twitter
    For Quick Alerts
    ALLOW NOTIFICATIONS  
    For Daily Alerts

    ಯಶ್ ಗೆ 'ಗಜಕೇಸರಿ' ಮೇಕಿಂಗ್ ವಿಡಿಯೋ ಗಿಫ್ಟ್

    By Mahesh
    |

    ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಮಹತ್ವಾಕಾಂಕ್ಷಿ ಚಿತ್ರ ಗಜಕೇಸರಿಯ ಝಲಕ್ ಅಭಿಮಾನಿಗಳ ಮುಂದಿಡಲಾಗಿದೆ. 2013ರಲ್ಲಿ ಗೂಗ್ಲಿ, ರಾಜಾಹುಲಿ ಭರ್ಜರಿ ಯಶಸ್ವಿ ಚಿತ್ರಗಳ ನಾಯಕರಾಗಿರುವ ಯಶ್ ಅವರು ಹೊಸಬಗೆಯ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಥ್ರಿಲ್ ಮೂಡಿಸಿದ್ದಾರೆ.

    ಹುಟ್ಟುಹಬ್ಬದ ಆಚರಣೆಗಾಗಿ ಯಶ್ ಅಭಿಮಾನಿಗಳು ನಿನ್ನೆ ರಾತ್ರಿಯಿಂದಲೇ ಯಶ್ ಮನೆ ಮುಂದೆ ಜಮಾಯಿಸಿದ್ದರು. 'ಯಶ್ ಅವರ ಹುಟ್ಟುಹಬ್ಬಕ್ಕಾಗಿಯೇ ಗಜಕೇಸರಿ ಚಿತ್ರ ತಂಡ ವಿಶೇಷವಾದ ಮೇಕಿಂಗ್ ವಿಡಿಯೋ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ.

    ಸುಮಾರು ಆರೇಳು ತಿಂಗಳುಗಳ ಕಾಲ ಚಿತ್ರ ತಂಡ ಪಟ್ಟ ಪರಿಶ್ರಮದ ಝಲಕ್ ಅಭಿಮಾನಿಗಳಿಗೆ ಸಿಗಲಿದೆ. ಚಿತ್ರೀಕರಣದ ದೃಶ್ಯಗಳ ಜತೆಗೆ ಗಜಕೇಸರಿ ಸಿನಿಮಾದ ಎರಡು ತುಣುಕುಗಳನ್ನು ಮೂರು ನಿಮಿಷದ ವಿಡಿಯೋದಲ್ಲಿ ಕಾಣಬಹುದು. ಯಶ್ ಅಭಿಮಾನಿಗಳ ಸಮ್ಮುಖದಲ್ಲಿ ಮನೆಯ ಮುಂದೆಯೇ ಮಧ್ಯರಾತ್ರಿ ಪ್ರದರ್ಶನ ಮಾಡಿದ್ದು ಖುಷಿ ಕೊಟ್ಟಿದೆ ಎಂದು ನಿರ್ದೇಶಕ ಕೃಷ್ಣ ಸಂಭ್ರಮದಿಂದ ಹೇಳಿದ್ದಾರೆ. ಯಶ್ ವಿಭಿನ್ನ ಗೆಟೆಪ್ ನಲ್ಲಿ ಕಾಣಿಸಿಕೊಂಡಿರುವ ಗಜಕೇಸರಿ ಚಿತ್ರದ ಬಗ್ಗೆ ಇನ್ನೊಂದಿಷ್ಟು ಮಾಹಿತಿ, ಗಜಕೇಸರಿ ಚಿತ್ರತಂಡದ ಪರಿಚಯ ನಿಮ್ಮ ಮುಂದಿದೆ.

    ಗಜಕೇಸರಿ ಚಿತ್ರಕ್ಕೆ ಅನುಭವಿಗಳ ತಂಡ

    ಗಜಕೇಸರಿ ಚಿತ್ರಕ್ಕೆ ಅನುಭವಿಗಳ ತಂಡ

    ನಿರ್ದೇಶಕ ಯೋಗರಾಜಭಟ್ಟರ ಗರಡಿಯ ಛಾಯಾಗ್ರಾಹಕ ಕೃಷ್ಣ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ವಿಕ್ಟರಿ ಯಂಥ ಹಿಟ್ ಸಿನಿಮಾ ನೀಡಿರುವ ತರುಣ್ ಸುಧೀರ್ ಈ ಚಿತ್ರಕ್ಕೆ ಕೋ-ಡೈರೇಕ್ಟರ್. ಮುಖ್ಯವಾದ ವಿಷಯ ಎಂದರೆ ಈ ಚಿತ್ರಕ್ಕೆ ಯೋಗರಾಜ ಭಟ್ ಅವರು ಕಥೆ ಒದಗಿಸಿದ್ದಾರೆ.

    ಸತ್ಯ ಹೆಗ್ಡೆ ಕ್ಯಾಮೆರಾ ಹಿಂದಿದ್ದರೆ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ಟರ ಸಾಹಿತ್ಯವಿದೆ. ಕಲೆ ವಿಭಾಗದಲ್ಲಿ ಮೋಹನ್, ರವಿವರ್ಮ ಸಾಹಸ, ಹರಿಕೃಷ್ಣ ಸಂಗೀತವಿರುವ ಈ ಚಿತ್ರವನ್ನು ಜಯಣ್ಣ ಕಂಬೈನ್ಸ್ ನಿರ್ಮಿಸಿದೆ.

    ಹಲವು ಮೊದಲುಗಳ ಸಂಗಮ

    ಹಲವು ಮೊದಲುಗಳ ಸಂಗಮ

    ಕೃಷ್ಣ ಅವರು ನಿರ್ದೇಶಕನಾಗಿ ಬಡ್ತಿ ಪಡೆದಿರುವುದು, ಯಶ್ ಚಿತ್ರ ಮೊದಲ ಬಾರಿಗೆ ನಿರ್ದೇಶಿಸುತ್ತಿರುವುದು, ಅಮೂಲ್ಯ ಹಾಗೂ ಯಶ್ ಮೊದಲ ಬಾರಿಗೆ ಜೋಡಿಯಾಗಿರುವುದು, ಹಿಟ್ ಚಿತ್ರ ನೀಡಿ ಕೂಡಾ ಸಹಾಯಕ ನಿರ್ದೇಶಕರಾಗಿ ತರುಣ್ ಸುಧೀರ್ ಅವರು ಕಲಿಕೆಗಾಗಿ ಈ ಚಿತ್ರದಲ್ಲಿ ದುಡಿದಿರುವುದು ಚಿತ್ರದ ಹೈಲೇಟ್ ಎನಿಸಲಿದೆ.

    ಗಜಕೇಸರಿ ಹೆಸರು ನೀಡಿದ್ದು ಯಾರು?

    ಗಜಕೇಸರಿ ಹೆಸರು ನೀಡಿದ್ದು ಯಾರು?

    ಯಶ್ ಅವರ ಚಿತ್ರದ ಹೆಸರುಗಳು ವಿಭಿನ್ನವಾಗಿ ಅಭಿಮಾನಿಗಳನ್ನು ತಕ್ಷಣವೇ ಸೆಳೆದು ಬಿಡುತ್ತದೆ ಎಂಬ ಮಾತಿದೆ. ಗಜಕೇಸರಿ ಚಿತ್ರ ರಾಜಾಜಿನಗರದ ಮೋದಿ ಹಾಸ್ಪಿಟಲ್ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಆಚರಿಸಿಕೊಂಡಾಗ ಚಿತ್ರಕ್ಕೆ ಹೆಸರು ಸೂಚಿಸಿದ್ದು ಯಾರು ಎಂಬ ಪ್ರಶ್ನೆ ಎದ್ದಿತ್ತು. ಈ ಚಿತ್ರಕ್ಕೆ ಹೆಸರು ಸೂಚಿಸಿದ್ದು ನನ್ನ ಒಳ್ಳೆ ಸ್ನೇಹಿತ ಪ್ರೇಮ್ ಎನ್ನುತ್ತಾರೆ ನಿರ್ದೇಶಕ ಕೃಷ್ಣ.

    ಚಿತ್ರೀಕರಣ ಎಲ್ಲಿ ಹೇಗೆ ಆಯ್ತು?

    ಚಿತ್ರೀಕರಣ ಎಲ್ಲಿ ಹೇಗೆ ಆಯ್ತು?

    ಚಿತ್ರದ ಬಹುತೇಕ ಚಿತ್ರೀಕರಣ ಥಾಯ್ಲೆಂಡ್ ನ‌ಲ್ಲಿ ನಡೆಸಲಾಗಿದೆ. ಥಾಯ್ಲೆಂಡಿನಲ್ಲಿ ಇಲ್ಲಿಗಿಂತ ಚೆನ್ನಾಗಿ ಪಳಗಿದ ಆನೆಗಳಿರುವುದು ಒಂದು ಕಾರಣ ಎನ್ನುತ್ತದೆ ಚಿತ್ರ ತಂಡ. ಥಾಯ್ಲೆಂಡಿನ ಎಲಿಫೆಂಟ್ ಪಾರ್ಕ್ ನಲ್ಲಿ 30 ಆನೆಗಳ ನಡುವೆ ಚಿತ್ರೀಕರಣ ನಡೆಸಲಾಗಿದೆ.

    ಕೇರಳದ 15 ಅಡಿ ಎತ್ತರದ ಅರ್ಜುನ ಎಂಬ ಆನೆ ಗಜಕೇಸರಿ ಯಶ್ ಸಂಗಾತಿಯಾಗಿ ವಿಶೇಷವಾಗಿ ಕಾಣಿಸಿಕೊಳ್ಳಲಿದೆ
    ಯಶ್ ಹೇರ್ ಸ್ಟೈಲ್ ವಿಶೇಷ

    ಯಶ್ ಹೇರ್ ಸ್ಟೈಲ್ ವಿಶೇಷ

    ಈ ಚಿತ್ರಕ್ಕಾಗಿ ಯಶ್ ತಮ್ಮ ಕೇಶ ವಿನ್ಯಾಸ ಬದಲಿಸಲಿದ್ದಾರೆ. ಪಾತ್ರಕ್ಕಾಗಿ ಇನ್ನಷ್ಟು ಉದ್ದಗೂದಲು ಬಿಟ್ಟಿದ್ದಾರೆ. ಮೂರು ಗಂಟೆಗಳ ಕಾಲ ಕೂದಲನ್ನು ಹೆಣೆದು ಅಂಟಿಸಿ ಉದ್ದ ಮಾಡಲಾಗಿದೆ.

    ಕೇಶ ವಿನ್ಯಾಸಕ್ಕಾಗಿ ಹೈದರಾಬಾದಿನ ಅಲೆಕ್ಸ್ ಎಂಬ ಹೇರ್ ಸ್ಟೈಲಿಸ್ಟ್ ಬಂದು ಯಶ್ ಗೆ ಹೊಸ ಹೇರ್ ಸ್ಟೈಲ್ ನೀಡಿದ್ದಾರೆ. ಹೊಸ ಹೇರ್ ಸ್ಟೈಲ್ ಫುಲ್ ಗೆಟೆಪ್ ಸಿಗಲು ಸುಮಾರು 12-16 ಗಂಟೆ ಬೇಕಂತೆ. ಉದ್ದ ಕೂದಲಿರುವ ಹೆಣ್ ಮಕ್ಕಳ ಕಷ್ಟ ಏನಂತಾ ಈಗ ಅರ್ಥ ಆಯ್ತು ಎಂದು ಯಶ್ ನಮಸ್ಕರಿಸುತ್ತಾರೆ.
     ಈ ಚಿತ್ರದಲ್ಲಿ ಅನಂತ್ ನಾಗ್ ಅವರು ಸ್ವಾಮೀಜಿ

    ಈ ಚಿತ್ರದಲ್ಲಿ ಅನಂತ್ ನಾಗ್ ಅವರು ಸ್ವಾಮೀಜಿ

    ಇತಿಹಾಸ ಪ್ರಸಿದ್ಧ ಮಠವೊಂದರ ಪೀಠಾಧ್ಯಕ್ಷರಾಗಿ ಅನಂತ ನಾಗ್ ಅವರು ಕಾಣಿಸುತ್ತಿದ್ದಾರೆ. ಚಿತ್ರದಲ್ಲಿ ಅವರದು ಗಂಭೀರ ಪಾತ್ರವಂತೆ. ಈ ಮಠದ 29ನೇ ಪೀಠಾಧ್ಯಕ್ಷರಾಗಿ ಅನಂತ್ ನಾಗ್ ದರ್ಶನ ನೀಡುತ್ತಿದ್ದಾರೆ. ಈ ಭಾಗದ ಚಿತ್ರೀಕರಣವನ್ನು ಈಗಾಗಲೆ ಮೈಸೂರು ಅರಮನೆ, ಕೆಆರ್ಎಸ್ ನ ವೇಣುಗೋಪಾಲ ಸ್ವಾಮಿ ಆಲಯದಲ್ಲಿ ಚಿತ್ರೀಕರಿಸಲಾಗಿದೆ.

    ಗಜಕೇಸರಿ ಚಿತ್ರ ಮೇಕಿಂಗ್ ವಿಡಿಯೋ

    ಯಶ್ ಅವರ ಹುಟ್ಟುಹಬ್ಬಕ್ಕಾಗಿಯೇ ಗಜಕೇಸರಿ ಚಿತ್ರ ತಂಡ ವಿಶೇಷವಾದ ಮೇಕಿಂಗ್ ವಿಡಿಯೋ

    English summary
    Happy Birthday to Actor Yash: Here is birthday gift to Yash making video of Gajakesari Movie. Gajakesari Staring Yash, Amulya in the lead directed by Krishna, Story penned by Yogaraj bhat.
    Wednesday, January 8, 2014, 12:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X