»   » 'ಸುಂದರಾಂಗ ಜಾಣ' ಬಿಡುಗಡೆ ದಿನಾಂಕ ಮುಂದಕ್ಕೆ ಹೋಯ್ತು.!

'ಸುಂದರಾಂಗ ಜಾಣ' ಬಿಡುಗಡೆ ದಿನಾಂಕ ಮುಂದಕ್ಕೆ ಹೋಯ್ತು.!

Posted by:
Subscribe to Filmibeat Kannada

ತೆಲುಗಿನ 'ಭಲೇ ಭಲೇ ಮಗಾಡಿವೋಯ್' ಚಿತ್ರದ ರೀಮೇಕ್ ಆಗಿರುವ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ 'ಸುಂದರಾಂಗ ಜಾಣ' ಚಿತ್ರ ಡಿಸೆಂಬರ್ 9 ರಂದು ಬಿಡುಗಡೆ ಆಗಲಿದೆ ಅಂತ ಸ್ವತಃ ಚಿತ್ರದ ನಿರ್ದೇಶಕ ರಮೇಶ್ ಅರವಿಂದ್ ಟ್ವೀಟ್ ಮಾಡಿದ್ದರು.

ಆದ್ರೀಗ, ಡಿಸೆಂಬರ್ 9 ರಂದು 'ಸುಂದರಾಂಗ ಜಾಣ' ಬಿಡುಗಡೆ ಆಗುತ್ತಿಲ್ಲ. ಬದಲಾಗಿ ಎರಡು ವಾರಗಳ ಕಾಲ ಮುಂದಕ್ಕೆ ಹೋಗಿದೆ.


ಡಿಸೆಂಬರ್ 23 ರಂದು ರಿಲೀಸ್

ಡಿಸೆಂಬರ್ 23 ರಂದು ರಿಲೀಸ್

ಡಿಸೆಂಬರ್ 9 ರ ಬದಲು ಡಿಸೆಂಬರ್ 23 ರಂದು 'ಸುಂದರಾಂಗ ಜಾಣ' ಬಿಡುಗಡೆ ಆಗಲಿದೆ ಅಂತ ಚಿತ್ರತಂಡ ಸ್ಪಷ್ಟಪಡಿಸಿದೆ. [ಡಿಸೆಂಬರ್ ನಲ್ಲಿ ದೂರದಿಂದ ಬರ್ತಾನೆ 'ಸುಂದರಾಂಗ ಜಾಣ']


ಮುಂದಕ್ಕೆ ಹೋಗಲು ಕಾರಣ.?

ಮುಂದಕ್ಕೆ ಹೋಗಲು ಕಾರಣ.?

500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳು ಬ್ಯಾನ್ ಆಗಿರುವುದರಿಂದ ಜನರಿನ್ನೂ ಬ್ಯಾಂಕ್ ಹಾಗೂ ಎ.ಟಿ.ಎಂಗಳ ಮುಂದೆಯೇ ಕ್ಯೂ ನಿಲ್ಲುತ್ತಿರುವುದರಿಂದ, ಸಿನಿಮಾ ಥಿಯೇಟರ್ ಗಳು ಖಾಲಿ ಹೊಡೆಯುತ್ತಿವೆ. ಹೀಗಾಗಿ, ಡಿಸೆಂಬರ್ 23 ರಷ್ಟರೊಳಗೆ 'ಚಿಲ್ಲರೆ ಸಮಸ್ಯೆ' ಒಂದು ಲೆವೆಲ್ ಗೆ ಪರಿಹಾರ ಆಗಬಹುದು ಎಂಬ ನಿರೀಕ್ಷೆ ಮೇಲೆ ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿದೆ. [ದೂರದಿಂದ ಬಂದ 'ಸುಂದರಾಂಗ ಜಾಣ' ಆದ ಗೋಲ್ಡನ್ ಸ್ಟಾರ್ ಗಣೇಶ್.!]


ಮುಖ್ಯ ಚಿತ್ರಮಂದಿರ ಯಾವುದು.?

ಮುಖ್ಯ ಚಿತ್ರಮಂದಿರ ಯಾವುದು.?

ಸದ್ಯ ಬಿಡುಗಡೆ ಆಗಿರುವ ಪೋಸ್ಟರ್ ಗಳ ಪ್ರಕಾರ, ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ 'ಸುಂದರಾಂಗ ಜಾಣ' ಬಿಡುಗಡೆ ಆಗಲಿದೆ.


ಸಿನಿಮಾದಲ್ಲಿದೆ ದೊಡ್ಡ ತಾರಾಬಳಗ

ಸಿನಿಮಾದಲ್ಲಿದೆ ದೊಡ್ಡ ತಾರಾಬಳಗ

'ಸುಂದರಾಂಗ ಜಾಣ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾಸ್ತವ ಜೋಡಿಯಾಗಿ ಅಭಿನಯಿಸಿದ್ದಾರೆ. ದೇವರಾಜ್, ರವಿಶಂಕರ್ ಗೌಡ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ.


ಶೀರ್ಷಿಕೆ ಬದಲಾವಣೆ

ಶೀರ್ಷಿಕೆ ಬದಲಾವಣೆ

ಈ ಹಿಂದೆ ಇದೇ ಚಿತ್ರಕ್ಕೆ 'ಗಂಡು ಎಂದರೆ ಗಂಡು' ಎಂಬ ಟೈಟಲ್ ಇಡಲಾಗಿತ್ತು. ಆದ್ರೆ, ಚಿತ್ರದ ಚಿತ್ರೀಕರಣ ಮುಗಿಯುವ ಹೊತ್ತಿಗೆ, ಚಿತ್ರತಂಡಕ್ಕೆ ಈ ಶೀರ್ಷಿಕೆ ಸಮಾಧಾನ ತಂದಿಲ್ಲ. ಹೀಗಾಗಿ 'ಸುಂದರಾಂಗ ಜಾಣ' ಅಂತ ಶೀರ್ಷಿಕೆ ಬದಲಾವಣೆ ಮಾಡಲಾಗಿದೆ. [ರಮೇಶ್-ಗಣೇಶ್ ಕಾಂಬಿನೇಷನ್ ನ ಚಿತ್ರದ ಹೆಸರೇನು ಗೊತ್ತಾ?]


ನಿರ್ದೇಶಕ ರಮೇಶ್ ಅರವಿಂದ್

ನಿರ್ದೇಶಕ ರಮೇಶ್ ಅರವಿಂದ್

ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡಿರುವ 'ಸುಂದರಾಂಗ ಜಾಣ' ಚಿತ್ರಕ್ಕೆ ನಟ ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳಿದ್ದಾರೆ.


English summary
Golden Star Ganesh starrer Kannada Movie 'Sundaranga Jaana' will release on December 23rd, 2016. 'Sundaranga Jaana' Movie is directed by Ramesh Aravind.
Please Wait while comments are loading...

Kannada Photos

Go to : More Photos