twitter
    For Quick Alerts
    ALLOW NOTIFICATIONS  
    For Daily Alerts

    ದುನಿಯಾ ವಿಜಿ-ನಾಗರತ್ನ ದಾಂಪತ್ಯಕ್ಕೆ ತಾರ್ಕಿಕ ಅಂತ್ಯ

    By Harshitha
    |

    ದುನಿಯಾ ವಿಜಿ ವಿವಾಹ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದಿಂದ ವಿಚಾರಣೆ ನಡೆಸುತ್ತಿರುವ ಕೌಟುಂಬಿಕ ನ್ಯಾಯಾಲಯ ಇಂದು ಮಧ್ಯಂತರ ಆದೇಶ ಹೊರಡಿಸಿದೆ. ದುನಿಯಾ ವಿಜಿ ಪತ್ನಿ ನಾಗರತ್ನ ಕೋರಿದ್ದ ಜೀವನಾಂಶ ಅರ್ಜಿಯನ್ನ ವಿಚಾರಣೆ ನಡೆಸಿದ ಕೋರ್ಟ್, ಮೂರು ಷರತ್ತುಗಳನ್ನ ವಿಧಿಸಿ, ಇಬ್ಬರ ದಾಂಪತ್ಯಕ್ಕೆ ತಾರ್ಕಿಕ ಅಂತ್ಯ ನೀಡಿದೆ.

    ಕೋರ್ಟ್ ಗೆ ಜೀವನಾಂಶ ಕೋರಿದ್ದ ನಾಗರತ್ನ
    ಯಾವುದೇ ಆದಾಯವಿಲ್ಲದಿರುವ ಕಾರಣ ಮತ್ತು ಬ್ಯಾಂಕ್ ಲೋನ್ ಪಡೆದುಕೊಂಡಿರುವ ಸಲುವಾಗಿ ತಿಂಗಳಿಗೆ 60 ಸಾವಿರ ರೂಪಾಯಿ ಜೀವನಾಂಶ ನೀಡಬೇಕು ಅಂತ ಕೋರ್ಟ್ ನಲ್ಲಿ ನಾಗರತ್ನ ಮೊರೆಯಿಟ್ಟಿದ್ದರು. [ವಿಚ್ಛೇದನಕ್ಕೆ ದುನಿಯಾ ವಿಜಿ ಕೊಟ್ಟ 25 ಕಾರಣಗಳು]

    ಮಕ್ಕಳನ್ನು ಭೇಟಿ ಮಾಡುವುಕ್ಕೆ ಅವಕಾಶ

    ಜೀವನಾಂಶದ ಜೊತೆಗೆ ತಮ್ಮ ಮೂವರು ಮಕ್ಕಳನ್ನ ಭೇಟಿಮಾಡುವುದಕ್ಕು ಅವಕಾಶ ಕಲ್ಪಿಸಬೇಕು ಅಂತ ವಿಜಿ ಪತ್ನಿ ನಾಗರತ್ನ ಕೋರಿದ್ದರು.


    ಜೀವನಾಂಶ ಅರ್ಜಿ ಇತ್ಯರ್ಥ

    ನಾಗರತ್ನ ಸಲ್ಲಿಸಿದ ಅರ್ಜಿಯನ್ನು ಇಂದು ನಡೆದ ವಿಚಾರಣೆಯಲ್ಲಿ ಎತ್ತಿಹಿಡಿದ ಕೌಟುಂಬಿಕ ನ್ಯಾಯಾಲಯ, ಮಧ್ಯಂತರ ಆದೇಶವನ್ನು ಹೊರಡಿಸಿದೆ. ತಿಂಗಳಿಗೆ 60 ಸಾವಿರ ಬದಲು 30 ಸಾವಿರ ರೂಪಾಯಿಯನ್ನ ನಾಗರತ್ನಗೆ ವಿಜಿ ಜೀವನಾಂಶ ನೀಡಬೇಕು ಅಂತ ಕೋರ್ಟ್ ಆದೇಶಿಸಿದೆ.

    ತಿಂಗಳಿಗೆ 2 ಬಾರಿ ಮಕ್ಕಳನ್ನ ನೋಡಬಹುದು
    ಮೊದ ಮೊದಲು, ಅಮ್ಮನೊಟ್ಟಿಗೆ ಇರುತ್ತಿದ್ದ ಮೂವರು ಮಕ್ಕಳು ಇಂದು ಅಪ್ಪನೊಟ್ಟಿಗೆ ಇರಲು ಇಚ್ಛಿಸಿರುವುದರಿಂದ ನ್ಯಾಯಾಲಯ ತಿಂಗಳಿಗೆ ಎರಡು ಬಾರಿ ಮಾತ್ರ ಅಮ್ಮನನ್ನ ಭೇಟಿ ಮಾಡಲು ಅವಕಾಶ ಕಲ್ಪಿಸಿದೆ.

    ತಿಂಗಳ ಮೊದಲ ಮಂಗಳವಾರ ಮತ್ತು ಕೊನೆಯ ಮಂಗಳವಾರ, ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಮಕ್ಕಳನ್ನ ಭೇಟಿ ಮಾಡುವ ಅವಕಾಶವನ್ನು ಕಲ್ಪಿಸಿ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ.

    ಜೀವನಾಂಶ ನೀಡಲು ನಕಾರ
    ನಾಗರತ್ನಗೆ ಜೀವನಾಂಶ ನೀಡುವುದಿಲ್ಲ ಅಂತ ಈ ಹಿಂದೆ ಕೋರ್ಟ್ ನಲ್ಲಿ ವಿಜಿ ಹೇಳಿದ್ದರು. ನಾಗರತ್ನ ಹೆಸರಲ್ಲಿ ಸ್ವಂತ ಮನೆಯಿದ್ದು, ಬಾಡಿಗೆ ಕೂಡ ಆದಾಯವಾಗಿ ಬರುವ ಕಾರಣ ಜೀವನಾಂಶ ನೀಡಲು ತಿರಸ್ಕರಿಸಿದ್ದರು. [ದುನಿಯಾ ವಿಜಯ್, ನಾಗರತ್ನ ಸಂಧಾನ ವಿಫಲ]

    ಆದರೆ ಇಂದು ವಾದ-ವಿವಾದಗಳನ್ನ ಪರಿಗಣಿಸಿ, ಪ್ರಕರಣ ಇತ್ಯರ್ಥವಾಗುವವರೆಗೆ ನಾಗರತ್ನಗೆ ಜೀವನಾಂಶ ನೀಡಿ, ಇಬ್ಬರ ದಾಂಪತ್ಯಕ್ಕೆ ಕೋರ್ಟ್ ಅಧಿಕೃತ ತೆರೆ ಎಳೆದಿದೆ.

    duniya vijay family

    ಮೂರು ‍ಷರತ್ತುಗಳನ್ನು ವಿಧಿಸಿದ ಕೋರ್ಟ್
    ಜೀವನಾಂಶ ನೀಡುವುದರ ಜೊತೆಗೆ ನಾಗರತ್ನಗೆ ಕೋರ್ಟ್ ಮೂರು ಷರತ್ತುಗಳನ್ನೂ ವಿಧಿಸಿದೆ.
    ಪ್ರಕರಣ ಇತ್ಯರ್ಥವಾಗುವವರೆಗೆ ವಿಜಿ ವಿರುದ್ಧ ನಾಗರತ್ನ ಯಾವುದೇ ಮಾಧ್ಯಮಗಳಲ್ಲಿ ಹೇಳಿಕೆಗಳನ್ನ ನೀಡುವಂತಿಲ್ಲ. ವಿಜಿ ಮನೆಯಲ್ಲಿ ಹೋಗುವಂತಿಲ್ಲ ಮತ್ತು ಅವರ ಮನೆಯಲ್ಲಿ ಗಲಾಟೆ ನಡೆಸುವಂತಿಲ್ಲ ಅಂತ ಅದೇಶ ನೀಡಿ, ಮುಂದಿನ ತಿಂಗಳಿಗೆ ವಿಚಾರಣೆಯನ್ನ ಮುಂದೂಡಿದೆ.

    ''ನನಗೆ ನನ್ನ ಅಪ್ಪ-ಅಮ್ಮನೇ ಮುಖ್ಯ, ನನ್ನ ತಂದೆ-ತಾಯಿಯನ್ನ ಪತ್ನಿ ನಾಗರತ್ನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ, ನಾಗರತ್ನಗೆ ದುಡ್ಡೇ ಮುಖ್ಯ'' ಅಂತ ಮಾಧ್ಯಮಗಳ ಮುಂದೆ ನಾಗರತ್ನ ಉಟ್ಟ ಸೀರೆ ಒಡವೆಗಳ ಫೋಟೋವನ್ನ ಮುಂದಿಟ್ಟ ದುನಿಯಾ ವಿಜಿ, ವಿಚ್ಛೇದನ ಪಡೆಯುವುದಕ್ಕೆ ಕೋರ್ಟ್ ಮೆಟ್ಟಿಲೇರಿದ್ದರು.

    ಇತ್ತ, ''ವಿಜಿ ಇನ್ನೊಂದು ಮದುವೆ ಮಾಡಿಕೊಂಡಿದ್ದಾರೆ. ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅವರೇನೇ ಮಾಡಿದರೂ ನನಗೆ ಅವರು ಬೇಕು. ವಿಚ್ಛೇದನ ನೀಡುವುದಿಲ್ಲ'' ಅಂತಿದ್ದ ನಾಗರತ್ನ ಇದೀಗ ಅನಿವಾರ್ಯವಾಗಿ ತಿಂಗಳಿಗೊಮ್ಮೆ ಕೋರ್ಟ್ ಅಲೆಯುತ್ತಿರುವುದಲ್ಲದೇ ಜೀವನಾಂಶಕ್ಕಾಗಿ ಅಂಗಲಾಚುವ ಪರಿಸ್ಥಿತಿ ಎದುರಾಗಿದೆ.

    English summary
    Family Court on November 15th passed an interim Order in Duniya Vijay's Divorce case. As per the court order, Duniya Vijay's wife Nagaratna will be getting Rs.30,000 per month as alimony and gets chance to meet her children twice a month.
    Sunday, November 16, 2014, 12:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X