twitter
    For Quick Alerts
    ALLOW NOTIFICATIONS  
    For Daily Alerts

    'ಫಿಲ್ಮಿಬೀಟ್ ಕನ್ನಡ'ದಿಂದ 'ರಾಮಾ ರಾಮಾ ರೇ' ಚಿತ್ರಕ್ಕೆ ವಿಶೇಷ ಪ್ರಶಸ್ತಿ

    By Bharath Kumar
    |

    2016ನೇ ಸಾಲಿನಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಪೋಲ್ ನಲ್ಲಿ 'ಅತ್ಯುತ್ತಮ'ವೆಂದು ಆಯ್ಕೆಯಾದ ಚಿತ್ರಗಳಿಗೆ, ಕಲಾವಿದರಿಗೆ, ಮತ್ತು ತಂತ್ರಜ್ಞರಿಗೆ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗುತ್ತಿದೆ. ಓದುಗರ ಇಚ್ಛೆಯಂತೆ ಅತಿ ಹೆಚ್ಚು ಮತ ಪಡೆದ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.['ರಾಮಾ ರಾಮಾ ರೇ' ವಿಮರ್ಶೆ: ಕ್ಲಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಸಿನಿಮಾ]

    ಜೊತೆಗೆ ಕೆಲವು ಚಿತ್ರಗಳನ್ನ ವಿಶೇಷವಾಗಿ ಗುರುತಿಸಿ ಪ್ರಶಸ್ತಿ ನೀಡಲು ನಿಮ್ಮ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ನಿರ್ಧರಿಸಿತ್ತು. ಅದರ ಅನ್ವಯ ಈ ವರ್ಷ ಸಿನಿ ಪ್ರೇಕ್ಷಕರು ಹಾಗೂ ಸಿನಿ ವಿಮರ್ಶಕರನ್ನ ಮೆಚ್ಚಿಸಿದ 'ರಾಮಾ ರಾಮಾ ರೇ' ಚಿತ್ರಕ್ಕೆ 'ವರ್ಷದ ವಿಶಿಷ್ಟ ಪ್ರಶಸ್ತಿ' ನೀಡಿ ಸನ್ಮಾನಿಸಲಾಗಿದೆ. ಮುಂದೆ ಓದಿ....

    'ವರ್ಷದ ವಿಶಿಷ್ಟ ಸಿನಿಮಾ' ರಾಮಾ ರಾಮಾ ರೇ!

    'ವರ್ಷದ ವಿಶಿಷ್ಟ ಸಿನಿಮಾ' ರಾಮಾ ರಾಮಾ ರೇ!

    'ರಾಮಾ ರಾಮಾ ರೇ' ಈ ವರ್ಷದ ವಿಶಿಷ್ಟ ಸಿನಿಮಾವೆಂದು ನಿಮ್ಮ ಫಿಲ್ಮಿಬೀಟ್/ಒನ್ ಇಂಡಿಯಾ ಆಯ್ಕೆ ಮಾಡಿದೆ. ಈ ಚಿತ್ರ 2016ನೇ ಸಾಲಿನಲ್ಲಿ ಚಿತ್ರ ಪ್ರೇಮಿಗಳು ಮತ್ತು ವಿಮರ್ಶಕರಿಂದ ಶಬ್ಬಾಶ್ ಎನಿಸಿಕೊಂಡಿತ್ತು. ಜೈಲ್ ಬ್ರೇಕ್ ಕಥಾ ಹಂದರವನ್ನ ಹೊಂದಿದ್ದ ಈ ಚಿತ್ರ ಶತದಿನದ ಸಂಭ್ರಮವನ್ನ ಆಚರಿಸಿಕೊಂಡಿತ್ತು. ಅಷ್ಟೇ ಅಲ್ಲದೆ 9ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಅತ್ಯುತ್ತಮ ಚಿತ್ರ' ಎಂಬ ಪ್ರಶಸ್ತಿ ಪಡೆದುಕೊಂಡಿತ್ತು.

    'ರಾಮಾ ರಾಮಾ ರೇ' ನಿರ್ದೇಶಕರಿಗೆ ಗೌರವ!

    'ರಾಮಾ ರಾಮಾ ರೇ' ನಿರ್ದೇಶಕರಿಗೆ ಗೌರವ!

    'ರಾಮಾ ರಾಮಾ ರೇ' ಅಂತಹ ಒಂದೊಳ್ಳೆ ಸಿನಿಮಾವನ್ನ ನೀಡಿದ ನಿರ್ದೇಶಕದ ಸತ್ಯ ಪ್ರಕಾಶ್ ಅವರಿಗೆ ನಿಮ್ಮ ಫಿಲ್ಮಿಬೀಟ್ ಕನ್ನಡ ಓದುಗರ ಪರವಾಗಿ 'ವರ್ಷದ ವಿಶಿಷ್ಟ ಸಿನಿಮಾ' ಪ್ರಶಸ್ತಿಯನ್ನ ನೀಡಿ ಗೌರವಿಸಿದೆ.['ಫಿಲ್ಮಿಬೀಟ್ ಕನ್ನಡ'ದಿಂದ 'ಕರ್ವ' ನಿರ್ದೇಶಕರಿಗೆ ಪ್ರಶಸ್ತಿ ಪ್ರದಾನ]

    ಪ್ರಶಸ್ತಿ ಪ್ರದಾನ ಮಾಡಿದ ಸಂಪಾದಕ ಶಾಮಸುಂದರ

    ಪ್ರಶಸ್ತಿ ಪ್ರದಾನ ಮಾಡಿದ ಸಂಪಾದಕ ಶಾಮಸುಂದರ

    ವರ್ಷದ ವಿಶಿಷ್ಟ ಪ್ರಶಸ್ತಿಗೆ ಆಯ್ಕೆಯಾದ 'ರಾಮಾ ರಾಮಾ ರೇ' ಚಿತ್ರದ ನಿರ್ದೇಶಕ, ಸತ್ಯ ಪ್ರಕಾಶ್ ಅವರಿಗೆ 'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಸಂಪಾದಕರಾದ ಎಸ್.ಕೆ. ಶಾಮಸುಂದರ ಅವರು ಪ್ರಶಸ್ತಿ ಪ್ರದಾನ ಮಾಡಿದರು.[ಓದುಗರ ಆಯ್ಕೆ: ರವಿಚಂದ್ರನ್ ಗೆ 'ಫಿಲ್ಮಿಬೀಟ್ ಕನ್ನಡ'ದಿಂದ ಪ್ರೀತಿಯ ಸನ್ಮಾನ]

    ಒನ್ ಇಂಡಿಯಾ ಕಛೇರಿಯಲ್ಲಿ ಸನ್ಮಾನ

    ಒನ್ ಇಂಡಿಯಾ ಕಛೇರಿಯಲ್ಲಿ ಸನ್ಮಾನ

    ಬೆಂಗಳೂರಿನ ಜಯನಗರ 3ನೇ ಹಂತದಲ್ಲಿರುವ ನಮ್ಮ ಒನ್ ಇಂಡಿಯಾ/ಫಿಲ್ಮಿಬೀಟ್ ಕಚೇರಿಗೆ ಪ್ರೀತಿಯಿಂದ ಆಗಮಿಸಿದ್ದ 'ರಾಮಾ ರಾಮಾ ರೇ' ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್ ಅವರಿಗೆ 'ಫಿಲ್ಮಿಬೀಟ್ ಕನ್ನಡ' ತಂಡ ಆತ್ಮೀಯವಾಗಿ ಸನ್ಮಾನಿಸಿತು.

    'ಫಿಲ್ಮಿಬೀಟ್ ತಂಡ' ಉಪಸ್ಥಿತಿ

    'ಫಿಲ್ಮಿಬೀಟ್ ತಂಡ' ಉಪಸ್ಥಿತಿ

    ಇದೇ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡದಿಂದ ಹರ್ಷಿತಾ ರಾಕೇಶ್, ಭರತ್ ಕುಮಾರ್, ರಾಘವೇಂದ್ರ.ಸಿ.ವಿ ಹಾಗೂ ಸುಹಾಸ್ ಹಾಜರಿದ್ದರು.

    ಇಲ್ಲಿದೆ ನೋಡಿ ವಿಡಿಯೋ...

    ಇಲ್ಲಿದೆ ನೋಡಿ ವಿಡಿಯೋ...

    'ಫಿಲ್ಮಿಬೀಟ್ ಕನ್ನಡ ಅವಾರ್ಡ್' ಸಮಾರಂಭದ ಎಕ್ಸ್ ಕ್ಲೂಸಿವ್ ವಿಡಿಯೋ ಇಲ್ಲಿದೆ ನೋಡಿ.

    English summary
    Filmibeat Kannada/Oneindia Kannada team felicitated Director Sathya Prakash Yesterday (March 21st). Sathya Prakash Directorial Kannada Movie 'Rama Rama Re' Chosen as 'Special Movie of 2016' by Filmibeat Kannada/Oneindia Kannada
    Wednesday, March 22, 2017, 17:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X