twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ಎಂಬುದು ಸಂತೆಯ ಸೂಳೆ ಇದ್ದಂತೆ: ಪಾಪು

    By Rajendra
    |

    Dubbing is like prostitute Patil Puttappa
    ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಡಬ್ಬಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ಡಾ.ರಾಜ್ ಕುಮಾರ್ ವೇದಿಕೆ ಮೇಲೆ ಚಲನಚಿತ್ರ ನಿರ್ದೇಶಕ ಎಂ.ಎಸ್.ರಮೇಶ್ ಅವರು ಮಾತನಾಡುತ್ತಾ, ಮೂರು ವರ್ಷದ ಹಿಂದೆ 'ಮಠ' ಗುರುಪ್ರಸಾದ್ ಅವರು ನನ್ನ ಮುಂದೆ ಹೇಳಿದ್ದರು. ಡಬ್ಬಿಂಗ್ ಎಂಬುದು ಗೊಬ್ಬರ ಎಂದು. ಈಗ ಅದು ನಿಮ್ಮ ಪಾಲಿಗೆ ಪಾಯಸ ಹೇಗಾಯಿತು ಸ್ವಾಮಿ.

    ನಿಮ್ಮ ಮಾತಿನ ಮೇಲೆ ನಿಮಗೇ ನಿಗಾ ಇಲ್ವಾ. ನೀವು ಒಂದು ಮಾತು ಆಡಿದಾಗ ಅದರ ಬಗ್ಗೆ ನಿಗಾ ಇರಲಿ. ನೀವು ನಮಗೆ ಬೆಂಬಲಿಸದಿದ್ದರೆ ಪರ್ವಾಗಿಲ್ಲ. ಹಿರಿಯ ಸಾಹಿತಿಗಳಾದಂತಹ ಪಾಟೀಲ ಪುಟ್ಟಪ್ಪನವರು, ಚಂದ್ರಶೇಖರ ಪಾಟೀಲ್ ಅವರು ಬೆಂಬಲ ವ್ಯಕ್ತಪಡಿಸಿದರು.

    ಪಾಪು ಅವರು ಒಂದು ಮಾತನ್ನು ಹೇಳಿದರು. ಡಬ್ಬಿಂಗ್ ಎಂಬುದು ಸಂತೆಯ ಸೂಳೆ ಇದ್ದಂಗೆ. ನಮ್ಮನೆ ಹೆಣ್ಮಕ್ಕಳನ್ನು ಆ ಕಡೆ ತಳ್ಳಬೇಡಿ ಎಂಬಂತಹ ಒಂದು ಮಾತನ್ನು ಇಂದು ಪುಟ್ಟಪ್ಪನವರು ಹೇಳಿದರು. ಇದು ಅವರೇ ಹೇಳಿದ ಮಾತು. ಬೆಳಗ್ಗೆ ಒಂದು ವಾಹಿನಿಯಲ್ಲಿ ಅವರು ಮಾತನಾಡುತ್ತಾ ಹೇಳಿದರು ಎಂದರು.['ಮಠ' ಗುರುಪ್ರಸಾದ್ ಮೇಲೆ ಜಗ್ಗೇಶ್ ಪರೋಕ್ಷ ದಾಳಿ]

    ಶಿವಣ್ಣ ರಾಮನಾದರೆ ಅವರ ತಂದೆ ದಶರಥ
    ಬಳಿಕ ಹಿರಿಯ ನಟಿ ಡಾ.ಲೀಲಾವತಿ ಮಾತನಾಡುತ್ತಾ, ಹಂಸಲೇಖ ಅವರು ಚಾಚೂ ಬಿಡದಂತೆ ಬಹಳ ಚೆನ್ನಾಗಿ ಮಾತನಾಡಿದ್ದಾರೆ. ವಾಟಾಳ್ ನಾಗರಾಜ್, ಸಾರಾ ಗೋವಿಂದು ಅವರು ಎಲ್ಲರೂ ಮಾತನಾಡಿದ್ದಾರೆ. ಈ ಜಾಗದಲ್ಲಿ ದೊಡ್ಡವರು ಬಂದು ನಿಂತು. ಅಭಿಮಾನಿಗಳೇ ಒಂದು ಸಾರಿ ಬಂದು ಕನ್ನಡ ಚಿತ್ರ ನೋಡಿ ಎಂದರೆ ನೋಡುತ್ತಿರಲಿಲ್ಲವೇ ನೀವು. ಖಂಡಿತ ನೋಡುತ್ತಿದ್ರಿ.

    ಶಿವಣ್ಣನಿಗೆ ಪಾಪ ಕೋಪ ಬರಿಸಿ ಮೂರನೇ ಕಣ್ಣು, ನಾಲ್ಕನೇ ಕಣ್ಣು ತೆಗೆಯಲು ಯಾಕೆ ಬಿಡಬೇಕು. ಅವರ ತಂದೆ ದಶರಥನಾಗಿ, ಶಿವಣ್ಣ ರಾಮನಾಗಿ ನೀನು ಕಾಡಿಗೆ ಹೋಗಬೇಕು ಎಂದರೆ ಅವರು ಹೋಗಲು ತೆರಳಿದ್ದರು. ಅದನ್ನು ಅವರು ನಡೆಸಿಕೊಟ್ಟರು. ರಾಮ ಹದಿನಾಲ್ಕು ವರ್ಷ ಕಾಡಿಗೆ ಹೋಗಿದ್ದರೆ ಶಿವಣ್ಣ ಹದಿನಾಲ್ಕು ಗಂಟೆ ಒಳಗೆ ಇಷ್ಟು ಸಭೆ ಸೇರಿಸಿ ನಡೆಸಿಕೊಟ್ರು.

    ತುಂಬಾ ಸಂತೋಷ. ಪಾಪ ಬಿಸಿಲಿನಲ್ಲಿ ಒದ್ದಾಡುತ್ತಿದ್ದೀರಾ. ಭಗವಂತ ನಿಮ್ಮೆಲ್ಲರಿಗೂ ಆರೋಗ್ಯ, ಅಷ್ಟೈಶ್ವರ್ಯಗಳನ್ನು ಕೊಡಲಿ ಎಂದು ಹಾರೈಸಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಹೇಳಿ ತಮ್ಮ ಎರಡು ಮಾತುಗಳನ್ನು ಮುಗಿಸಿದರು. (ಒನ್ಇಂಡಿಯಾ ಕನ್ನಡ)

    English summary
    Writer, veteran journalist and activist Patil Puttappa opposes dubbing culture in Kannada. The writer says dubbing is like prostitute. The actors will participate in the rally from the Mysore Bank Circle to the Dr. Rajkumar podium erected on the Central College grounds on Monday, 27th January, 2014.
    Monday, January 27, 2014, 16:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X