. ಇವತ್ತು ಕರ್ನಾಟಕದಲ್ಲಿ ಎಲ್ಲಿ ನೋಡಿದರು ತೆಲಗು ಮಾತಾಡೋರು ಜಾಸ್ತಿ ಅಗತಿದರೆ. ನಮ್ಮ ಹುಬ್ಬಳ್ಳಿಅಲ್ಲಿ ಕೂಡಾ ತೆಲಗು ಗೊತ್ತಿಲದೇ ಇರೋರು ತೆಲಗು ಮಾತಾಡ್ತಾ ಇದಾರೆ ಅಂದ್ರೆ,ಅದ್ಕೆ ತೆಲಗು ಚಿತ್ರಗಳು ತೆಲಗು ಭಾಷೆ ಅಲ್ಲಿ ಬರೋದೆ ಕಾರಣ. ಅದೇ ತೆಲಗು ಚಿತ್ರಗಳು ಕನ್ನಡದಲ್ಲಿ ಬಂದಿದ್ರೆ, ಇವತ್ತು ಯಾವ ನನ್ ಮಗನು ತೆಲಗು ಮಾತಾಡ್ತಾ ಇರಲಿಲ್ಲ. ಎಲ್ಲರೂ ಮುಚ್ಚಕೊಂಡ್ ತೆಲಗು ಚಿತ್ರಗಳನ್ನಾ ಕನ್ನಡ ಭಾಷೆಳೀ ನೋಡಿರೋರು .

    ಈವರಗೆಲ್ಲ ಬಿಸಿನೆಸ್ ಮುಖ್ಯ ಗುರು. ಭಾಷೆ ಅಲ್ಲಾ. ಅವರಾ ಸ್ಟೇಟ್ಮೆಂಟ್ ನೋಡು ಗುರು. ಬರೀ ಕಲಾವಿದರಿಗೆ, ತಂತ್ರಜ್ಞರಿಗೆ, ನಾಟಕ, ಸಿನಿಮಾ, ಧಾರವಾಹಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಭಯ. ಕನ್ನಡ ಭಾಷೆಗೆ ಏನ ಆಗುತ್ತೆ ಅನ್ನೋ ಉಸಿರೇ ಯೆತ್ತಿಲ್ಲಾ. ನಮ್ಮ ಕನಮುಂದೇನೆ ಮರಾಟಿ ಭಾಷೆ ಉದಾರಣೆ ಇದೆ. ಇವತ್ತು ಮಹಾರಾಷ್ಟ್ರ ಅಲ್ಲಿ ಬರೀ ಹಿಂದಿ ಮೂವಿಗಳದೇ ಕಾರುಬಾರು, ಅವರು ಒಂದಾನೊಂದು ಕಾಲದಲ್ಲಿ ಹೀಗೆ ಡಬ್ಬಿಂಗ್ ವಿರೋಧ ಮಾಡಿ, ಈಗ ಮರಾಠಿ ಭಾಷೆ ಚಿತ್ರಗಳಿಗೆ ಚಿತ್ರಮಂದಿರಗಳು ಇಲ್ಲದಂಗೆ ಆಗಿದೆ. ಕನ್ನಡ ಬರಿಯೋದ್ರಲ್ಲಿ ತಪ್ಪಾಗಿದ್ರೆ ಕ್ಹಮಿಸಿ translator ಸರಿ ವರ್ಕ್ ಆಗ್ತಿಲ್ಲ. (Shreekant R S)

    ಯೋಚಿಸಿ ನಿರ್ಧಾರಕ್ಕೆ ಬನ್ನಿ

    ಯೋಚಿಸಿ ನಿರ್ಧಾರಕ್ಕೆ ಬನ್ನಿ

    ಡಬ್ಬಿಂಗ್ ಬೇಕು ಅನ್ನುವ ನಿಮ್ಮ ಹೋರಾಟವನ್ನು ಈ ರೀತಿ ಮಾಡಿ, "ಡಬ್ಬಿಂಗ್ ಬೇಕು ಆದರೆ ಮೂಲ ಭಾಷೆಯಲ್ಲಿ (Original Language ) ಮತ್ತೆ ಕರ್ನಾಟಕ ದಲ್ಲಿ ರಿಲೀಸ್ ಮಾಡಬಾರದು" ಅಂತ ಆಗ ಎಲ್ಲರೂ ಬೆಂಬಲ ನೀಡುತ್ತಾರೆ.

    ಈ ರೀತಿ ನೀವು ಹೋರಾಟ ಮಾಡಿದ್ದರೆ ಡಬ್ಬಿಂಗ್ ಬೇಕು ಅಂತ ಹೇಳುವವರೆ ನಿಮಗೆ ಬೆಂಬಲ ನೀಡಿವುದಿಲ್ಲ. ಹೊರರಾಜ್ಯದವರು ಸಹ ಈ ವಿಷಯದ ಬಗ್ಗೆ ವಿರೋಧ ವ್ಯಕ್ತಪಡಿಸಿ, ಕಾನೂನು ರೀತಿಯ ಹೋರಾಟ ಮಾಡಲು ಮುಂದಾಗುತ್ತಾರೆ. ಪರೀಕ್ಷೆ ಮಾಡಿ ನೋಡಿ... ಆಗ ನಿಮಗೆ ತಿಳಿಯುತ್ತದೆ ನಿಜ ಯಾವುದು ಎಂದು.... ಪ್ರಕಾಶ್ ರೈ ಅವರು ಹೇಳಿದ ಡಬ್ಬಿಂಗ್ ಮಾಫಿಯಾ ಯಾವುದು ಎಂದು ತಿಳಿಯುತ್ತದೆ.

    ದಯವಿಟ್ಟು ನಿಜವಾದ ಕನ್ನಡ ಅಭಿಮಾನಿಗಳು ಈ ಸತ್ಯವನ್ನು ಅರಿತು ನಂತರ ಯಾವುದಕ್ಕೆ ನಿಮ್ಮ ಬೆಂಬಲ ನೀಡಬೇಕೆಂದು ಯೋಚಿಸಿ... ಈ ಹೋರಾಟದಲ್ಲಿ ಮತ್ತೆ ತಪ್ಪು ನಿರ್ಧಾರ ತೆಗೆದುಕೊಂಡರೆ ಮುಂದೆ ಕರ್ನಾಟಕ ಭಾರತದ ಭೂಪಟದಲ್ಲಿ ಇರದೇ ಇರಬಹುದು. ಹೊರರಾಜ್ಯದವರು ನಮಗೆ ಎಲ್ಲಾ ವಿಷಯದಲ್ಲೂ ತೊಂದರೆ ಕೊಡುತ್ತಿದ್ದರೆ ಈಗ ಡಬ್ಬಿಂಗ್ ನ ಮೂಲಕ ಅವರನ್ನು ನಾವು ಮತ್ತೆ ಸ್ವಾಗತಿಸಿದ್ದರೆ ಅವಕಾಶಕೊಟ್ಟರೆ ಸ್ವಾಭಿಮಾನಿ ಕನ್ನಡಿಗರು ಮುಂದೆ ಪರವಾಲಂಬಿ ಕನ್ನಡಿಗರಾಗುವ ಕ್ಷಣಗಳು ದೂರ ಇಲ್ಲ... ಈ ವಿಷಯದಲ್ಲಿ ಎಲ್ಲರೂ ಒಂದಾಗಿ ಹೋರಾಟ ಮಾಡಿದ್ದರೆ ಎಲ್ಲಾರಿಗೂ ತಿಳಿಯುತ್ತದೆ ಕನ್ನಡಿಗರ ಬಲ ಏನು ಎಂದು... ಯೋಚಿಸಿ ನಿರ್ಧಾರಕ್ಕೆ ಬನ್ನಿ.... (sowmya)

    English summary
    Here is our readers comments on dubbing culture in Kannada. Some of our readers strongly opposing dubbing films and some of are soft corner on it. Here is the debate goes.
    Tuesday, January 21, 2014, 18:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X