»   » ಕಡೆಗೂ 'ಕೆಂಡಸಂಪಿಗೆ'ಗೆ ಸಿಕ್ತು ಬಿಡುಗಡೆ ಭಾಗ್ಯ

ಕಡೆಗೂ 'ಕೆಂಡಸಂಪಿಗೆ'ಗೆ ಸಿಕ್ತು ಬಿಡುಗಡೆ ಭಾಗ್ಯ

Posted by:
Subscribe to Filmibeat Kannada

ದುನಿಯಾ ಸೂರಿ ನಿರ್ದೇಶನದ 'ಕೆಂಡಸಂಪಿಗೆ ಪಾರ್ಟ್-2 ಗಿಣಿಮರಿ ಕೇಸ್' ಮುಂದಿನ ತಿಂಗಳು ಅಂದ್ರೆ ಸೆಪ್ಟೆಂಬರ್ 4 ನೇ ತಾರೀಖು ರಾಜ್ಯಾದಂತ್ಯ ರಿಲೀಸ್ ಆಗುತ್ತಿದೆ.

ಎಲ್ಲವೂ ಸೂರಿ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟೊತ್ತಿಗಾಗಲೇ 'ಕೆಂಡಸಂಪಿಗೆ' ಬೆಳ್ಳಿತೆರೆ ಮೇಲೆ ರಾರಾಜಿಸಬೇಕಿತ್ತು. ಆದ್ರೆ, ಅನಿವಾರ್ಯ ಕಾರಣಗಳಿಂದ ಚಿತ್ರ ಪೋಸ್ಟ್ ಪೋನ್ ಆಗುತ್ತಲೇ ಇತ್ತು. [ದುನಿಯಾ ಸೂರಿ 'ಕೆಂಡಸಂಪಿಗೆ'ಯಲ್ಲಿ ಅಂಥದ್ದೇನಿದೆ..?]

ಇದೀಗ ಆರ್.ಎಸ್.ಪ್ರೊಡಕ್ಷನ್ಸ್ ಬ್ಯಾನರ್ ನ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ 'ಕೆಂಡಸಂಪಿಗೆ' ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡು, ಸೆಪ್ಟೆಂಬರ್ 4 ರಂದು ಸಿನಿಮಾ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ. [ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚಿಟ್ ಪಡೆದ ಸೂರಿ 'ಕೆಂಡಸಂಪಿಗೆ']

kendasampige

ಈಗಾಗಲೇ ಸೆನ್ಸಾರ್ ಅಂಗಳದಿಂದ U/A ಸರ್ಟಿಫಿಕೇಟ್ ಪಡೆದು 'ಕೆಂಡಸಂಪಿಗೆ' ಪಾಸ್ ಆಗಿದೆ. ಪಕ್ಕಾ ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿರುವ 'ಕೆಂಡಸಂಪಿಗೆ' ಚಿತ್ರದಲ್ಲಿ ಸಂತೋಷ್ ರೇವಾ ಮತ್ತು ಶ್ವೇತಾ ಕಾಮತ್ ಅಭಿನಯಿಸಿದ್ದಾರೆ. ಇಬ್ಬರಿಗೂ 'ಕೆಂಡಸಂಪಿಗೆ' ಮೊದಲ ಸಾಹಸ. ಉಳಿದಂತೆ ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ, ಚಂದ್ರಿಕಾ ತಾರಾಗಣದಲ್ಲಿದ್ದಾರೆ. [ಸೂರಿ ಕಾರು ಚಾಲಕ 'ಕೆಂಡಸಂಪಿಗೆ' ಹೀರೋ ಆದ ಕಥೆ]

ಒಂದು ಪ್ರೇಮಕಥೆ ಮತ್ತು ಕೊಲೆಯ ವಿಚಾರಣೆ ಸುತ್ತ ನಡೆಯುವ 7 ದಿನಗಳ ಜರ್ನಿ ಈ 'ಕೆಂಡಸಂಪಿಗೆ'. ಮುಂದಿನ ತಿಂಗಳು ರಿಲೀಸ್ ಆಗುತ್ತಿರುವ 'ಕೆಂಡಸಂಪಿಗೆ' ಚಿತ್ರವನ್ನ ನೋಡುವುದಕ್ಕೆ ನೀವು ರೆಡಿಯಾಗಿ.

English summary
Duniya Soori directorial Kannada Movie 'Kendasampige' is all set to release on September 4th. R.S.Productions has acquired the distribution rights of the movie.
Please Wait while comments are loading...

Kannada Photos

Go to : More Photos