»   » ಡಬ್ಬಿಂಗ್ ನಲ್ಲಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಬಿಜಿ

ಡಬ್ಬಿಂಗ್ ನಲ್ಲಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಬಿಜಿ

Posted by:
Subscribe to Filmibeat Kannada

'ಗೋಧಿ ಬಣ್ಣ ಸಾಧಾರಣ ಮೈಕಟ್ಟು'...ಟೈಟಲ್ಲೇ ಒಂಥರಾ ವಿಚಿತ್ರ. ಕೇಳಿದ ಕೂಡಲೆ ಆಕಾಶವಾಣಿ ಕೇಂದ್ರದ ನಾಪತ್ತೆಯಾದವರ ಸುದ್ದಿ ನೆನಪಾಗುತ್ತೆ ಅಲ್ವಾ. ಆದ್ರೀಗ ನಾವು ಮಾತನಾಡುತ್ತಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಬೇರೆ.

ಅನಂತ್ ನಾಗ್ ಹಾಗೂ ರಕ್ಷಿತ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು'. ಯೋಗರಾಜ್ ಭಟ್ಟರ 'ವಾಸ್ತು ಪ್ರಕಾರ' ಚಿತ್ರದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಾಣದ ರಕ್ಷಿತ್ ಶೆಟ್ಟಿ ಈ ಚಿತ್ರದ ಮೂಲಕ ಸಕ್ಸಸ್ ರೇಸ್ ನಲ್ಲಿದ್ದಾರೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಅಡ್ಡದಿಂದ ಬಂದಿರುವ ಲೇಟೆಸ್ಟ್ ಮಾಹಿತಿ ಪ್ರಕಾರ, ಚಿತ್ರ ಈಗ ಡಬ್ಬಿಂಗ್ ಹಂತ ತಲುಪಿದೆ.


Dubbing Work Begins For 'Godhi Banna Sadharna Mykattu'

ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅಪ್ಪನ ಪಾತ್ರದಲ್ಲಿ ಅನಂತ್ ನಾಗ್ ಅಭಿನಯಿಸಿದ್ದಾರೆ. ಹೆಸರೇ ಹೇಳುವಂತೆ ಇದು ಕಳೆದು ಹೋದ ವ್ಯಕ್ತಿಯೊಬ್ಬನ ಬಗ್ಗೆ ದೂರದರ್ಶನ ಆಕಾಶವಾಣಿ ಕೇಂದ್ರಗಳಲ್ಲಿ ಪ್ರಕಟಿಸುವ ಜಾಹೀರಾತಿನ ಸುತ್ತ ಹೆಣೆದಿರುವ ಚಿತ್ರಕಥೆ.


ಈ ಮೊದಲು ಬಿಡುಗಡೆ ಆಗಿದ್ದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಪೋಸ್ಟರ್, ಪ್ರೋಮೋ, ಟ್ರೈಲರ್ ಗಳು ಭಾರಿ ಸದ್ದು ಮಾಡಿದೆ. ಇದೀಗ ಶೂಟಿಂಗ್ ಮುಗಿಸಿರುವ ಚಿತ್ರತಂಡ ಡಬ್ಬಿಂಗ್ ಕಾರ್ಯಕ್ಕೆ ಚಾಲನೆ ನೀಡಿದೆ.


Dubbing Work Begins For 'Godhi Banna Sadharna Mykattu'

ಗಿರೀಶ್ ಕಾಸರವಳ್ಳಿ ಅವರ ಜೊತೆ 'ಗುಲಾಬಿ ಟಾಕೀಸ್', ಜೇಕಬ್ ವರ್ಗೀಸ್ ಜೊತೆ 'ಪೃಥ್ವಿ' ಹಾಗೂ 'ಸವಾರಿ' ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದ ಅನುಭವವಿರುವ ಹೇಮಂತ್ ರಾವ್ ಈ ಚಿತ್ರದ ನಿರ್ದೇಶಕ.


'ಲೂಸಿಯಾ' ಬೆಡಗಿ ಶೃತಿ ಹರಿಹರನ್ ಈ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಬ್ಬಿಂಗ್ ಮುಗಿದ ಮೇಲೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ತೆರೆಮೇಲೆ ರಾರಾಜಿಸಲಿದೆ.

English summary
Kannada Movie 'Godhi Banna Sadharna Mykattu' has given kick start to Dubbing and the movie is gearing up for its release. The movie is directed by Hemanth Rao.
Please Wait while comments are loading...

Kannada Photos

Go to : More Photos