»   » ಎಕ್ಸ್ ಕ್ಲೂಸಿವ್ : ಪುನೀತ್ ’ದೊಡ್ಮನೆ ಹುಡುಗ’ ವರ್ಕಿಂಗ್ ಸ್ಟಿಲ್ಸ್

ಎಕ್ಸ್ ಕ್ಲೂಸಿವ್ : ಪುನೀತ್ ’ದೊಡ್ಮನೆ ಹುಡುಗ’ ವರ್ಕಿಂಗ್ ಸ್ಟಿಲ್ಸ್

Posted by:
Subscribe to Filmibeat Kannada

ಚಿತ್ರೀಕರಣದ ಹಂತದಲ್ಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರ ಭಾರೀ ಸುದ್ದಿ ಮಾಡುತ್ತಿದೆ.

ದುನಿಯಾ ಸೂರಿ ನಿರ್ದೇಶನದಲ್ಲಿ ಪುನೀತ್ ನಟಿಸುತ್ತಿರುವ ಮೂರನೇ ಚಿತ್ರವಿದು. ಈ ಹಿಂದೆ ರಾಜ್ ಸ್ವಂತ ಬ್ಯಾನರಿನಲ್ಲಿ ಬಂದ ಸೂಪರ್ ಹಿಟ್ ಜಾಕಿ ಮತ್ತು ಅಣ್ಣಾಬಾಂಡ್ ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದರು. (ಕಂಬಿ ಎಣಿಸುತ್ತಿದ್ದಾರೆ ಪವರ್ ಸ್ಟಾರ್)

ಪವನ್ ಒಡೆಯರ್ ನಿರ್ದೇಶನದ 'ರಣವಿಕ್ರಮ' ಚಿತ್ರದ ನಂತರ ಪುನೀತ್, ರಾಧಿಕಾ ಪಂಡಿತ್, ಸುಮಲತಾ, ಭಾರತಿ ವಿಷ್ಣುವರ್ಧನ್ ಪ್ರಮುಖ ಭೂಮಿಕೆಯಲ್ಲಿರುವ ದೊಡ್ಮನೆ ಹುಡುಗ ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ.

ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಕಮ್ ವಸತಿ ಸಚಿವ ಅಂಬರೀಶ್ ನಟಿಸುತ್ತಿರುವುದು ಚಿತ್ರದ ಮತ್ತೊಂದು ಹೈಲೆಟ್ಸ್.

ಚಿತ್ರದ ಕೆಲವೊಂದು ವರ್ಕಿಂಗ್ ಸ್ಟಿಲ್ಸ್ ಅನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮೂವರು ಮಹಿಳೆಯರ ಜೊತೆ ಅಪ್ಪು

ಪುನೀತ್, ಸುಮಲತಾ, ಭಾರತಿ ವಿಷ್ಣುವರ್ಧನ್, ರಾಧಿಕಾ ಪಂಡಿತ್ ಹಾಸ್ಯ ಸಂಭಾಷಣೆಯ ಸ್ಟಿಲ್ಸ್.

ನಿರ್ದೇಶಕ

ನಿರ್ದೇಶಕ ಸೂರಿ ಜೊತೆ ಸುಮಲತಾ ಮತ್ತು ಭಾರತಿ ವಿಷ್ಣುವರ್ಧನ್. ದೊಡ್ಮನೆ ಹುಡುಗದ ಚಿತ್ರದ ನಿರ್ಮಾಪಕರು ಎಂ ಗೋವಿಂದು.

ಭಾರತಿ ಮೇಡಂ

ನಾಯಕಿ ರಾಧಿಕಾ ಪಂಡಿತ್ ತಾಯಿ ಪಾತ್ರದಲ್ಲಿ ನಟಿಸುತ್ತಿರುವ ಭಾರತಿ ವಿಷ್ಣುವರ್ಧನ್ ಜೊತೆ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ.

ಸುಮಲತಾ

ಪುನೀತ್ ರಾಜಕುಮಾರ್ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುಮಲತಾ, ನಿರ್ದೇಶಕ ಸೂರಿ ಮತ್ತು ಸಾಹಸ ನಿರ್ದೇಶಕ ರವಿವರ್ಮ ಜೊತೆ.

ಪುನೀತ್ ರಾಜಕುಮಾರ್

ಶೂಟಿಂಗಿಗೆ ಪುನೀತ್, ಭಾರತಿ, ಸುಮಲತಾ ರೆಡಿ. ದೊಡ್ಮನೆ ಹುಡುಗ ಚಿತ್ರಕ್ಕೆ ಕತ್ತರಿ ಪ್ರಯೋಗದ ಜವಾಬ್ದಾರಿ ದೀಪು ಕುಮಾರ್ ಅವರದ್ದು.

ದೊಡ್ಮನೆ ಹುಡುಗ

ಸ್ಟಿಲ್ಸ್ ನಲ್ಲಿ ಭಾರತಿ ವಿಷ್ಣುವರ್ಧನ್ ಮತ್ತು ಪುನೀತ್ ರಾಜಕುಮಾರ್. ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ.

ಮೂವರು ಮಹಿಳೆಯರು

ಸುಮಲತಾ,ಭಾರತಿ ವಿಷ್ಣು, ರಾಧಿಕಾ ಪಂಡಿತ್ ಅಲ್ಲದೇ ಚಿತ್ರದಲ್ಲಿ ಚಿಕ್ಕಣ್ಣ, ರೆಬೆಲ್ ಸ್ಟಾರ್ ಅಂಬರೀಶ್, ಶ್ರೀನಿವಾಸ್ ಮೂರ್ತಿ, ರವಿಶಂಕರ್ ನಟಿಸುತ್ತಿದ್ದಾರೆ.

English summary
Exclusive working stills of Puneeth Rajkumar starer, Duniya Soori directed Dodmane Huduga movie.
Please Wait while comments are loading...

Kannada Photos

Go to : More Photos