»   » ಸಾಹಿತಿ ಬರಗೂರು ಅವರಿಗೆ ವಾಣಿಜ್ಯ ಮಂಡಳಿಯಿಂದ ಸನ್ಮಾನ

ಸಾಹಿತಿ ಬರಗೂರು ಅವರಿಗೆ ವಾಣಿಜ್ಯ ಮಂಡಳಿಯಿಂದ ಸನ್ಮಾನ

Subscribe to Filmibeat Kannada

82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪನವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಗೌರವವಿಸಲಾಗಿದೆ.

ಇಂದು ಬೆಳಿಗ್ಗೆ ಶಿವಾನಂದ ವೃತ್ತದಲ್ಲಿರುವ ವಾಣಿಜ್ಯ ಮಂಡಳಿ ಕಛೇರಿಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು, ವಿತರಕ ಕೆ.ವಿ ಚಂದ್ರಶೇಖರ್, ನಿರ್ಮಾಪಕ ಎನ್ ಎಂ ಸುರೇಶ್ ಹಾಗೂ ವಾಣಿಜ್ಯ ಮಂಡಳಿಯ ಪದಾದಿಕಾರಿಗಳು ಭಾಗಿಯಾಗಿದ್ದರು.

Film Chamber Honored to Dr Baraguru Ramachandrappa

ಈ ವೇಳೆ ಡಾ.ಬರಗೂರು ರಾಮಚಂದ್ರಪ್ಪನವರಿಗೆ ವಾಣಿಜ್ಯ ಮಂಡಳಿ ವತಿಯಿಂದ ಬೆಳ್ಳಿತಟ್ಟೆ ನೀಡಿ ಗೌರವಿಸಲಾಯಿತು. ಈ ಬಾರಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಚಿತ್ರರಂಗದ ಬಗ್ಗೆ ಚರ್ಚಿಸಲು ಮುಖ್ಯ ವೇದಿಕೆ ಕಲ್ಪಿಸಿಕೊಡಬೇಕಾಗಿ ವಾಣಿಜ್ಯ ಮಂಡಳಿಯ ಪರವಾಗಿ ಮನವಿ ಮಾಡಲಾಯಿತು.

82ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಡಿಸೆಂಬರ್ 2 ರಿಂದ 4 ರ ವರೆಗೂ ರಾಯಚೂರಿನಲ್ಲಿ ನಡೆಯಲಿದೆ.

English summary
KFCC has felicitated Dr.Baraguru Ramachandrappa today (October 24th) for being President of 82th Kannada Sahitya Sammelana.
Please Wait while comments are loading...

Kannada Photos

Go to : More Photos