»   » 'ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.!

'ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.!

Posted by:
Subscribe to Filmibeat Kannada

ಕನ್ನಡದಲ್ಲಿ ಡಬ್ಬಿಂಗ್ ಬೇಕೇ.? ಬೇಡವೇ.? ಎಂಬ ಚರ್ಚೆ ಎಲ್ಲೆಲ್ಲೂ ಜೋರಾಗಿ ನಡೆಯುತ್ತಿರುವಾಗಲೇ ಅಜಿತ್ ಅಭಿನಯದ ಬ್ಲಾಕ್ ಬಸ್ಟರ್ ತಮಿಳು ಸಿನಿಮಾ 'ಎನ್ನೈ ಅರಿಂದಾಲ್' ಕನ್ನಡಕ್ಕೆ 'ಸತ್ಯದೇವ್ ಐಪಿಎಸ್' ಎಂಬ ಹೆಸರಿನಲ್ಲಿ ಡಬ್ ಆಗಿದೆ. ಈಗಾಗಲೇ ಟ್ರೈಲರ್ ಕೂಡ ಬಿಡುಗಡೆ ಆಗಿದೆ.[ಸತ್ಯದೇವ್ ಐಪಿಎಸ್ 'ಡಬ್ಬಿಂಗ್' ಚಿತ್ರದ ಟ್ರೈಲರ್ ನೋಡಿ]

ಇದನ್ನು ಕಂಡು ನಟ ಜಗ್ಗೇಶ್ ಸಿಡಿದೆದ್ದಿದ್ದಾರೆ. ''ಕನ್ನಡದ ಹೆಸರಿನಲ್ಲಿ ಅನಾಚಾರ ನಡೆಯುತ್ತಿದೆ'' ಅಂತ 'ಡಬ್ಬಿಂಗ್' ಕುರಿತು ನವರಸ ನಾಯಕ ಜಗ್ಗೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಮುಂದೆ ಓದಿ....

ಡಬ್ಬಿಂಗ್ ವಿರುದ್ಧ ಗುಡುಗಿದ ನಟ ಜಗ್ಗೇಶ್

ಡಬ್ಬಿಂಗ್ ವಿರುದ್ಧ ಗುಡುಗಿದ ನಟ ಜಗ್ಗೇಶ್

''ಕನ್ನಡಕ್ಕೆ ಡಬ್ ಆಗಿರುವ 'ಸತ್ಯದೇವ್ ಐ.ಪಿ.ಎಸ್' ಯಾಕೆ ರಿಲೀಸ್ ಆಗುತ್ತಿದೆ.? ಇದರ ಬಗ್ಗೆ ಗಮನ ಹರಿಸಿ'' ಅಂತ ರತೀಶ್ ಕುಮಾರ್ ಎಂಬುವರು ಹೇಳಿದ್ದಕ್ಕೆ ನಟ ಜಗ್ಗೇಶ್ ಪ್ರತಿಕ್ರಿಯೆ ಕೊಟ್ಟಿದ್ದು ಹೀಗೆ....

ಕನ್ನಡದಲ್ಲಿ ಗಂಡುನಟರಿಲ್ಲವೇ.?

ಕನ್ನಡದಲ್ಲಿ ಗಂಡುನಟರಿಲ್ಲವೇ.?

''ಕನ್ನಡದ ಹೆಸರಲ್ಲಿ ಅನಾಚಾರ.! ಇದನ್ನ ಮಾಡಲು 40 ಲಕ್ಷ ಇನಾಮ್ ಪರರಾಜ್ಯದಿಂದ ಪಡೆದ ಮಾಹಿತಿ ಇದೆ.! ಆದಷ್ಟು ಬೇಗ ಹೊರಬಂದು ಬೆತ್ತಲಾಗುತ್ತಾರೆ.! ವೆಭಿಚಾರಿಗಳು.! ಕನ್ನಡದಲ್ಲಿ ಗಂಡುನಟರಿಲ್ಲವೇ.!'' ಅಂತ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.[ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಲಿ- ಟ್ವೀಟ್ ಅಭಿಯಾನ]

ನಮ್ಮ ಚಿತ್ರ ಅಲ್ಲಿ ಬೇಡ ಯಾಕೆ.?

ನಮ್ಮ ಚಿತ್ರ ಅಲ್ಲಿ ಬೇಡ ಯಾಕೆ.?

''ನಮ್ಮ ಕನ್ನಡ ಚಿತ್ರ ಪರರಾಜ್ಯದಲ್ಲಿ ಬಿಡುಗಡೆ ಮಾಡುವ ಗಂಡಸರಿದ್ದಾರಾ ಕೇಳಿ.. ಕಂಡವರ ಮಲ ಹೊರಲು ಹೊರಟಿರುವ ಮಂದಿಗೆ.! ನಮ್ಮಲ್ಲಿ ಅವರ ಚಿತ್ರ ಓಕೆ.! ನಮ್ಮ ಚಿತ್ರ ಅಲ್ಲಿ ಬೇಡ ಯಾಕೆ.?'' ಎಂದು ಟ್ವೀಟ್ ಮಾಡಿ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಬ್ಬಿಂಗ್ ನಿಲ್ಲಿಸಲು ಯತ್ನಿಸುತ್ತೇನೆ

ಡಬ್ಬಿಂಗ್ ನಿಲ್ಲಿಸಲು ಯತ್ನಿಸುತ್ತೇನೆ

''ಸಾಧ್ಯ ಆದಷ್ಟು ಕನ್ನಡಿಗನಾಗಿ ಡಬ್ಬಿಂಗ್ ನಿಲ್ಲಿಸಲು ಯತ್ನಿಸುವೆ.. ಯಾವ ನಿಷ್ಠೂರಕ್ಕೂ ಮಣಿಯೋಲ್ಲ.! ನೋಡೋಣ ಯತ್ನ ಮಾಡುವೆವು.. ಕೋಟಿಮಂದಿಗಿಂತ ಪ್ರೀತಿಸುವ ಕೆಲವು ಮಂದಿ ಕನ್ನಡಿಗ ಸಾಕು.!'' - ಜಗ್ಗೇಶ್

ನಮ್ಮ ಭಾಷೆ ನಮಗೆ ದೇವರು

ನಮ್ಮ ಭಾಷೆ ನಮಗೆ ದೇವರು

''ಸಮುದ್ರ ಮಂಥನ ಆದಾಗ ದೇವ-ದಾನವ ಯುದ್ಧದಲ್ಲಿ ದೇವನೇ ಗೆದ್ದದ್ದು.. ನಮ್ಮ ಭಾಷೆ ನಮ್ಮ ದೇವರು'' - ಜಗ್ಗೇಶ್

ಬೇಕಾದರೆ ಹೋರಾಡಿ..

ಬೇಕಾದರೆ ಹೋರಾಡಿ..

''ಇಂದು ಸಿನಿಮಾ, ನಾಳೆ ನಮ್ಮ ನೆಲ, ನಾಡಿದ್ದು ನಮ್ಮ ಯುವಕರ ಕೆಲಸ.! ಬಿಟ್ಟರೆ ನಮ್ಮ ಹೂಳುವ ಜಾಗವೂ ಕೇಳುತ್ತಾರೆ. ಬೇಕಾದರೆ ಹೋರಾಡಿ.! ಬೇಡವಾದರೆ ಬಿಟ್ಹಾಕಿ'' ಅಂತ ಜಗ್ಗೇಶ್ ಡಬ್ಬಿಂಗ್ ವಿರುದ್ಧ ಸಿಡಿದೆದ್ದಿದ್ದಾರೆ.

English summary
Kannada Actor Jaggesh has taken his twitter account to express anger over Dubbing in Kannada Film Industry.
Please Wait while comments are loading...

Kannada Photos

Go to : More Photos