»   » ಜೂ. ಎನ್.ಟಿ.ಆರ್ ಎದುರು ತೊಡೆತಟ್ಟಿ ನಿಲ್ತಾರೆ ದುನಿಯಾ ವಿಜಯ್

ಜೂ. ಎನ್.ಟಿ.ಆರ್ ಎದುರು ತೊಡೆತಟ್ಟಿ ನಿಲ್ತಾರೆ ದುನಿಯಾ ವಿಜಯ್

Posted by:
Subscribe to Filmibeat Kannada

ಶೀರ್ಷಿಕೆ ನೋಡಿ ಇದೇನಪ್ಪಾ ಆಯ್ತು ಅಂತದ್ದು. ಸಡೆನ್ ಆಗಿ ದುನಿಯಾ ವಿಜಯ್, ಟಾಲಿವುಡ್ ನಟ ಜೂನಿಯರ್ ಎನ್.ಟಿ.ಆರ್ ಮುಂದೆ ತೊಡೆ ತಟ್ಟಿ ನಿಲ್ಲುವಂತದ್ದು. ಏನಾದ್ರು ಕ್ಲ್ಯಾಶ್ ಆಗಿರಬಹುದಾ...? ಚಾನ್ಸೇ ಇಲ್ಲಾ...

ಯಾಕಂದ್ರೆ ಜೂನಿಯರ್ ಎನ್.ಟಿ.ಆರ್ ಗೆ ಕನ್ನಡ, ಕನ್ನಡಿಗರು ಅಂದ್ರೆ ಎಲ್ಲಿಲ್ಲದ ಅಭಿಮಾನ. ಅವರ ಅಮ್ಮನು ಸಹ ಕನ್ನಡದವರು. ಮೂಲತಃ ಕುಂದಾಪುರದವರು. ಜೂ. ಎನ್.ಟಿ.ಆರ್ ಗೆ ಕನ್ನಡ ಅಭಿಮಾನ ಹೇಗಿದೆ ಎಂಬುದಕ್ಕೆ ಅವರು ಇತ್ತೀಚೆಗೆ ನಡೆದ'ಐಫಾ' ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸನ್ನಿವೇ‍ಶವೇ ಸಾಕ್ಷಿ.[ದುನಿಯಾ ವಿಜಯ್ ಕಡೆಯಿಂದ ಬಂದ ಲೇಟೆಸ್ಟ್ ಸುದ್ದಿ ಇದು..]

ಕನ್ನಡದ ಬಗ್ಗೆ ಅಪಾರ ಅಭಿಮಾನ ಇಟ್ಟೊಕೊಂಡ ಜೂನಿಯರ್ ಎನ್.ಟಿ.ಆರ್ ಎದುರು ನಟ ದುನಿಯಾ ವಿಜಯ್ ತೊಡೆತಟ್ಟಲು ಕಾರಣ ಏನಿರಬಹುದು? ಎಂದು ಏನೇನೋ ತಲೆಯೊಳಗೆ ಹುಳ ಬಿಟ್ಟುಕೊಳ್ಳುವ ಮುನ್ನ ಮುಂದೆ ಓದಿ...

ಜೂ. ಎನ್.ಟಿ.ಆರ್ ಎದುರು ದುನಿಯಾ ವಿಜಯ್

ಜೂ. ಎನ್.ಟಿ.ಆರ್ ಎದುರು ದುನಿಯಾ ವಿಜಯ್

ಸ್ಯಾಂಡಲ್ ವುಡ್ ನ ಬ್ಲಾಕ್ ಕೋಬ್ರಾ ದುನಿಯಾ ವಿಜಯ್, ಈಗ ಜೂನಿಯರ್ ಎನ್.ಟಿ.ಆರ್ ಗೆ ಸವಾಲ್ ಹಾಕಿ ತೊಡೆತಟ್ಟಿ ನಿಲ್ಲಲು ರೆಡಿಯಾಗಿರುವುದು, ಜೂನಿಯರ್ ಎನ್.ಟಿ.ಆರ್ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಷ್ಟೆ.

ವಿಲನ್ ಆದ ಬ್ಲಾಕ್ ಕೋಬ್ರಾ

ವಿಲನ್ ಆದ ಬ್ಲಾಕ್ ಕೋಬ್ರಾ

ದುನಿಯಾ ವಿಜಯ್, ಜೂ. ಎನ್.ಟಿ.ಆರ್ ಹೊಸ ಸಿನಿಮಾದಲ್ಲಿ ವಿಲನ್ ಗೆಟಪ್ ತೊಡಲಿದ್ದಾರೆ. ದುನಿಯಾ ವಿಜಯ್ ತಾವು ನಟನಾಗಿ ಪ್ರಮೋಷನ್ ಪಡೆಯುವ ಮೊದಲು ಸ್ಯಾಂಡಲ್ ವುಡ್ ನಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಾ ಬಹಳ ಕಷ್ಟಪಟ್ಟವರು. ಆದ್ರೀಗ ಬೆಳ್ಳಿತೆರೆಯ ಆಕ್ಷನ್ ಕಿಂಗ್ ಆಗಿರುವ ನಟ ಮತ್ತೊಮ್ಮೆ ಖಳನಾಯಕನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. ಅದು ಟಾಲಿವುಡ್ ಸಿನಿ ಪ್ರಿಯರ 'ಜೂನಿಯರ್ ಟೈಗರ್' ಎಂದೇ ಹೆಸರಾಗಿರುವ ಜೂನಿಯರ್ ಎನ್.ಟಿ.ಆರ್ ಎದುರು.

ಯಾವುದು ಆ ಸಿನಿಮಾ?

ಯಾವುದು ಆ ಸಿನಿಮಾ?

ಜೂನಿಯರ್ ಎನ್ ಟಿಆರ್ ಹೊಸ ಸಿನಿಮಾ 'ಜೈ ಲವಕುಶ'. ಜೂನಿಯರ್ ಎನ್.ಟಿ.ಆರ್ ಈ ಸಿನಿಮಾಗೆ ಶ್ರೀರಾಮನವಮಿ ದಿನದಂದು ಮುಹೂರ್ತ ನೆರವೇರಿಸಿ ಚಿತ್ರದ ಮೋಷನ್ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವನ್ನು ನಟ ಕಲ್ಯಾಣ್ ರಾಮ್ ನಿರ್ಮಾಣ ಮಾಡುತ್ತಿದ್ದು, ಬಾಬಿ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ.

ವಿಜಯ್ ಗೆ ಅವಕಾಶ ಬಂದಿದ್ದು ಹೇಗೆ?

ವಿಜಯ್ ಗೆ ಅವಕಾಶ ಬಂದಿದ್ದು ಹೇಗೆ?

ನಟ ವಿಜಯ್ ಆಕ್ಷನ್ ಮತ್ತು ಸ್ಟಂಟ್ಸ್ ನೋಡಿ ಸ್ಫೂರ್ತಿ ಗೊಂಡ ಜೂನಿಯರ್ ಎನ್.ಟಿ.ಆರ್, ತಮ್ಮ ಹೊಸ ಚಿತ್ರಕ್ಕಾಗಿ ವಿಜಯ್ ಗೆ ಅವರೇ ನೇರವಾಗಿ ಕರೆ ಮಾಡಿ ಅಪ್ರೋಚ್ ಮಾಡಿದರಂತೆ. ತೆಲುಗು ಚಿತ್ರರಂಗದ ಖ್ಯಾತ ನಟ ಕರೆ ಮಾಡಿದ ಕಾರಣ ವಿಜಯ್ ತಕ್ಷಣ ಒಪ್ಪಿಕೊಂಡಿದ್ದಾರೆ.

'ಜೈ ಲವಕುಶ'ಗೆ ವಿಜಯ್ ಕಾಲ್ ಶೀಟ್

'ಜೈ ಲವಕುಶ'ಗೆ ವಿಜಯ್ ಕಾಲ್ ಶೀಟ್

ಜೂನಿಯರ್ ಎನ್.ಟಿ.ಆರ್ 'ಜೈ ಲವಕುಶ' ಚಿತ್ರಕ್ಕಾಗಿ ದುನಿಯಾ ವಿಜಯ್ 15 ದಿನಗಳ ಕಾಲ್ ಶೀಟ್ ಕೊಟ್ಟಿದ್ದು, ಇದು ವಿಜಯ್ ಅವರ ಮೊದಲ ಟಾಲಿವುಡ್ ಸಿನಿಮಾ ಆಗಲಿದೆ.

ಜೂನಿಯರ್ ಎನ್.ಟಿ.ಆರ್ 'ಸಿಂಹಾದ್ರಿ' ರಿಮೇಕ್ ನಲ್ಲಿ ವಿಜಯ್

ಜೂನಿಯರ್ ಎನ್.ಟಿ.ಆರ್ 'ಸಿಂಹಾದ್ರಿ' ರಿಮೇಕ್ ನಲ್ಲಿ ವಿಜಯ್

ಅಂದಹಾಗೆ ಈ ಹಿಂದೆ ದುನಿಯಾ ವಿಜಯ್, ಜೂನಿಯರ್ ಎನ್.ಟಿ.ಆರ್ ತೆಲುಗು ಸಿನಿಮಾ 'ಸಿಂಹಾದ್ರಿ' ಚಿತ್ರದ ಕನ್ನಡ ರಿಮೇಕ್ ಚಿತ್ರ 'ಕಂಠೀರವ' ಚಿತ್ರದಲ್ಲಿ ಅಭನಯಿಸಿದ್ದರು.

ವಿಜಯ್ 'ಮಾಸ್ತಿಗುಡಿ' ತೆರೆಗೆ ಬರಲು ಸಿದ್ಧ

ವಿಜಯ್ 'ಮಾಸ್ತಿಗುಡಿ' ತೆರೆಗೆ ಬರಲು ಸಿದ್ಧ

ವಿಜಯ್ ಈಗ ಟಾಲಿವುಡ್ ಗೆ ಎಂಟ್ರಿ ಕೊಡಲು ರೆಡಿ ಆಗುತ್ತಿರುವಾಗಲೇ, ಅವರ ಬಹು ನಿರೀಕ್ಷಿತ ಸಿನಿಮಾ 'ಮಾಸ್ತಿಗುಡಿ' ತೆರೆಗೆ ಅಪ್ಪಳಿಸಲು ಸಿದ್ಧವಾಗಿದ್ದು, ಬಿಡುಗಡೆ ನಿರೀಕ್ಷೆಯಲ್ಲೂ ಇದ್ದಾರೆ.

English summary
Actor Duniya Vijay will be making his Tollyood debut as a villain in Jr NTR’s new film Jai Lava Kusa. The film which is directed by Bobby will see Jr NTR in triple role.
Please Wait while comments are loading...

Kannada Photos

Go to : More Photos