»   » ನಿರ್ಮಾಪಕ ಬಷೀದ್ ಗೆ ಷರತ್ತುಬದ್ಧ ಜಾಮೀನು

ನಿರ್ಮಾಪಕ ಬಷೀದ್ ಗೆ ಷರತ್ತುಬದ್ಧ ಜಾಮೀನು

Posted by:
Subscribe to Filmibeat Kannada

ಕನ್ನಡ ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ ಕೆ.ಬಷೀದ್ ಅವರಿಗೆ ಜಾಮೀನು ಮಂಜೂರಾಗಿದೆ. 'ಬೆಂಕಿ ಬಿರುಗಾಳಿ' ಚಿತ್ರದ ಕೆಲವು ದೃಶ್ಯಗಳನ್ನು ತಿರುಚಿ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ಅವರಿಗೆ 8ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಜಾಮೀನಿಗೆ ವಿಧಿಸಿರುವ ಷರತ್ತುಗಳು ಹೀಗಿವೆ. ಪೊಲೀಸರ ಅನುಮತಿ ಪಡೆಯದೆ ಅವರು ನಗರದಿಂದ ಹೊರಹೋಗುವಂತಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಸಾಕ್ಷಿಗಳನ್ನು ನಾಶಪಡಿಸುವಂತಿಲ್ಲ. ರು.1 ಲಕ್ಷ ಮೊತ್ತದ ಬಾಂಡ್ ಪಡೆದು ಅವರಿಗೆ ಜಾಮೀನು ನೀಡಲಾಗಿದೆ.

'ಬೆಂಕಿ ಬಿರುಗಾಳಿ' ಚಿತ್ರದ ದೃಶ್ಯಗಳನ್ನು ತಿರುಚಿ ಅವನ್ನು ಯೂಟ್ಯೂಬ್ ಗೆ ಹಾಕಿ ತಮ್ಮ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನಟಿ ರಿಷಿಕಾ ಸಿಂಗ್ ಏ.28ರಂದು ಸಂಜಯನಗರ ಪೊಲೀಸರಿಗೆ ದೂರು ನೀಡಿದ್ದರು.

ಅದಾದ ಬಳಿಕ ಬಷೀದ್ ತಲೆಮರೆಸಿಕೊಂಡಿದ್ದರು. ಬುಧವಾರ (ಮೇ.15) ಅವರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದಾರೆ. ಬಷೀದ್ ವಿರುದ್ಧ ಪ್ರಾಣ ಬೆದರಿಕೆ, ಮಹಿಳೆಯ ಗೌರವಕ್ಕೆ ಧಕ್ಕೆ, ಮಾಹಿತಿ ತಂತ್ರಜ್ಞಾನದ ದುರುಪಯೋಗ ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್)

English summary
Kannada film Producer SK Basheed gets conditional bail. Actress Rishika Singh lodged a complaint on with Sanjaynagar police, accusing director-producer Basheed of threatening her and uploading explicit scenes of her on the Internet.
Please Wait while comments are loading...

Kannada Photos

Go to : More Photos