twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಶಾಲೆಗಳ ನೆರವಿಗೆ 'ಎರಡನೇ ಸಲ' ಚಿತ್ರತಂಡ

    By Suneel
    |

    ಬೆಳ್ಳಿತೆರೆಯ ಸ್ಪೆಷಲ್ ಸ್ಟಾರ್ ಧನಂಜಯ್ ಅಭಿನಯದ 'ಎರಡನೇ ಸಲ' ನಾಳೆ(ಮಾರ್ಚ್ 3) ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ತಾಯಿ-ಮಗನ ಬಾಂಧವ್ಯದ ಈ ಸಿನಿಮಾ ನೋಡಲು ಬಹುಮುಖ್ಯ ಕಾರಣವೊಂದಿದೆ.['ಎರಡನೇ ಸಲ' ಟ್ರೈಲರ್ ನೋಡಿದ್ರೆ, ಇನ್ಮುಂದೆ 'ಕಾಫಿ'ನೇ ಕುಡಿಯಲ್ಲಾ!]

    ಒಂದು ಕಡೆ 'ಡೈರೆಕ್ಟರ್ ಸ್ಪೆಷಲ್', 'ಮಠ', 'ಎದ್ದೇಳು ಮಂಜುನಾಥ' ಅಂತಹ ಡಿಫರೆಂಟ್ ಸಿನಿಮಾ ಗಳಿಗೆ ಆಕ್ಷನ್ ಕಟ್ ಹೇಳಿರುವ ಗುರುಪ್ರಸಾದ್ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಸಿನಿಮಾ ನೋಡಬೇಕು ಎಂದುಕೊಂಡರೆ, ಇನ್ನೊಂದು ಕಡೆ ಸಂಭಾಷಣೆ, ಸಖತ್ ಕಾಮಿಡಿ, ಡಬಲ್ ಮೀನಿಂಗ್ ಡೈಲಾಗ್ ಗಳು ಇರುತ್ತವೆ ಎಂಬುದರಿಂದ 'ಎರಡನೇ ಸಲ' ಚಿತ್ರ ನೋಡಬಕು ಎಂದು ನೀವೆಲ್ಲಾ ಪ್ಲಾನ್ ಮಾಡಿರುತ್ತೀರಿ. ಆದರೆ ಇವೆರಡು ಕಾರಣಗಳಿಗಿಂತ ಇಂಪಾರ್ಟೆಂಟ್ ರೀಸನ್ ಒಂದಿದೆ.

    'Eradane Sala' makers will spend their revenue for kannada schools

    ಅದೇನಂದ್ರೆ 'ಎರಡನೇ ಸಲ' ಸಿನಿಮಾದ ಆದಾಯವನ್ನು ರಾಜ್ಯದ 25 ಕನ್ನಡ ಶಾಲೆಗಳ ಅಭಿವೃದ್ದಿಗೆ ವಿನಿಯೋಗಿಸಲಾಗುತ್ತದೆಯಂತೆ. ಕಿರಿಕ್ ಕೀರ್ತಿ ಜತೆ ಕೈ ಜೋಡಿಸಿ 'ಎರಡನೇ ಸಲ' ಚಿತ್ರತಂಡ ಕನ್ನಡ ಶಾಲೆಗಳ ಡೆವಲಪ್ ಮೆಂಟ್ ಮಾಡುವ ಮಹತ್ತರ ನಿರ್ಧಾರವನ್ನು ಕೈಗೊಂಡಿಯಂತೆ. ಈ ಮಾಹಿತಿ ಇರುವ ಪೋಸ್ಟರ್ 'ಎರಡನೇ ಸಲ' ಚಿತ್ರದ ಅಫೀಶಿಯಲ್ ಟ್ವಿಟರ್ ಪೇಜ್ ನಲ್ಲಿ ಅಪ್ ಲೋಡ್ ಆಗಿದೆ.[ಈ ವಾರ ಹಾಟ್ & ಸ್ವೀಟ್ ಆಗಿರುವ 3 ಸಿನಿಮಾಗಳು ಬಿಡುಗಡೆ]

    'Eradane Sala' makers will spend their revenue for kannada schools

    ಸಕ್ಸಸ್ ಆದ ಸಿನಿಮಾ ತಂಡದವರೆಲ್ಲಾ ಈ ರೀತಿ ತಮ್ಮ ಲಾಭದಲ್ಲಿ ಕನ್ನಡ ಶಾಲೆಗಳಿಗೆ, ಬಡವರ ಮಕ್ಕಳಿಗೆ ಸಹಾಯ ಮಾಡಲಿ, ಕನ್ನಡ ಚಿತ್ರರಂಗ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಹಾಗೂ ಇತರೆ ಚಿತ್ರರಂಗಗಳಿಗೆ ಮಾದರಿ ಆಗಲಿ.

    English summary
    Guruprasad Directorial 'Eradane Sala' makers will spend their film revenue for 25 kannada school development.
    Thursday, March 2, 2017, 19:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X