»   » ಕಮಲ್ ಹಾಸನ್-ಗೌತಮಿಯ 13 ವರ್ಷಗಳ ಸಂಬಂಧ ಅಂತ್ಯ

ಕಮಲ್ ಹಾಸನ್-ಗೌತಮಿಯ 13 ವರ್ಷಗಳ ಸಂಬಂಧ ಅಂತ್ಯ

ಖ್ಯಾತ ನಟ ಕಮಲ್ ಹಾಸನ್ ಹಾಗೂ ನಟಿ ಗೌತಮಿಯವರ 13 ವರ್ಷಗಳ ಸುದೀರ್ಘ 'ಲಿವ್ ಇನ್ ರಿಲೇಶನ್ ಶಿಪ್' ಅಂತ್ಯಗೊಂಡಿದೆ. ಈ ವಿಚಾರವನ್ನು ಖುದ್ದು ಗೌತಮಿಯವರೇ ತಮ್ಮ ಟ್ವಿಟ್ಟರ್ ಬ್ಲಾಗ್ ನಲ್ಲಿ ಖಚಿತ ಪಡಿಸಿದ್ದಾರೆ

Written by:
Subscribe to Filmibeat Kannada

ಭಾರತ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಹಾಗೂ ನಟಿ ಗೌತಮಿಯವರ 13 ವರ್ಷಗಳ ಸುದೀರ್ಘ 'ಲಿವ್ ಇನ್ ರಿಲೇಶನ್ ಶಿಪ್' ಅಂತ್ಯಗೊಂಡಿದೆ. ಈ ವಿಚಾರವನ್ನು ಖುದ್ದು ಗೌತಮಿಯವರೇ ತಮ್ಮ ಟ್ವಿಟರ್ ಬ್ಲಾಗ್ ನಲ್ಲಿ ಖಚಿತ ಪಡಿಸಿದ್ದಾರೆ.


ಕಳೆದ ಎರಡು ವರ್ಷಗಳಿಂದ ಇಬ್ಬರ ನಡುವಿನ ಸಂಬಂಧ ಸ್ವಲ್ಪ ಮಟ್ಟಿಗೆ ಸರಿಯಿರಲಿಲ್ಲ ಎಂದು ಹೇಳಲಾಗುತ್ತಿತ್ತು. ಕೆಲ ತಿಂಗಳು ಗಳಿಂದ ಗೌತಮಿಯವರನ್ನು ಕಮಲ್ ಹಾಸನ್ ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿತ್ತು. ಇನ್ನೂ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಅಭಿನಯದ ಚಿತ್ರವೊಂದಕ್ಕೆ ಸಂಬಂಧಪಟ್ಟಂತೆ ಗೌತಮಿ ಮೂಗು ತೂರಿಸುತ್ತಿದ್ದಾರೆಂಬ ವಿಚಾರ ಕೂಡ ಸುದ್ದಿಯಾಗಿತ್ತು.[ಮಗಳು-ಪ್ರಿಯತಮೆಯ ಜಗಳದಿಂದ ಹೈರಾಣಾದ ಕಮಲ್ ಹಾಸನ್]


1998 ರಲ್ಲಿ ಉದ್ಯಮಿ ಸಂದೀಪ್ ಭಾಟಿಯಾ ಜೊತೆ ವಿವಾಹವಾಗಿದ್ದ ಗೌತಮಿ, ಕೇವಲ ಒಂದೇ ವರ್ಷದಲ್ಲಿ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದರು. 2005 ರಿಂದ ಕಮಲ್ ಹಾಸನ್ ಹಾಗೂ ಗೌತಮಿ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು. ಈಗ ಈ ಸಂಬಂಧ ಅಂತ್ಯ ಕಂಡಿದೆ. ಈ ವಿಚಾರವಾಗಿ ಗೌತಮಿಯವರು ಒಂದು ಲೆಟರ್ ಬರೆದು ಟ್ವೀಟ್ ಮಾಡಿದ್ದಾರೆ.


ಹಾಗಾದ್ರೆ ಬನ್ನಿ ಗೌತಮಿಯವರು ತಮ್ಮ ಟ್ವಿಟ್ಟರ್ ನಲ್ಲಿ ಏನು ಬರೆದುಕೊಂಡಿದ್ದಾರೆ ಅಂತಾ ನೋಡೋಣ.

ತುಂಬಾ ಬೇಜಾರಾಗಿದೆ

ತುಂಬಾ ಬೇಜಾರಾಗಿದೆ

''ನಾನು ಮತ್ತು ಕಮಲ್ ಹಾಸನ್ ಜೊತೆಯಲಿಲ್ಲ ಎಂದು ಹೇಳಲು ತುಂಬಾ ಬೇಜಾರಾಗುತ್ತಿದೆ. 13 ವರ್ಷಗಳ ಸಾಂಗತ್ಯ ಕೊನೆಯಾಗಿದೆ. ಜೀವನದಲ್ಲಿ ಈ ಕಠಿಣ ನಿರ್ಧಾರ ಕೈಗೊಳ್ಳಲು ಅನಿವಾರ್ಯವಾಗಿತ್ತು. ಸಂಬಂಧದಲ್ಲಿ ಇಬ್ಬರ ಹಾದಿ ಬದಲಾಗದ ರೀತಿಯಲ್ಲಿ ಬೇರೆಯಾಗಿದೆ ಎಂಬ ವಿಷಯ ಅರಗಿಸಿಕೊಳ್ಳುವುದು ಸುಲಭವಲ್ಲ.''-ಗೌತಮಿ[ಕಾಲಿನ ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಕಮಲ್ ಹಾಸನ್]

ಇದು ಇವತ್ತಿನ ನಿರ್ಧಾರವಲ್ಲ

ಇದು ಇವತ್ತಿನ ನಿರ್ಧಾರವಲ್ಲ

''ನಮ್ಮ ಕನಸುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ಅಥವಾ ವಾಸ್ತವವನ್ನು ಒಪ್ಪಿಕೊಂಡು ನಮ್ಮ ನಮ್ಮ ದಾರಿಯಲ್ಲಿ ಮುಂದುವರೆಯುವುದು ಆಯ್ಕೆ ನಮ್ಮ ಮುಂದಿರುತ್ತದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ. ಒಂದೆರೆಡು ವರ್ಷಗಳ ನಂತರ ಕಹಿಸತ್ಯವನ್ನ ಒಪ್ಪಿಕೊಂಡು ಈ ನಿರ್ಧಾರಕ್ಕೆ ಬಂದಿದ್ದೇನೆ. ಈ ಮೂಲಕ ಅನುಕಂಪ ಪಡೆಯುವ ಅಥವಾ ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಉದ್ದೇಶ ನನಗಿಲ್ಲ''.-ಗೌತಮಿ

ಬದಲಾವಣೆ ಅನಿವಾರ್ಯ

ಬದಲಾವಣೆ ಅನಿವಾರ್ಯ

''ಬದಲಾವಣೆ ಅನಿವಾರ್ಯ ಎಂಬುದು ಜೀವನ ನನಗೆ ಅರ್ಥಮಾಡಿಸಿದೆ. ಎಲ್ಲ ಬದಲಾವಣೆಗಳು ನಾವು ನಿರೀಕ್ಷಿಸಿದಂತೆ ಇರುವುದಿಲ್ಲ. ಆದ್ಯತೆಗಳು ಸಂಬಂಧದ ದಿಕ್ಕನ್ನು ಬದಲಿಸುತ್ತವೆ''.-ಗೌತಮಿ

ಇದು ನನ್ನ ಸ್ವಂತ ನಿರ್ಧಾರ

ಇದು ನನ್ನ ಸ್ವಂತ ನಿರ್ಧಾರ

''ಬದುಕಿನ ಈ ಕಾಲಘಟ್ಟದಲ್ಲಿ ಸ್ವ-ಇಚ್ಛೆಯಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಯಾವುದೇ ಮಹಿಳೆಗೆ ಇಂಥ ನಿರ್ಣಯ ಕೈಗೊಳ್ಳುವುದು ಸುಲಭದ ಮಾತಲ್ಲ. ಆದರೆ, ನನಗೆ ಇದು ಅನಿವಾರ್ಯವಾಗಿತ್ತು''.-ಗೌತಮಿ

ನನಗೆ ನನ್ನ ಮಗುವಿನ ಭವಿಷ್ಯ ಮುಖ್ಯ

ನನಗೆ ನನ್ನ ಮಗುವಿನ ಭವಿಷ್ಯ ಮುಖ್ಯ

''ತಾಯಿಯಾಗಿ ನನಗೆ ಮಗುವಿನ ಜವಾಬ್ದಾರಿಯಿದೆ. ಆ ಮಗುವಿಗೆ ಒಳ್ಳೆಯ ತಾಯಿ ಆಗಬೇಕಿದೆ. ಅದು ನನ್ನ ಮೊದಲ ಆದ್ಯತೆ. ಈ ಜವಾಬ್ದಾರಿ ನಿಭಾಯಿಸಲು ನನ್ನ ಮನಸ್ಥಿತಿ ಶಾಂತವಾಗಿರಬೇಕು''.-ಗೌತಮಿ

ಕಮಲ್ ಅವರ ಅಭಿಮಾನ ಹಾಗೆ ಇರುತ್ತೆ

ಕಮಲ್ ಅವರ ಅಭಿಮಾನ ಹಾಗೆ ಇರುತ್ತೆ

''ಸಿನಿಮಾ ಜಗತ್ತಿಗೆ ಪ್ರವೇಶಿಸುವ ಮೊದಲಿನಿಂದಲೂ ನಾನು ಕಮಲ್ ಹಾಸನ್ ಅವರ ಅಭಿಮಾನಿ ಆಗಿದ್ದೆ ಎಂಬ ವಿಷಯ ಸುಳ್ಳಲ್ಲ. ಅವರ ಬಗೆಗಿನ ಅಭಿಮಾನ ಮುಂದುವರೆಯುವುದು. ಅವರ ಪ್ರತಿಭೆ ಹಾಗೂ ಸಾಧನೆ ಬಗ್ಗೆ ಮೆಚ್ಚುಗೆ ಇದ್ದೇ ಇದೆ''. -ಗೌತಮಿ

ಅವರಿಂದ ಸಾಕಷ್ಟು ಕಲಿತಿದ್ದೇನೆ

ಅವರಿಂದ ಸಾಕಷ್ಟು ಕಲಿತಿದ್ದೇನೆ

''ಅವರ ಜೀವನದ ಏಳುಬೀಳುಗಳಲ್ಲಿ ನಾನು ಅವರ ಜೊತೆಯಾಗಿದ್ದೆ, ಆ ಎಲ್ಲ ಕ್ಷಣಗಳು ಅವಿಸ್ಮರಣೀಯ. ಅವರ ಚಿತ್ರಗಳಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿ ಸಾಕಷ್ಟು ವಿಷ್ಯಗಳನ್ನ ಕಲಿತ್ತಿದ್ದೇನೆ. ಆ ಕೆಲಸಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ಹೆಮ್ಮೆ ಇದೆ''.-ಗೌತಮಿ

ಈ ವಿಷಯ ಹೇಳಲು ಕಾರಣವಿದೆ

ಈ ವಿಷಯ ಹೇಳಲು ಕಾರಣವಿದೆ

''ಮುಂಬರುವ ದಿನಗಳಲ್ಲಿ ಅವರ ಅಭಿಮಾನಿಗಳು ಅವರಿಂದ ಮತ್ತಷ್ಟು ಒಳ್ಳೆಯ ಚಿತ್ರಗಳನ್ನ ನಿರೀಕ್ಷಿಸಬಹುದು. ಯಶಸ್ಸಿನ ದಿನಗಳನ್ನ ಎದುರು ನೋಡುತ್ತೇನೆ. ಈ ವಿಷಯ ಬಹಿರಂಗಪಡಿಸಲು ಕಾರಣವಿದೆ. ಇಷ್ಟು ದಿನ ನಾನು ನಿಮ್ಮೆಲ್ಲರ ಮಧ್ಯೆ ಬದುಕಿದ್ದೇನೆ''.-ಗೌತಮಿ

ಎಲ್ಲರಿಗೂ ಧನ್ಯವಾದ

ಎಲ್ಲರಿಗೂ ಧನ್ಯವಾದ

''ಕಳೆದ 29 ವರ್ಷಗಳಿಂದ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಪಾತ್ರಳಾಗಿ ಬೆಂಬಲ ಪಡೆದಿದ್ದೇನೆ. ಈ ಕಾರಣಕ್ಕೆ ನನ್ನ ಬದುಕಿನ ದೊಡ್ಡ ನಿರ್ಧಾರವನ್ನ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಜೀವನದ ಕಷ್ಟದ ದಿನಗಳಲ್ಲೂ ನನ್ನ ಬೆನ್ನಿಗಿದ್ದು, ಸಹಕರಿಸಿದ ಎಲ್ಲರಿಗೂ ಧನ್ಯವಾದ''- ಗೌತಮಿ

English summary
South Indian actor Kamal Haasan and actress Gauthami who were living together for the last 13 years have separated. Gauthami has announced the separation through a writing on her blog.
Please Wait while comments are loading...

Kannada Photos

Go to : More Photos