»   » 'ತಿಥಿ' ಸ್ಟಾರ್ 'ಗಡ್ಡಪ್ಪ'ನಿಗೆ ಪ್ರಶಸ್ತಿ ಪ್ರದಾನ ಮಾಡಿದ ಫಿಲ್ಮಿಬೀಟ್ ಕನ್ನಡ

'ತಿಥಿ' ಸ್ಟಾರ್ 'ಗಡ್ಡಪ್ಪ'ನಿಗೆ ಪ್ರಶಸ್ತಿ ಪ್ರದಾನ ಮಾಡಿದ ಫಿಲ್ಮಿಬೀಟ್ ಕನ್ನಡ

Posted by:
Subscribe to Filmibeat Kannada

2016ನೇ ಸಾಲಿನ ನಿಮ್ಮ ಫಿಲ್ಮಿಬೀಟ್ ಕನ್ನಡದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಪೋಲ್ ನಲ್ಲಿ ಸಾವಿರಾರು ಓದುಗರು 'ತಿಥಿ' ಖ್ಯಾತಿ 'ಗಡ್ಡಪ್'ಪ ಅವರನ್ನು 'ಅತ್ಯುತ್ತಮ ಉದಯೋನ್ಮುಖ ನಟ' ಎಂದು ಪ್ರೀತಿಯಿಂದ ಆಯ್ಕೆ ಮಾಡಿದ್ದರು.['ಫಿಲ್ಮಿಬೀಟ್ ಕನ್ನಡ'ದಿಂದ 'ರಾಮಾ ರಾಮಾ ರೇ' ಚಿತ್ರಕ್ಕೆ ವಿಶೇಷ ಪ್ರಶಸ್ತಿ]

ಓದುಗರ ಇಚ್ಛೆಯಂತೆ ಗಡ್ಡಪ್ಪ ಅವರಿಗೆ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ತಂಡದಿಂದ ನಿನ್ನೆ (ಮಾರ್ಚ್ 21) ''ಅತ್ಯುತ್ತಮ ಉದಯೋನ್ಮುಖ ನಟ' ಪ್ರಶಸ್ತಿ ಪ್ರದಾನ ಮಾಡಲಾಯಿತು.

'ಅತ್ಯುತ್ತಮ ಉದಯೋನ್ಮುಖ ನಟ' ಗಡ್ಡಪ್ಪ

'ಅತ್ಯುತ್ತಮ ಉದಯೋನ್ಮುಖ ನಟ' ಗಡ್ಡಪ್ಪ

'ಫಿಲ್ಮಿಬೀಟ್ ಕನ್ನಡ' ಓದುಗರ ತೀರ್ಪಿನಂತೆ 'ತಿಥಿ' ಚಿತ್ರದ ಅಭಿನಯಕ್ಕಾಗಿ ''ಅತ್ಯುತ್ತಮ ಉದಯೋನ್ಮುಖ ನಟ'-2016' ಪ್ರಶಸ್ತಿಯನ್ನ ಗಡ್ಡಪ್ಪ ಪಡೆದುಕೊಂಡಿದ್ದಾರೆ.[ಓದುಗರ ಆಯ್ಕೆ: ರವಿಚಂದ್ರನ್ ಗೆ 'ಫಿಲ್ಮಿಬೀಟ್ ಕನ್ನಡ'ದಿಂದ ಪ್ರೀತಿಯ ಸನ್ಮಾನ]

ಪ್ರಶಸ್ತಿ ಪ್ರದಾನ ಮಾಡಿದ ಸಂಪಾದಕ ಶಾಮಸುಂದರ

ಪ್ರಶಸ್ತಿ ಪ್ರದಾನ ಮಾಡಿದ ಸಂಪಾದಕ ಶಾಮಸುಂದರ

'ಫಿಲ್ಮಿಬೀಟ್ ಕನ್ನಡ' ಓದುಗರ ಪರವಾಗಿ 'ತಿಥಿ ಸ್ಟಾರ್' ಗಡ್ಡಪ್ಪ ರವರಿಗೆ 'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಸಂಪಾದಕ ಎಸ್.ಕೆ.ಶಾಮಸುಂದರ ಅವರು 'ಅತ್ಯುತ್ತಮ ಉದಯೋನ್ಮುಖ ನಟ' ಪ್ರಶಸ್ತಿ ಪ್ರದಾನ ಮಾಡಿದರು.

'ಫಿಲ್ಮಿಬೀಟ್ ತಂಡ' ಉಪಸ್ಥಿತಿ

'ಫಿಲ್ಮಿಬೀಟ್ ತಂಡ' ಉಪಸ್ಥಿತಿ

ಇದೇ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡದಿಂದ ಹರ್ಷಿತಾ ರಾಕೇಶ್, ಭರತ್ ಕುಮಾರ್, ರಾಘವೇಂದ್ರ.ಸಿ.ವಿ ಹಾಗೂ ಸುಹಾಸ್ ಹಾಜರಿದ್ದರು.['ಫಿಲ್ಮಿಬೀಟ್ ಕನ್ನಡ'ದಿಂದ 'ಕರ್ವ' ನಿರ್ದೇಶಕರಿಗೆ ಪ್ರಶಸ್ತಿ ಪ್ರದಾನ]

ಸಂತಸ ವ್ಯಕ್ತಪಡಿಸಿದ ಗಡ್ಡಪ್ಪ!

ಸಂತಸ ವ್ಯಕ್ತಪಡಿಸಿದ ಗಡ್ಡಪ್ಪ!

ಪ್ರಶಸ್ತಿ ಪಡೆದು ಮಾತನಾಡಿದ ಗಡ್ಡಪ್ಪ, ನಾವು ರೈತರು, ನಮಗೆ ಅಭಿನಯ ಬರಲ್ಲ, ಗೊತ್ತಿರುವಷ್ಟು ಅಭಿನಯಿಸುತ್ತಿದ್ದೇವೆ, ನಮ್ಮನ್ನ ಹಾರೈಸಿ ಎಂದರು. ಅಷ್ಟೇ ಅಲ್ಲದೇ ಕನ್ನಡ ಸಿನಿಮಾಗಳನ್ನ ಚಿತ್ರಮಂದಿರಕ್ಕೆ ಬಂದು ನೋಡಿ ಎಂದು ಮನವಿ ಮಾಡಿಕೊಂಡರು.

ಇಲ್ಲಿದೆ ನೋಡಿ ವಿಡಿಯೋ...

ಇಲ್ಲಿದೆ ನೋಡಿ ವಿಡಿಯೋ...

'ಫಿಲ್ಮಿಬೀಟ್ ಕನ್ನಡ ಅವಾರ್ಡ್' ಸಮಾರಂಭದ ಎಕ್ಸ್ ಕ್ಲೂಸಿವ್ ವಿಡಿಯೋ ಇಲ್ಲಿದೆ ನೋಡಿ.

English summary
Filmibeat Kannada/Oneindia Kannada team felicitated Actor ChanneGowda (Gaddappa) Yesterday (March 21st). Gaddappa Chosen as 'Best Debutante Actor' for Thithi Movie by Our Readers.
Please Wait while comments are loading...

Kannada Photos

Go to : More Photos