»   » 'ತಿಥಿ' ನಾಯಕರ ಕಾಲ್ ಶೀಟ್ ಕಷ್ಟ: 'ಏನ್ ನಿನ್ ಪ್ರಾಬ್ಲಮ್ಮು'

'ತಿಥಿ' ನಾಯಕರ ಕಾಲ್ ಶೀಟ್ ಕಷ್ಟ: 'ಏನ್ ನಿನ್ ಪ್ರಾಬ್ಲಮ್ಮು'

'ತಿಥಿ' ಚಿತ್ರದ ಮೂಲಕ ಫೇಮಸ್ ಆದ ಗಡ್ಡಪ್ಪ ಮತ್ತು ಸೆಂಚುರಿ ಗೌಡ ಇದೀಗ 'ಏನ್ ನಿನ್ ಪ್ರಾಬ್ಲಮ್ಮು' ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ತಿಥಿ' ಚಿತ್ರದಲ್ಲಿ ಫೇಮಸ್ ಆಗಿದ್ದ ಈ ಡೈಲಾಗ್, ಸದ್ಯಕ್ಕೆ ಟೈಟಲ್ ಆಗಿದೆ.

Posted by:
Subscribe to Filmibeat Kannada

ಸದ್ಯ ಸ್ಯಾಂಡಲ್ ವುಡ್ ನಲ್ಲಿ 'ತಿಥಿ' ಗಡ್ಡಪ್ಪ ಹಾಗೂ ಸೆಂಚುರಿ ಗೌಡರ ಹವಾ ಸಖತ್ ಜೋರಾಗಿದೆ. ಯಾವುದೇ ದೊಡ್ಡ ಸ್ಟಾರ್ ಗಳಿಗೂ ಕಮ್ಮಿಯಿಲ್ಲ ಎಂಬಂತೆ ಇವರಿಬ್ಬರ ದರ್ಬಾರ್ ನಡೆಯುತ್ತಿದೆ.

'ತಿಥಿ' ಸಿನಿಮಾ ಗೆದ್ದಿದ್ದೆ ಗೆದ್ದಿದ್ದು, ನಿರ್ದೇಶಕರು ಹಾಗೂ ನಿರ್ಮಾಪಕರೆಲ್ಲ 'ತಿಥಿ' ಕಲಾವಿದರ ಹಿಂದೆ ಬಿದ್ದಿದ್ದಾರೆ. ಇನ್ನೂ ಹೊಸ ಹೊಸ ನಿರ್ದೇಶಕರು ಇವರಿಗಾಗಿನೇ ಸ್ಕ್ರಿಪ್ಟ್ ರೆಡಿ ಮಾಡುವ ಮಟ್ಟಕ್ಕೆ, ಗಡ್ಡಪ್ಪ ಹಾಗೂ ಸೆಂಚುರಿ ಗೌಡರ ಜುಗಲ್ ಬಂದಿ ಮೋಡಿ ಮಾಡುತ್ತಿದೆ.

'ಗಡ್ಡಪ್ಪ'ನ ಗಂಭೀರ ನಟನೆ ಹಾಗೂ ಸೆಂಚುರಿ ಗೌಡರ ಸೆನ್ಸಾರ್ ಲೆಸ್ ಸಂಭಾಷಣೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಅದಕ್ಕೆ ಅನ್ಸುತ್ತೆ ಸ್ಯಾಂಡಲ್ ವುಡ್ ಫಿಲ್ಮ್ ಮೇಕರ್ಸ್ 'ತಿಥಿ' ಮಾಡಿಸಿದವರನ್ನ ಹಾಕ್ಕೊಂಡು ಸಿನಿಮಾಗಳನ್ನ ಮಾಡುತ್ತಿದ್ದಾರೆ.['ತಿಥಿ'ಯಲ್ಲಿ ಪಾಲ್ಗೊಂಡ ವಿಮರ್ಶಕರು ಹೇಳಿದ್ದೇನು?]

ಸದ್ಯ 'ತರ್ಲೆ ವಿಲೇಜ್' ಮುಗಿಸಿರುವ ತಿಥಿ ನಾಯಕರು, ಈಗ 'ಏನ್ ನಿನ್ ಪ್ರಾಬ್ಲಮ್ಮು' ಅಂತಿದ್ದಾರೆ. ಅಷ್ಟೇ ಅಲ್ಲ 'ತಿಥಿ ಮಾಡ್ಬೇಕಾ' ಅಂತಾನೂ ಕೇಳುತ್ತಿದ್ದಾರೆ. ಮುಂದೆ ಓದಿ...

ತಿಥಿ ನಾಯಕರಿಂದ ಮತ್ತೊಂದು ಚಿತ್ರ

ತಿಥಿ ನಾಯಕರಿಂದ ಮತ್ತೊಂದು ಚಿತ್ರ

'ತಿಥಿ' ಚಿತ್ರ ಸೂಪರ್ ಹಿಟ್ ಆದ್ಮೇಲೆ ಆ ಚಿತ್ರದ ನಿರ್ದೇಶಕರಿಗೆ ಡಿಮ್ಯಾಂಡ್ ಬಂತು ಇಲ್ಲವೋ ಗೊತ್ತಿಲ್ಲ. ಆದ್ರೆ, 'ತಿಥಿ' ಚಿತ್ರದಲ್ಲಿ ಅಭಿನಯಿಸಿದ್ದ ಕಲಾವಿದರಿಗೆ ಮಾತ್ರ ಸಖತ್ ಬೇಡಿಕೆಯಂತೂ ಬಂತು. ಅದು ಎಷ್ಟರ ಮಟ್ಟಿಗೆ ಅಂದ್ರೆ, ಇವರ ಕಾಲ್ ಶೀಟ್ ಗಾಗಿ ಗಾಂಧಿನಗರದ ನಿರ್ಮಾಪಕರು ಸಾಲು ನಿಲ್ಲುವ ಮಟ್ಟಿಗೆ ಬ್ಯುಸಿಯಾಗಿದ್ದಾರೆ.

`ಏನ್ ನಿನ್ ಪ್ರಾಬ್ಲಮ್ಮು' ಅಂತಿದ್ದಾರೆ 'ತಿಥಿ' ಬಾಯ್ಸ್

`ಏನ್ ನಿನ್ ಪ್ರಾಬ್ಲಮ್ಮು' ಅಂತಿದ್ದಾರೆ 'ತಿಥಿ' ಬಾಯ್ಸ್

ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಟ್ರೆಂಡ್ ಹುಟ್ಟುಹಾಕಿರುವ ಗಡ್ಡಪ್ಪ ಹಾಗೂ ಸೆಂಚುರಿಗೌಡ, ಈಗ ಮತ್ತೊಂದು ಹೊಸ ಚಿತ್ರವನ್ನ ಒಪ್ಪಿಕೊಂಡಿದ್ದು, ಈಗಾಗಲೇ ಶೂಟಿಂಗ್ ಕೂಡ ಮಾಡಿ ಮುಗಿಸಿದ್ದಾರೆ. ಈ ಚಿತ್ರದ ಹೆಸರು '`ಏನ್ ನಿನ್ ಪ್ರಾಬ್ಲಮ್ಮು'

ಇಲ್ಲಿಯೂ 'ತಿಥಿ' ಟೀಮ್

ಇಲ್ಲಿಯೂ 'ತಿಥಿ' ಟೀಮ್

`ಏನ್ ನಿನ್ ಪ್ರಾಬ್ಲಮ್ಮು' ಚಿತ್ರದಲ್ಲೂ 'ತಿಥಿ' ಟೀಮ್ ಮುಂದುವರೆದಿದೆ. ಗಡ್ಡಪ್ಪ ಹಾಗೂ ಸೆಂಚುರಿಗೌಡ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ. ಇನ್ನೂ ತಿಥಿ ಚಿತ್ರದಲ್ಲಿದ್ದ 'ಅಭಿ' ಕೂಡ ಈ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ.

'ಗಾಲಿ' ನಿರ್ದೇಶಕ ಸಾರಥ್ಯ

'ಗಾಲಿ' ನಿರ್ದೇಶಕ ಸಾರಥ್ಯ

ಅಂದ್ಹಾಗೆ, ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದು 'ಗಾಲಿ' ಖ್ಯಾತಿಯ ನಿರ್ದೇಶಕ ಲಕ್ಕಿ. ಡಬ್ಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಲಕ್ಕಿ, ತಿಥಿ ನಾಯಕರಿಗಾಗಿ, ಹಾಸ್ಯ ಭರಿತವಾದ ಕಥೆ ಹಾಗೂ ಚಿತ್ರಕಥೆಯನ್ನ ಮಾಡಿದ್ದಾರೆ.

ಗಡ್ಡಪ್ಪ-ಸೆಂಚುರಿ ಗೌಡರಿಗೆ ಸಾಂಗ್ಸ್

ಗಡ್ಡಪ್ಪ-ಸೆಂಚುರಿ ಗೌಡರಿಗೆ ಸಾಂಗ್ಸ್

ಈ ಚಿತ್ರದ ಒಂದು ವಿಶೇಷವೆಂದರೆ, ಗಡ್ಡಪ್ಪ ಹಾಗೂ ಸೆಂಚುರಿ ಗೌಡರಿಗೆ ತಲಾ ಒಂದೊಂದು ಇಂಟ್ರಡಕ್ಷನ್ ಸಾಂಗ್ ಇದೆಯಂತೆ. ಅಷ್ಟೇ ಅಲ್ಲ, ಒಂದು ಹಾಡಿನಲ್ಲಿ ಇಬ್ಬರೂ ಹಾಡಿದ್ದಾರಂತೆ. ಸದ್ಯ, ಶೂಟಿಂಗ್ ಮುಗಿಸಿರುವ `ಏನ್ ನಿನ್ ಪ್ರಾಬ್ಲಮ್ಮು' ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾಗಲಿದ್ದು, ಚಿತ್ರವನ್ನ ಕೂಡ ಇದೆ ತಿಂಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ನಲ್ಲಿದ್ದಾರೆ.

ಇವರು ತುಂಬಾ ಬ್ಯುಸಿ `ಏನ್ ನಿನ್ ಪ್ರಾಬ್ಲಮ್ಮು'

ಇವರು ತುಂಬಾ ಬ್ಯುಸಿ `ಏನ್ ನಿನ್ ಪ್ರಾಬ್ಲಮ್ಮು'

ತಿಥಿ ಚಿತ್ರದ ನಂತರ ಕನ್ನಡ ಇಂಡಸ್ಟ್ರಿಯಲ್ಲಿ ತುಂಬ ಬ್ಯುಸಿಯಾಗಿರುವ 'ತಿಥಿ' ಕಲಾವಿದರು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡುತ್ತಿದ್ದಾರೆ.

'ತರ್ಲೆ ವಿಲೇಜ್' ನಲ್ಲಿ 'ತಿಥಿ' ಬಾಯ್ಸ್

'ತರ್ಲೆ ವಿಲೇಜ್' ನಲ್ಲಿ 'ತಿಥಿ' ಬಾಯ್ಸ್

ಸಿದ್ದೇಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ತರ್ಲೆ ವಿಲೇಜ್' ಚಿತ್ರದಲ್ಲಿ ಗಡ್ಡಪ್ಪ, ಸೆಂಚುರಿ ಗೌಡ, ತಮ್ಮಣ್ಣ ಹಾಗೂ ಅಭಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಗಡ್ಡಪ್ಪನ ಮ್ಯಾನರಿಸಂ ಹಾಗೂ ಸೆಂಚುರಿಗೌಡರ ಪೋಲಿ ಮಾತುಗಳು ಪ್ರೇಕ್ಷಕರನ್ನ ನಕ್ಕು ನಗಿಸುತ್ತಿದೆ.

'ಕಮರೊಟ್ಟು ಚಕ್ಪೋಸ್ಟ್'ನಲ್ಲಿ ಗಡ್ಡಪ್ಪ

'ಕಮರೊಟ್ಟು ಚಕ್ಪೋಸ್ಟ್'ನಲ್ಲಿ ಗಡ್ಡಪ್ಪ

'ಮಾಮು ಟೀ ಅಂಗಡಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಪರಮೇಶ್, ಈಗ 'ತಿಥಿ' ಖ್ಯಾತಿಯ ಗಡ್ಡಪ್ಪನ ಜೊತೆ 'ಕಮರೊಟ್ಟು ಚಕ್ಪೋಸ್ಟ್' ಅಂತ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗೆ ಚಿತ್ರದ ಫೋಟೋಶೂಟ್ ಆಗಿದ್ದು, ಈ ಚಿತ್ರದಲ್ಲಿ ತಿಥಿ ಖ್ಯಾತಿ ತಮ್ಮಣ್ಣ ಕೂಡ ಕಾಣಿಸಿಕೊಳ್ಳುತ್ತಿದ್ದಾರಂತೆ.

English summary
After Kannada Movie 'Thithi', Channegowda and Gaddappa, his character in the film, set to star in a film titled 'Yen Nin Problemu', named after his famous dialogue in 'Thithi' film.
Please Wait while comments are loading...

Kannada Photos

Go to : More Photos