»   » ಸುದೀಪ್ ನನ್ನ ಹೀರೋ ಎಂದರು 'ಈಗ' ಸಮಂತಾ

ಸುದೀಪ್ ನನ್ನ ಹೀರೋ ಎಂದರು 'ಈಗ' ಸಮಂತಾ

Posted By:
Subscribe to Filmibeat Kannada
<ul id="pagination-digg"><li class="next"><a href="/news/samantha-telugu-eega-sudeep-ss-rajamouli-066564.html">Next »</a></li></ul>

ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ತೆಲುಗು 'ಈಗ' ಚಿತ್ರದ ಬಗ್ಗೆ ಎಲ್ಲೆಲ್ಲೂ ಪ್ರಶಂಸೆಗಳ ಸುರಿಮಳೆಯೇ ಆಗುತ್ತಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ನಾಯಕ 'ನಾಣಿ'ಯನ್ನು ಮೀರಿದ ಖಳನಾಯಕ ಪಾತ್ರದಲ್ಲಿನ ಸುದೀಪ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಆಶ್ಚರ್ಯದ ಸಂಗತಿ ಎಂದರೆ ಈ ಚಿತ್ರದ ನಾಯಕಿ ಸಮಂತಾ "ಸುದೀಪ್ ನನ್ನ ಹೀರೋ" ಎಂದಿದ್ದಾರೆ. ಬಿಡುಗಡೆಯ ನಂತರ ಕೊಟ್ಟ ಎಲ್ಲಾ ಸಂದರ್ಶನಗಳಲ್ಲಿ ಕಿಚ್ಚ ಸುದೀಪ್ ಅವರನ್ನು ಬಹಳಷ್ಟು ಹೊಗಳಿರುವ ಆ ಚಿತ್ರದ ನಾಯಕಿ ಸಮಂತಾ, ಸುದೀಪ್ ಅವರು ನನ್ನ ಹೀರೋ ಎಂದಿರುವುದು ಸಹಜ ಎನ್ನುವಷ್ಟೇ ಕುತೂಹಲವನ್ನೂ ಕೆರಳಿಸಿದೆ. ಕಾರಣ, ಚಿತ್ರ ನೋಡಿದ ಪ್ರೇಕ್ಷಕರಿಗೆ ಉಲ್ಟಾ ಹೇಳಿಕೆಯಂತೆ ಭಾಸವಾಗುತ್ತಿದೆ.

ಈಗ ಚಿತ್ರದ ತೆರೆಯಲ್ಲಿನ ಪಾತ್ರದ ಪ್ರಕಾರ, ನಟಿ ಸಮಂತಾ ನಾಯಕನಟ ನಾಣಿಯನ್ನು 'ಲವ್' ಮಾಡುತ್ತಾರೆ. ನಂತರವೂ ಅಷ್ಟೇ, ತನ್ನ ಪ್ರಿಯತಮನನ್ನು ಕೊಂದಿದ್ದು ಸುದೀಪ್ ಎಂದು ಗೊತ್ತಾಗುತ್ತಿದ್ದಂತೆ ಸಮಂತಾ, ಸುದೀಪ್ ವಿರುದ್ಧ ತಿರುಗಿಬೀಳುತ್ತಾರೆ. ಚಿತ್ರದ ಕೊನೆಯವರೆಗೂ ಸಮಂತಾ ಸುದೀಪ್ ವಿರುದ್ಧವಾಗಿಯೇ ನಡೆಯುತ್ತಾರೆ. ಕೊನೆಗೂ, ಸುದೀಪ್ ಸಮಂತಾರನ್ನು ಲವ್ ಮಾಡಲು ವಿಫಲರಾಗುತ್ತಾರೆ.

ಆದರೆ, ತೆರೆಯಲ್ಲಿ ಸುದೀಪ್ ಅಮೋಘ ನಟನೆ ನೋಡಿದ ಸಮಂತಾ ಸುದೀಪ್ ಅವರನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಅದು ಎಷ್ಟರಮಟ್ಟಿಗೆ ಎಂದರೆ ಸುದೀಪ್ ನನ್ನ ಹೀರೋ ಎಂಬಷ್ಟು. ಬಹಳಷ್ಟು ನಾಯಕರ ಜೊತೆ ನಾಯಕಿಯಾಗಿ ಅಭಿನಯಸಿದ ಹಾಗೂ ಈ ವರ್ಷ ಬಿಡುಗಡೆಯಾದ ಐದು ಸೂಪರ್ ಹಿಟ್ ಚಿತ್ರಗಳ ನಾಯಕಿ ಸಮಂತಾರಿಂದ ಈ ಮಾತು ಬಂದಿರುವುದು ನಿಜಕ್ಕೂ ಗ್ರೇಟ್.

ಈ ಚಿತ್ರದ ನಟನೆ ಬಗ್ಗೆ ಕಿಚ್ಚ ಸುದೀಪ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಸೌತ್ ಇಂಡಿಯಾ ಸೂಪರ್ ಸ್ಟಾರ್ ಗಳಾದ ರಜನಿಕಾಂತ್, ಪ್ರಿನ್ಸ್ ಮಹೇಶ್ ಬಾಬು, ನಾಗಾರ್ಜುನಾ, ಸೂರ್ಯ, ಕಾರ್ತಿ ಹೀಗೆ ಎಲ್ಲ ಘಟಾನುಘಟಿಗಳು ಸುದೀಪ್ ನಟನೆಯನ್ನು ಮೆಚ್ಚಿ ಮಾತನಾಡಿದ್ದಾರೆ, ಹೊಗಳಿದ್ದಾರೆ. ಇದೀಗ ನಾಯಕಿ ಸಮಂತಾ ಹೊಗಳಿಕೆಯೂ ಬಂದಿದೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/samantha-telugu-eega-sudeep-ss-rajamouli-066564.html">Next »</a></li></ul>
English summary
Actress Samantha could not stop praising Sudeep performance in SS Rajamouli movie Eega. On her Twitter page, the lucky star calls him her hero.&#13; &#13;
Please Wait while comments are loading...