»   » ಡಬ್ಬಿಂಗ್ ಬೆಂಬಲಿಗರಿಗೆ ಆನೆಬಲ: ವಾಣಿಜ್ಯ ಮಂಡಳಿಗೆ ಮುಖಭಂಗ

ಡಬ್ಬಿಂಗ್ ಬೆಂಬಲಿಗರಿಗೆ ಆನೆಬಲ: ವಾಣಿಜ್ಯ ಮಂಡಳಿಗೆ ಮುಖಭಂಗ

Posted by:
Subscribe to Filmibeat Kannada

ಕನ್ನಡದಲ್ಲಿ ಡಬ್ಬಿಂಗ್ ವಿರೋಧಿಸುತ್ತಿರುವವರಿಗೆ ತೀವ್ರ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಡಬ್ಬಿಂಗ್ ನಿಷೇಧ ಕಾನೂನು ಬಾಹಿರ ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ತನ್ನ ಆದೇಶದಲ್ಲಿ ತಿಳಿಸಿದೆ.

ಇದಲ್ಲದೇ, ಡಬ್ಬಿಂಗ್‌ ವಿರೋಧಿಸುತ್ತಿರುವ KFCC (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ) , ಟಿವಿ ಒಕ್ಕೂಟ ಮತ್ತು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಗಳನ್ನು ಸಿಸಿಐ ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ದಂಡ ಕೂಡಾ ವಿಧಿಸಿದೆ. (ಡಬ್ಬಿಂಗ್ ಮಂಡಳಿ ಅಧ್ಯಕ್ಷರಿಗೆ ಜೀವ ಬೆದರಿಕೆ)

ಕನ್ನಡ ಗ್ರಾಹಕರ ಕೂಟ ಮತ್ತು ಗಣೇಶ್‌ ಚೇತನ್‌ ಎನ್ನುವವರು ಸಲ್ಲಿಸಿದ ಅರ್ಜಿ ಸಂಬಂಧಿಸಿದ ವಿಚಾರಣೆ ನಡೆಸಿದ ಅಶೋಕ್ ಚಾವ್ಲಾ ನೇತೃತ್ವದ ಐದು ಸದಸ್ಯರ ಪೀಠ, ಸೋಮವಾರ (ಜುಲೈ 27) ದಂದು ಈ ಆದೇಶ ಹೊರಡಿಸಿದೆ. ['ಸಿದ್ದರಾಮಯ್ಯ ಅವರೇ, ಡಬ್ಬಿಂಗ್ ನಿಷೇಧ ತೆರವು ಮಾಡಿ']

ಸ್ಪರ್ಧಾ ನಿಯಮ ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ಸ್ಪರ್ಧಾತ್ಮಕ ಆಯೋಗ ಮೂರು ಮಂಡಳಿಗಳಿಗೆ ಸೇರಿ ಒಟ್ಟಿ ಇಪ್ಪತ್ತು ಲಕ್ಷ ರೂಪಾಯಿ ದಂಡ ವಿಧಿಸಿದೆ. (ನೋಡ್ತಾ ಇರಿ ಇನ್ನು ಡಬ್ಬಿಂಗ್ ತಡೆಯೋಕಾಗಲ್ಲ)

ಕರ್ನಾಟಕ ಚಲನಚಿತ್ರ ಮಂಡಳಿ, ಕರ್ನಾಟಕ ಟಿವಿ ಅಸೋಸಿಯೇಷನ್ ಮತ್ತು ಕರ್ನಾಟಕ ನಿರ್ಮಾಪಕರ ಅಸೋಸಿಯೇಷನಿಗೆ ಸಿಸಿಐ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.

ಸಿಸಿಐ ನೀಡಿದ ತೀರ್ಪಿನ ಪ್ರಮುಖಾಂಶಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಜನರ ತೀರ್ಮಾನ

ಡಬ್ಬಿಂಗ್ ಸಿನಿಮಾ ಅಥವಾ ಧಾರವಾಹಿಯನ್ನು ನೋಡುವುದು, ಬಿಡುವುದು ಜನರ ವಿವೇಚನೆಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರ ಮೂಗು ತೂರಿಸುವಂತಿಲ್ಲ. ಅಲ್ಲದೇ ರಾಜ್ಯದಲ್ಲಿ ಕರ್ನಾಟಕ ಸರಕಾರ ಡಬ್ಬಿಂಗ್ ಅನ್ನು ನಿಷೇಧಿಸಿಲ್ಲ.

ಒಪ್ಪುವಂತಹ ತರ್ಕವೇ ಅಲ್ಲ

ಪರಭಾಷಾ ಸಿನಿಮಾ ಅಥವಾ ಧಾರವಾಹಿಗಳಿಂದ ಕನ್ನಡ ಸೊರಗುತ್ತಿದೆ ಎನ್ನುವ ವಾದ ಸತ್ಯಕ್ಕೆ ದೂರವಾದದ್ದು, ಇದಕ್ಕೆ ನಮ್ಮ ಒಪ್ಪಿಗೆಯಿಲ್ಲ. KFCC ಅಥವಾ ಇತರ ಮಂಡಳಿಗಳು ಕನ್ನಡ ಭಾಷೆಯ ಸ್ವಯಂಘೋಷಿತ ರಕ್ಷಕರಲ್ಲ.

ಅನುಮತಿ ನೀಡದ ಧಾರವಾಹಿಗಳು

1962ರಿಂದಲೇ ಡಬ್ಬಿಂಗ್ ಅನಧಿಕೃತವಾಗಿ ಕನ್ನಡದಲ್ಲಿ ಜಾರಿಯಲ್ಲಿದೆ. ಟಿಪ್ಪು ಸುಲ್ತಾನ್, ರಾಮಾಯಣ, ಝೂನ್ಸಿರಾಣಿ, ಸತ್ಯಮೇವ ಜಯತೆ ಮುಂತಾದ ಜನಪ್ರಿಯ ಟಿವಿ ಧಾರವಾಹಿಗಳಿಗೆ ಡಬ್ಬಿಂಗ್ ಅವಕಾಶ ನೀಡದೇ ಇದ್ದದ್ದು ತಪ್ಪು.

ಚಲನಚಿತ್ರ ಮಂಡಳಿ ಮುಂದೇನು ಮಾಡಬಹುದು?

ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ತೀರ್ಪು ಪ್ರಕಟವಾದ ಅರವತ್ತು ದಿನಗಳೊಳಗೆ, ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಾಧಿಕರಣದಲ್ಲಿ ಸಿಸಿಐ ನೀಡಿದ ತೀರ್ಪನ್ನು ಪ್ರಶ್ನಿಸುವ ಅವಕಾಶವಿರುತ್ತದೆ.

ಫಿಲಂ ಚೇಂಬರ್ ಅಧ್ಯಕ್ಷ

ಫಿಲಂ ಚೇಂಬರ್‌ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಲಿದೆ. ನಾವು ಈ ವಿಚಾರದಲ್ಲಿ ತಟಸ್ಥ ನಿಲುವು ತಾಳಲಿದ್ದೇವೆ ಎಂದು ಕೆಎಫ್ ಸಿಸಿ ಅಧ್ಯಕ್ಷ ಥಾಮಸ್ ಡಿಸೋಜ ಸಿಸಿಐ ಆದೇಶದ ಬಗ್ಗೆ ಹೇಳಿಕೆ ನೀಡಿದ್ದಾರೆ.

English summary
Dubbing ban in Karnataka is against law. In a decision by the Competition Commission of India (CCI) also fined Rs. 20 Lac to three chamber of commerce including KFCC.
Please Wait while comments are loading...

Kannada Photos

Go to : More Photos