twitter
    For Quick Alerts
    ALLOW NOTIFICATIONS  
    For Daily Alerts

    'ಗೋವಿಂದ'ನ ಗೂಗ್ಲಿಗೆ ತೆಲುಗು ಪ್ರೇಕ್ಷಕರು ಔಟ್

    By Rajendra
    |

    ಗೋವಿಂದಾಯ ನಮಃ ಹಾಗೂ ಗೂಗ್ಲಿ ಚಿತ್ರಗಳ ನಿರ್ದೇಶಕ ಪವನ್ ಒಡೆಯರ್ ತೆಲುಗು ಬಾಕ್ಸ್ ಆಫೀಸ್ ನಲ್ಲೂ ಗೆದ್ದು ಬಂದಿದ್ದಾರೆ. ಕನ್ನಡದಲ್ಲಿ ಭರ್ಜರಿ ಯಶಸ್ಸು ಸಾಧಿಸಿದ ಗೋವಿಂದಾಯ ನಮಃ ಚಿತ್ರ ತೆಲುಗಿನಲ್ಲಿ 'ಪೋಟುಗಾಡು' ಎಂಬ ಹೆಸರಿನಲ್ಲಿ ರೀಮೇಕ್ ಆಗಿದೆ.

    ಮೋಹನ್ ಬಾಬು ಅವರ ಪುತ್ರ ಮಂಚು ಮನೋಜ್ ಮುಖ್ಯಭೂಮಿಕೆಯಲ್ಲಿರುವ 'ಪೋಟುಗಾಡು' ಚಿತ್ರ ಬಾಕ್ಸ್ ಆಫೀಸಲ್ಲಿ ಗೆದ್ದಿದೆ. ಈ ಚಿತ್ರಕ್ಕೆ ತೆಲುಗು ಮಾಧ್ಯಮಗಳಲ್ಲಿ ಅಷ್ಟೇನು ಮೆಚ್ಚುಗೆ ವ್ಯಕ್ತವಾಗಿರಲಿಲ್ಲ. ಆದರೆ ಬಕ್ಸ್ ಆಫೀಸಲ್ಲಿ ಮಾತ್ರ ಸದ್ದು ಮಾಡಿದೆ. [ಗೋವಿಂದಾಯ ನಮಃ ಚಿತ್ರ ವಿಮರ್ಶೆ]

    Potugadu working still
    ಮನೋಜ್ ಅಭಿನಯದ ಚಿತ್ರಗಳ ನೂರು ದಿನಗಳಲ್ಲಿ ಮಾಡುವ ಕಲೆಕ್ಷನ್ ಪೋಟುಗಾಡು ಚಿತ್ರ ಎರಡೇ ದಿನಗಳಲ್ಲಿ ಮಾಡಿದೆ. ಈ ಹಿಂದೆ ತಮ್ಮ ಲಾಂಛನದಲ್ಲಿ ನಿರ್ಮಾಣವಾದ ಎವಡಿ ಗೋಲ ವಾಡಿದಿ ಚಿತ್ರದ 175 ದಿನಗಳ ಕಲೆಕ್ಷನ್ ಈಸ್ ಈಕ್ವಲ್ ಟು ಪೋಟುಗಾಡು ಚಿತ್ರದ ಎರಡು ದಿನದ ಕಲೆಕ್ಷನ್ ಎನ್ನುತ್ತಿದ್ದಾರೆ ಚಿತ್ರದ ನಿರ್ಮಾಪಕ ಲಗಡಪಾಟಿ ಶ್ರೀಧರ್.

    ಮಂಚು ಮನೋಜ್ ಜೊತೆಗೆ ಈ ಚಿತ್ರದಲ್ಲಿ ಸಾಕ್ಷಿ ಚೌದರಿ, ಸಿಮ್ರಾನ್ ಕೌರ್ ಮುಂಡಿ, ರೇಚಲ್ ವೇಸ್, ಅನುಪ್ರಿಯಾ ಮುಖ್ಯಭೂಮಿಕೆಯಲ್ಲಿದ್ದಾರೆ. ಇದು ತೆಲುಗು ಚಿತ್ರವಾದರೂ ಬಿಜಾಪುರ, ಬೆಂಗಳೂರುನಲ್ಲಿ ಬಹುತೇಕ ಭಾಗವನ್ನು ಚಿತ್ರೀಕರಿಸಿರುವುದು ವಿಶೇಷ.

    ರಾಮೋಜಿ ಫಿಲಂ ಸಿಟಿಯಲ್ಲೂ ಚಿತ್ರೀಕರಿಸಲಾಗಿದೆ. ಕೆಲವು ಸನ್ನಿವೇಶಗಳನ್ನು ಜೋಗ್ ಫಾಲ್ಸ್ ನಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಲಾಗಿತ್ತು. ಆದರೆ ಅಲ್ಲಿ ಸಾಕಷ್ಟು ಹಸಿರು ಇಲ್ಲದ ಕಾರಣ ಶೂಟಿಂಗ್ ಕ್ಯಾನ್ಸಲ್ ಮಾಡಲಾಗಿತ್ತು. ಕಡೆಗೆ ಚಿತ್ರದ ಆತ್ಮಹತ್ಯೆ ದೃಶ್ಯಗಳನ್ನು ನಂದಿ ಬೆಟ್ಟದಲ್ಲಿ ಚಿತ್ರೀಕರಿಸಿಕೊಂಡೆವು ಎನ್ನುತ್ತಾರೆ ಪವನ್. (ಏಜೆನ್ಸೀಸ್)

    English summary
    Potugadu, remade of Kannada film Govindaya Namaha, is Manchu Manoj's biggest hit so far says producer Lagadapati Sridhar. The film is foraying into second week after release. Lagadapati Sridhar informed that the film has already collected the amount that normally happens for a Manoj film during the 100 days after the film release.
    Saturday, September 21, 2013, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X