»   » ವಿನಯ್ ರಾಜ್ 'ರನ್ ಆಂಟನಿ'ಗೆ ನಿರ್ಮಾಪಕರು ಯಾರು ಗೊತ್ತಾ?

ವಿನಯ್ ರಾಜ್ 'ರನ್ ಆಂಟನಿ'ಗೆ ನಿರ್ಮಾಪಕರು ಯಾರು ಗೊತ್ತಾ?

Posted by:
Subscribe to Filmibeat Kannada

ನಟ ಸಾರ್ವಭೌಮ ಡಾ.ರಾಜ್ ಅವರ ಮೊಮ್ಮಗ ವಿನಯ್ ರಾಜ್ ಕುಮಾರ್ ಅವರು 'ರನ್ ಆಂಟನಿ' ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಎಂದು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೇ.

ಇದೀಗ 'ರನ್ ಆಂಟನಿ' ಚಿತ್ರಕ್ಕೆ ನಿರ್ಮಾಪಕರು ಯಾರು ಗೊತ್ತಾ?, ಸ್ವತಃ ವಿನಯ್ ರಾಜ್ ಕುಮಾರ್ ಅವರ ಸಹೋದರ ಗುರುರಾಜ್ ಕುಮಾರ್ ಅವರು ತಮ್ಮ ಅಣ್ಣನ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಇದೇ ಮೊದಲ ಬಾರಿಗೆ ನಿರ್ಮಾಪಕನ ಪಟ್ಟ ಹೊತ್ತುಕೊಂಡಿದ್ದಾರೆ.

ಈ ಮೂಲಕ ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದೆ. 'ರನ್ ಆಂಟನಿ' ಎಂಬ ಆಕ್ಷನ್-ಥ್ರಿಲ್ಲರ್ ಸಿನಿಮಾವನ್ನು ನಿರ್ದೇಶಕ ರಘು ಶಾಸ್ತ್ರಿ ಅವರು ನಿರ್ದೇಶನ ಮಾಡುತ್ತಿದ್ದು, ರಾಜ್ ಕುಟುಂಬದ ಒಡೆತನದ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.['ರನ್ ಆಂಟನಿ' ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಡಾ.ರಾಜ್ ಮೊಮ್ಮಗ.!]

ಅಂದಹಾಗೆ ಈ ಚಿತ್ರಕ್ಕೆ ಇಬ್ಬರು ನಾಯಕಿಯರ ಅವಶ್ಯಕತೆಯಿದ್ದು, ಹೊಸ ಮುಖಗಳ ಹುಡುಕಾಟದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಅಂತೂ ಇಂತೂ ವಜ್ರೇಶ್ವರಿ ಕಂಬೈನ್ಸ್ ಮೂಲಕ ಎರಡು ಹೊಸ ಪ್ರತಿಭೆಗಳ ಅನಾವರಣ ಆಗುತ್ತಿದೆ. ಡಿಸೆಂಬರ್ 14 ರಂದು ಚಿತ್ರದ ಮೂಹೂರ್ತ ಕಾರ್ಯಕ್ರಮ ನೆರವೇರಲಿದೆ.

ಗುರುರಾಜ್ ಅವರು ಸಹೋದರ ವಿನಯ್ ರಾಜ್ ಅವರ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ನಿಜವೇ ಆದರು ಕೂಡ ಅದರ ಮೇಲ್ವಿಚಾರಣೆಯನ್ನು ಮಾತ್ರ ಅವರ ತಂದೆ ರಾಘವೇಂದ್ರ ರಾಜ್ ಕುಮಾರ್ ಅವರು ವಹಿಸಿಕೊಳ್ಳಲಿದ್ದಾರೆ.

ಈ ಮೊದಲು ವಿನಯ್ ರಾಜ್ ಕುಮಾರ್ ಅವರ 'ಸಿದ್ದಾರ್ಥ' ಚಿತ್ರವನ್ನು ಪ್ರಕಾಶ್ ಅವರು ನಿರ್ದೇಶನ ಮಾಡಿದ್ದರು. ಎರಡನೇ ಚಿತ್ರ 'ಆರ್ ದಿ ಕಿಂಗ್' ನಿರ್ದೇಶಕ ಪ್ರೇಮ್ ಅವರು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಅರ್ಧಕ್ಕೆ ನಿಂತುಹೋಗಿದೆ. ಇದೀಗ 'ರನ್ ಆಂಟನಿ'ಗೆ ರಘು ಶಾಸ್ತ್ರಿ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ.

English summary
The muhurath date for Vinay Rajkumar-starrer Run Antony has finally fixed the muhurath date for December 14. The latest news is that the film directed Raghu Shastry to be a thriller will see Vinay’s brother Guru Rajkumar turning producer, which news they plan to officially announce on the occassion. The film is made under their home banner, Vajreshwari Combines.
Please Wait while comments are loading...

Kannada Photos

Go to : More Photos