»   » 'ಡವ್' ನೋಡಿ ಶಭಾಷ್ ಎಂದ ಕರಿಯ ವಿಜಯ್

'ಡವ್' ನೋಡಿ ಶಭಾಷ್ ಎಂದ ಕರಿಯ ವಿಜಯ್

Posted by:
Subscribe to Filmibeat Kannada

ಇತ್ತೀಚೆಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಹೊಸಬರ ಚಿತ್ರಗಳನ್ನು ನೋಡಿ ಅವರ ನಟನೆಯನ್ನು ಮೆಚ್ಚಿ ಹೊಗಳುವುದು ಒಂಥರಾ ಟ್ರೆಂಡ್ ಆದಂತಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ರಂಗಿತರಂಗ' ನೋಡಿ ಭೇಷ್ ಅಂದರೆ, ಶಿವರಾಜ್ ಕುಮಾರ್, ಧ್ರುವ ಸರ್ಜಾ ಹಾಗೂ ಇನ್ನುಳಿದ ಸ್ಯಾಂಡಲ್ ವುಡ್ ತಾರೆಯರು ಸೂರಿ ಅವರ 'ಕೆಂಡಸಂಪಿಗೆ' ಪರಿಮಳವನ್ನು ಇಷ್ಟಪಟ್ಟಿದ್ದಾರೆ. ಅಲ್ಲದೇ ದರ್ಶನ್, ಯಶ್ 'ನಾನು ಅವನಲ್ಲ ಅವಳಿಗೆ' ಮನಸೋತಿದ್ದಾರೆ.ಇದೀಗ ಇವರ ಸಾಲಿಗೆ ಹೊಸ ಸೇರ್ಪಡೆ ನಮ್ಮ ಕರಿಯ ದುನಿಯಾ ವಿಜಿ. ಹೌದು ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಿ ಅವರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರೊಂದಿಗೆ ಭಾನುವಾರದಂದು (ಅಕ್ಟೋಬರ್ 11) ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ವೀಕ್ಷಕರೊಂದಿಗೆ ತಾವು ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನಿರ್ಮಾಪಕ ಸಾ.ರಾ.ಗೋವಿಂದು ಅವರ ಪುತ್ರ ಅನೂಪ್ ಸಾ.ರಾ.ಗೋವಿಂದು ಅಭಿನಯದ ಚೊಚ್ಚಲ ಚಿತ್ರ 'ಡವ್' ಮ್ಯಾಟ್ನಿ ಶೋ ನೋಡಿದ್ದಾರೆ.[ಸಂತು 'ಡವ್'ಗೆ ವಿಮರ್ಶಕರು ಕ್ಲೀನ್ ಬೌಲ್ಡ್ ಆದ್ರಾ?]


ಚಿತ್ರ ನೋಡಿ ಮೆಚ್ಚಿರುವ ದುನಿಯಾ ವಿಜಿ ಅವರು ಅನೂಪ್ ನಟನೆಯನ್ನು ಹೊಗಳಿ ಅವರ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.


ಸ್ಯಾಂಡಲ್ ವುಡ್ ನ ನಿರ್ಮಾಪಕ ಸಾ.ರಾ.ಗೋವಿಂದು ಅವರ ಪುತ್ರ ಅನೂಪ್ ಸಾ.ರಾ.ಗೋವಿಂದು ಅಭಿನಯದ ಚೊಚ್ಚಲ ಚಿತ್ರ 'ಡವ್' ಕಳೆದ ಶುಕ್ರವಾರ (ಅಕ್ಟೋಬರ್ 9) ತೆರೆ ಕಂಡು ಯುವಕರ ಮನತಟ್ಟಿದೆ.['ಮಾಸ್ ಹೀರೋ' ಅಂತ ಅಂಬರೀಶ್ ಕರೆದದ್ದು ಯಾರಿಗೆ?]ವರ್ಷಗಳಿಂದ ಬಿಡುಗಡೆಯಾಗಲು ಹಿಂದೇಟು ಹಾಕುತ್ತಿದ್ದ 'ಡವ್' ಕೊನೆಗೂ ಹಾರಾಡಿದೆ. ನಿರ್ದೇಶಕ ಅಲೆಮಾರಿ ಸಂತು ಆಕ್ಷನ್-ಕಟ್ ಹೇಳಿರುವ ಚಿತ್ರದಲ್ಲಿ ಸಾಲಿಗ್ರಾಮದ ಹುಡುಗ ಅನೂಪ್ ಗೆ ನಾಯಕಿಯಾಗಿ ಅದಿತಿ ಮಿಂಚಿದ್ದರು.[ಎಲ್ಲೋ ನನ್ 'ಡವ್' ಟೀಸರ್ ಔಟ್ ಕಣ್ಲಾ]


ಬಿ.ಕೆ ಶ್ರೀನಿವಾಸ್ ಬಂಡವಾಳ ಹೂಡಿರುವ ಚಿತ್ರ ವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆದುಕೊಂಡಿದೆ. ಹರೆಯದ ಯುವಕರ ಪ್ರೀತಿ-ಪ್ರೇಮದ ಕಥೆಗೆ ಹೊಸ ಟ್ವಿಸ್ಟ್ ಕೊಟ್ಟಿರುವ ನಿರ್ದೇಶಕರು ಯುವಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

English summary
Actor 'Duniya' Vijay will be watching Anoop Sa Ra Govindu starrer 'Dove' on Sunday (October 11) afternoon. Vijay will be watching the film during the matinee show at the Nartaki theater along with the public.
Please Wait while comments are loading...

Kannada Photos

Go to : More Photos