»   » ಫೆಬ್ರವರಿಯಲ್ಲಿ 'ಭಲೇ ಭಲೇ' ಅಂತಾರೆ ರಮೇಶ್-ಗಣೇಶ್

ಫೆಬ್ರವರಿಯಲ್ಲಿ 'ಭಲೇ ಭಲೇ' ಅಂತಾರೆ ರಮೇಶ್-ಗಣೇಶ್

Posted by:
Subscribe to Filmibeat Kannada

ತೆಲುಗಿನ ಹಿಟ್ ಚಿತ್ರ 'ಭಲೇ ಭಲೇ ಮಗಾಡೀವೋಯ್' ರಿಮೇಕ್ ಹಕ್ಕು ಖರೀದಿ ಮಾಡಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಈ ಚಿತ್ರವನ್ನು ಕನ್ನಡದಲ್ಲಿ ತರುವ ನಿರ್ಧಾರ ಮಾಡಿದ್ದಾರೆ. ಅನ್ನೋ ವಿಚಾರವನ್ನು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ.

ಕನ್ನಡದ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ಆಕ್ಷನ್-ಕಟ್ ಹೇಳಲಿರುವ ಈ ಚಿತ್ರದಿಂದ ಸದ್ಯಕ್ಕೆ ಬಂದಿರುವ ಖಾಸ್ ಖಬರ್ ಏನಪ್ಪಾ ಅಂದ್ರೆ ಈ ಚಿತ್ರದ ಶೂಟಿಂಗ್ ಫೆಬ್ರವರಿ ತಿಂಗಳ ಕೊನೆಗೆ ಆರಂಭವಾಗಲಿದೆ.[ಚಿನ್ನದ ಹುಡುಗನಿಗೆ ಆಕ್ಷನ್-ಕಟ್ ಹೇಳ್ತಾರಂತೆ, ರಮೇಶ್ ಅರವಿಂದ್.!]

ಇದನ್ನು ಸ್ವತಃ ಗೋಲ್ಡನ್ ಸ್ಟಾರ್ ಗಣಿ ಅವರೇ ತಮ್ಮ ಫೇಸ್ ಬುಕ್ಕಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ರಮೇಶ್ ಅರವಿಂದ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವುದರಿಂದ ಫೆಬ್ರವರಿಯಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭ.

ತೆಲುಗಿನಲ್ಲಿ 'ಈಗ' ಚಿತ್ರದ ಖ್ಯಾತಿಯ ನಟ ನಾನಿ ಹಾಗೂ ನಟಿ ಲಾವಣ್ಯ ತ್ರಿಪಾಟಿ ಅವರು 'ಭಲೇ ಭಲೇ ಮಗಾಡೀವೋಯ್' ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು 'ಮಾಸ್ಟರ್ ಪೀಸ್' ಖ್ಯಾತಿಯ ನಟಿ ಶಾನ್ವಿ ಶ್ರೀವಾತ್ಸವ್ ಅವರು ಮಿಂಚಲಿದ್ದಾರೆ.['ಭಲೇ ಭಲೇ' ಎಂದ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ]

Hi good morning,new movie produced by #Rockline sir n #AlluArvind sir,Ramesh sir vll direct,shting frm Feb end 󾠁󾮗It vll be high current entertaining movie Ley ley selfi ley ley rey

Posted by Golden Star Ganesh onSunday, January 24, 2016

ಚಿತ್ರಕ್ಕೆ ಖ್ಯಾತ ನಟ-ನಿರ್ಮಾಪಕ-ನಿರ್ದೇಶಕ ರಾಕ್ ಲೈನ್ ವೆಂಕಟೇಶ್ ಮತ್ತು ತೆಲುಗಿನ ನಿರ್ಮಾಪಕ ಅಲ್ಲು ಅರವಿಂದ್ ಅವರು ಜೊತೆಯಾಗಿ ಬಂಡವಾಳ ಹೂಡಲಿದ್ದಾರೆ.[ಗೋಲ್ಡನ್ ಸ್ಟಾರ್ ಗಣಿಗೆ 'ಭಲೇ ಭಲೇ' ಎಂದ ರಾಕ್ ಲೈನ್!]

ಇದೀಗ ರಮೇಶ್ ಮತ್ತು ರಾಕ್ ಲೈನ್ ಅವರೊಂದಿಗೆ ಕೆಲಸ ಮಾಡಲು ಉತ್ಸಾಹ ವ್ಯಕ್ತಪಡಿಸಿರುವ ನಟ ಗಣೇಶ್ ಅವರು 'ಲೇ ಲೇ ಸೆಲ್ಫಿ ಲೇ ಲೇ ರೇ' ಎಂದು ಸೆಲ್ಫಿ ತೆಗೆದು ಫೇಸ್ ಬುಕ್ಕಿಗೆ ಹಾಕಿಕೊಳ್ಳುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.

English summary
Kannada Actor Ganesh and Producer Rockline Venkatesh Combinations Telugu movie 'Bhale Bhale Magadivoy' remake Shooting kick start from the month of February. The movie is directed by Ramesh Aravind.
Please Wait while comments are loading...

Kannada Photos

Go to : More Photos