»   » ಕಲೆಕ್ಷನ್ ವಿಷಯದಲ್ಲಿ 'Zooಮ್' ಬಗ್ಗೆ ಕೆಮ್ಮಂಗಿಲ್ಲ ಬಿಡಿ.!

ಕಲೆಕ್ಷನ್ ವಿಷಯದಲ್ಲಿ 'Zooಮ್' ಬಗ್ಗೆ ಕೆಮ್ಮಂಗಿಲ್ಲ ಬಿಡಿ.!

Posted by:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'Zooಮ್' ಸಿನಿಮಾ ಸೂಪರ್ ಹಿಟ್ ಆಗಿದೆ. ಸಾಕ್ಷಿ ಸಮೇತ ನಾಳೆ ಸಾಬೀತಾಗಲಿದೆ ಅಂತ ನಿನ್ನೆಯಷ್ಟೇ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿತ್ತು. ['Zooಮ್' ಸೂಪರ್ ಹಿಟ್.! ನಾಳೆ ದಾಖಲೆ ಸಮೇತ ಸಾಬೀತು.!]

ಅದರಂತೆ, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ಗಣೇಶ್ ನಿವಾಸ 'ಗಣಪ'ದಲ್ಲಿ ಇಂದು 'Zooಮ್' ಚಿತ್ರದ ಪತ್ರಿಕಾಗೋಷ್ಟಿ ನಡೆಯಿತು.


ಪ್ರೆಸ್ ಮೀಟ್ ನಲ್ಲಿ 'Zooಮ್' ಚಿತ್ರದ ಕಲೆಕ್ಷನ್ ರಿಪೋರ್ಟ್ ನ ನಿರ್ದೇಶಕ ಪ್ರಶಾಂತ್ ರಾಜ್ ಬಹಿರಂಗ ಪಡಿಸಿದರು. ಹಾಗಾದ್ರೆ, 'Zooಮ್' ಎಷ್ಟು ಕಲೆಕ್ಷನ್ ಮಾಡಿರಬಹುದು ಅಂತ ಲೆಕ್ಕ ಹಾಕ್ತಿದ್ದೀರಾ.? ಅಂಕಿ ಅಂಶ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....


ಮೂರು ದಿನಗಳ ಒಟ್ಟಾರೆ ಕಲೆಕ್ಷನ್

ಮೂರು ದಿನಗಳ ಒಟ್ಟಾರೆ ಕಲೆಕ್ಷನ್

'Zooಮ್' ಚಿತ್ರ ಮೊದಲನೇ ದಿನ 1 ಕೋಟಿ 45 ಲಕ್ಷ ವಸೂಲ್ ಮಾಡಿದ್ರೆ, ಎರಡನೇ ದಿನ 1 ಕೋಟಿ 60 ಲಕ್ಷ ಹಾಗೂ ಮೂರನೇ ದಿನ 2 ಕೋಟಿ 18 ಲಕ್ಷ ಕಮಾಯಿ ಮಾಡಿದೆ. ಅಂದ್ರೆ, ಮೂರು ದಿನಗಳಲ್ಲಿ 'Zooಮ್' ಮಾಡಿರುವ ಒಟ್ಟಾರೆ ಕಲೆಕ್ಷನ್ ಬರೋಬ್ಬರಿ 5 ಕೋಟಿ 23 ಲಕ್ಷ. [ಚಿತ್ರ ವಿಮರ್ಶೆ: 'Zooಮ್' ಮಾಡಿ ನೋಡಿದ್ರೂ, 'ಜುಮ್' ಎನಿಸದು.!]


ಗಣೇಶ್ ಪಾಲಿಗೆ ಇದು ನಿರೀಕ್ಷಿತ 'ಬ್ರೇಕ್'

ಗಣೇಶ್ ಪಾಲಿಗೆ ಇದು ನಿರೀಕ್ಷಿತ 'ಬ್ರೇಕ್'

ಕಳೆದ ಒಂದು ವರ್ಷದಿಂದ ಗಣೇಶ್ ಚಿತ್ರಗಳ ಪೈಕಿ ಇದು 'ಅತಿಹೆಚ್ಚು' ಕಲೆಕ್ಷನ್ ಮಾಡಿರುವ ಚಿತ್ರ. ['ಆ' ತರಹದ ಸಿನಿಮಾ ಮಾಡುವ ಜರೂರತ್ತು ಗಣೇಶ್ ಗೆ ಇಲ್ಲ.!]


ಊರ್ವಶಿ ಚಿತ್ರಮಂದಿರದಲ್ಲಿ ಹೌಸ್ ಫುಲ್

ಊರ್ವಶಿ ಚಿತ್ರಮಂದಿರದಲ್ಲಿ ಹೌಸ್ ಫುಲ್

ಪರಭಾಷೆಯ ಚಿತ್ರಗಳಿಗೆ ಫೇಮಸ್ ಆಗಿರುವ ಊರ್ವಶಿ ಚಿತ್ರಮಂದಿರದಲ್ಲಿ 'Zooಮ್' ಸಿನಿಮಾ ಎರಡು ಬಾರಿ ಹೌಸ್ ಫುಲ್ ಪ್ರದರ್ಶನ ಕಂಡಿದ್ರೆ, 'ಕಾವೇರಿ' ಚಿತ್ರಮಂದಿರದಲ್ಲಿ ಒಂದು ಶೋ ಫುಲ್ ಆಗಿದೆ.


ಪೂಣೆಯಲ್ಲೂ ನೂಕುನುಗ್ಗಲು

ಪೂಣೆಯಲ್ಲೂ ನೂಕುನುಗ್ಗಲು

ಬರೀ ಕರ್ನಾಟಕ ಮಾತ್ರ ಅಲ್ಲ, ಭಾರತದಾದ್ಯಂತ 31 ಸೆಂಟರ್ ನಲ್ಲಿ ರಿಲೀಸ್ ಆಗಿರುವ 'Zooಮ್' ಚಿತ್ರಕ್ಕೆ ಪೂಣೆಯಲ್ಲೂ 'ಹೌಸ್ ಫುಲ್' ಬೋರ್ಡ್ ಬಿದ್ದಿದೆ.


ಲಂಡನ್ ನಲ್ಲಿ ರಿಲೀಸ್

ಲಂಡನ್ ನಲ್ಲಿ ರಿಲೀಸ್

ಲಂಡನ್ ನಲ್ಲಿ ಇದೇ 9 ನೇ ತಾರೀಖು 'Zooಮ್' ಬಿಡುಗಡೆ ಆಗಲಿದೆ.


ಸಂಭ್ರಮಾಚರಣೆ

ಸಂಭ್ರಮಾಚರಣೆ

ಉತ್ತಮ ಪ್ರದರ್ಶನ ಕಾಣುತ್ತಿರುವ 'Zooಮ್' ಚಿತ್ರಕ್ಕೆ ಮತ್ತಷ್ಟು 'ಬತ್ತಾಸ್' ನೀಡಲು ಗಣೇಶ್ ಹಾಗೂ ಇಡೀ ಚಿತ್ರತಂಡ ಈ ಭಾನುವಾರ ಮೈಸೂರಿಗೆ ತೆರಳಲಿದೆ. 25ನೇ ದಿನದ ಸಂಭ್ರಮಾಚರಣೆ ಉತ್ತರ ಕರ್ನಾಟಕದಲ್ಲಿ ನಡೆಯಲಿದೆ.


English summary
Golden Star Ganesh and Radhika Pandit starrer Kannada Movie 'Zoom' has collected 5 crores 23 lakhs in just 3 days at Boxoffice.
Please Wait while comments are loading...

Kannada Photos

Go to : More Photos