twitter
    For Quick Alerts
    ALLOW NOTIFICATIONS  
    For Daily Alerts

    ಭಾರೀ ಪ್ರಚಾರದಿಂದ ಗಣೇಶ್ ಚಿತ್ರ ಗೆಲ್ಲಬಹುದೇ?

    |
    <ul id="pagination-digg"><li class="previous"><a href="/news/golden-star-ganesh-romeo-movie-publicity-065812.html">« Previous</a>

    ಇದೆಲ್ಲಾ ಗಣೇಶ್ ಅವರಿಗೆ ಗೊತ್ತಿದೆ ತಾನೇ? ಜನಪ್ರಿಯ ಸ್ಟಾರ್ ಒಬ್ಬ ಎದುರುಗಡೆ ಬಂದರೆ ಜನ ಮುತ್ತಿಕೊಳ್ಳುವುದು ಸಹಜ. ಅದು ಮೊದಲೇ ಗೊತ್ತಿದ್ದರೆ ಜನ ಅಲ್ಲಿ ಸೇರುವುದೂ ಸಹಜ. ತೆರೆಯಲ್ಲಿ ನೋಡುವ ನಟರನ್ನು ಪ್ರತ್ಯಕ್ಷವಾಗಿ ನೋಡಲು ಜನ ಮುಗಿಬೀಳುವುದು ಖಂಡಿತ. ಅದು ಜನಪ್ರಿಯತೆಗೆ ಸಾಕ್ಷಿಯಾಗಬಹುದೇ ಹೊರತೂ ಸಿನಿಮಾ ಗೆಲುವಿಗೆ ಕಾರಣವಾಗುವುದಿಲ್ಲ.

    ಅದಕ್ಕೆ ಇನ್ನೂ ಸರಿಯಾದ ಸಾಕ್ಷಿಯೆಂದರೆ ದರ್ಶನ್ ಸಾರಥಿ ಚಿತ್ರದ ನಂತರ ಬಂದ ಚಿಂಗಾರಿಗೆ ಮಿತಿಮೀರಿದ ಪ್ರಚಾರವೇ ಸಿಕ್ಕಿತ್ತು. ಆದರೂ ಅದು ಸಾರಥಿಯಷ್ಟು ಸೂಪರ್ ಹಿಟ್ ಆಗಲಿಲ್ಲ. ಪುನೀತ್ ಕಥೆಯೂ ಅಷ್ಟೇ, ಜಾಕಿ ನಂತರ ಬಂದ ಪರಮಾತ್ಮ ಅಥವಾ ಅಣ್ಣಾಬಾಂಡ್ ಯಾವುದೂ 'ಮಿಲನ' ಚಿತ್ರದಂತೆ ಸೂಪರ್ ಹಿಟ್ ಆಗಲಿಲ್ಲ. 'ನೆನಪಿರಲಿ' ನಂತರ ಪ್ರೇಮ್ ತುಂಬಾ ವರ್ಷ ಮರೆಯಾಗಿದ್ದರು.

    ಗಣೇಶ್ ತಿಳಿದುಕೊಳ್ಳಬೇಕಾದದ್ದು ಇಷ್ಟೇ.. ಸಿನಿಮಾ ಚೆನ್ನಾಗಿದ್ದರೆ ಮಾತ್ರ ಪ್ರೇಕ್ಷಕರು ನೋಡುತ್ತಾರೆ. ಪ್ರಚಾರದಿಂದಾಗಲೀ ನಟರ ಜನಪ್ರಿಯತೆಯಿಂದಾಗಲೀ ಚಿತ್ರ ಸೂಪರ್ ಹಿಟ್ ಆಗುವುದಿಲ್ಲ. ಒಂದು ಚಿತ್ರ ಗೆದ್ದಾಗ ಮುಂದಿನ ಚಿತ್ರಕ್ಕೆ ಹೆಚ್ಚು ಓಪನಿಂಗ್ ಸಿಗುತ್ತದೆ ಅಷ್ಟೇ. ಆದರೆ ಮುಂದಿನ ವಾರವೇ ಚಿತ್ರ ಬಿದ್ದು ಹೋಗುತ್ತದೆ.

    ಕಾರಣ, ಪ್ರೇಕ್ಷಕರ 'ಮೌತ್ ಪಬ್ಲಿಸಿಟಿ' ಎಲ್ಲದಕ್ಕಿಂತ ಹೆಚ್ಚು ಪರಿಣಾಮಕಾರಿ. ಹಾಗಾಗಿ, ಗಣೇಶ್ ಚಿತ್ರ ಒಪ್ಪಿಕೊಳ್ಳುವಲ್ಲಿ ಜಾಣತನ ತೋರಿಸಬೇಕು. ಚಿತ್ರದ ಕಥೆ ಎಲ್ಲದಕ್ಕಿಂತ ಮುಖ್ಯವಾಗಬೇಕು. ಚಿತ್ರದ ಕಥೆ ಜನರಿಗೆ ಇಷ್ಟವಾಗಬಲ್ಲದೇ ಎಂಬುದನ್ನು ತಿಳಿದುಕೊಳ್ಳುವ ಜಾಣ್ಮೆ ಗಣೇಶ್ ಅವರಿಗೆ ಸಿದ್ಧಿಸಬೇಕು. ಅವರಿಗೆ ಆಗದಿದ್ದರೆ ಅದನ್ನು ಸೂಕ್ತ ವ್ಯಕ್ತಿಗೆ ಒಪ್ಪಿಸಬೇಕು.

    ಎಲ್ಲದಕ್ಕಿಂತ ಮೊದಲು "ಕಥೆ ಆಮೇಲೆ ನೋಡೋಣ, ನನಗೆ ಸಂಭಾವನೆ ಇಷ್ಟು ಕೊಡಿ" ಎನ್ನುವುದನ್ನು ನಿಲ್ಲಿಸಬೇಕು. ಕಥೆಯನ್ನು ಮೊದಲು ಕೇಳಿ ಆಮೇಲೆ ಸಂಭಾವನೆಗೆ ಬೇಡಿಕೆ ಇಡಬೇಕು. ಅವರೇ ಬೇಕು ಎನ್ನುವವರು ಕೊಟ್ಟೇ ಕೊಡುತ್ತಾರೆ. ಚಿತ್ರ ಅವರಿಂದ ಗೆಲ್ಲುತ್ತದೆ ಎಂದಾದರೆ ನಿರ್ಮಾಪಕರು ಕೊಟ್ಟೇ ಕೊಡುತ್ತಾರೆ ಎಂಬುದು ಗಣೇಶ್ ಗಮನಕ್ಕಿರಲಿ.

    ಸಿನಿಮಾ ಮೇಲಿನ ಗಣೇಶ್ ಪ್ರೀತಿ ಹಾಗೂ ಪ್ರಚಾರ ಮಾಡುವ ರೀತಿಗೆ ಯಾರಿಂದಲೂ ಎರಡು ಮಾತಿಲ್ಲ. ಆದರೆ ಒಂದು ಚಿತ್ರದ ಯಶಸ್ಸಿಗೆ ಪ್ರಚಾರಕ್ಕಿಂತ ಪ್ರಮುಖವಾಗಿರುವುದು ಚಿತ್ರ ನೋಡುವಂತ ಪ್ರೇಕ್ಷಕರಿಗೆ ಹೊಸತೇನೋ ಸಿಕ್ಕಿದ ಅನುಭವ ನೀಡುವ ಕಥೆ ಹಾಗೂ ಇಷ್ಟವಾಗಬಹುದಾದ ಮೇಕಿಂಗ್.

    ಅದನ್ನು ಗಣೇಶ್ ಅರಿಯಬೇಕು. ಅದನ್ನು ಬಿಟ್ಟು ಸಿನಿಮಾ ಮುಗಿಸಿ ನಂತರ ಪ್ರಚಾರಕ್ಕಾಗಿ ಊರೂರು ಸುತ್ತಿದರೆ ಬೆಳ್ಳಗಿರುವ ಗಣೇಶ್ ಕಪ್ಪಾಗಬಹುದೇ ಹೊರತೂ ಸಿನಿಮಾ ಗೆಲ್ಲುವ ಖಾತ್ರ ದೊರೆಯಲಾರದು. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಈಗ ಅತ್ಯಗತ್ಯವಾದ ಗೆಲುವನ್ನು ರೋಮಿಯೋ ನೀಡಬಲ್ಲದೇ ಎಂಬುದು ಸದ್ಯದ ಪ್ರಶ್ನೆ.

    ಆದರೆ ಅದಕ್ಕೆ ಉತ್ತರ ಯಾರಿಗೂ ಗೊತ್ತಿಲ್ಲ. ಚಿತ್ರತಂಡ ಹೌದು ಎನ್ನುವುದು ಸಹಜವೇ. ಆದರೆ ಪ್ರೇಕ್ಷಕರ ನಾಡಿಮಿಡಿತ ರೋಮಿಯೋ ಚಿತ್ರಕ್ಕೆ ಮಿಡಿಯಬಹುದೇ? ಆ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುವಂತೆ ಮಾಡಿದ್ದಾರೆಯೇ? ಗಣೇಶ್ ವೃತ್ತಿಜೀವನ ಹಾಗೂ ಈ ಎಲ್ಲಾ ಪ್ರಶ್ನೆಗಳಿಗೆ ರೋಮಿಯೋ ಬಿಡುಗಡೆ ನಂತರ ಉತ್ತರ ದೊರಕಬೇಕಷ್ಟೇ! (ಒನ್ ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/news/golden-star-ganesh-romeo-movie-publicity-065812.html">« Previous</a>

    English summary
    Golden Star Ganesh is traveling all around Karnataka and promoting his upcoming movie Romeo Trailers. Jockie Bhavana is pair for Ganesh in this movie. PC Shekhar directed this. Ganesh to know that only publicity can't do the Magic for its Success, hence the movie is extra ordinary good. &#13; &#13;
    Saturday, June 9, 2012, 19:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X