»   » 'ಹೆಬ್ಬುಲಿ ಕೃಷ್ಣ' ಮನೆಗೆ ಬಂತು ದುಬಾರಿ ಕಾರ್!

'ಹೆಬ್ಬುಲಿ ಕೃಷ್ಣ' ಮನೆಗೆ ಬಂತು ದುಬಾರಿ ಕಾರ್!

Posted by:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದ ಅಬ್ಬರ ಇನ್ನು ಥಿಯೇಟರ್ ಗಳಲ್ಲಿ ನಿಂತಿಲ್ಲ. ಅಷ್ಟರಲ್ಲಾಗ್ಲೆ 'ಹೆಬ್ಬುಲಿ' ನಿರ್ದೇಶಕರ ಮನೆ ಮುಂದೆ ದುಬಾರಿ ಕಾರ್ ಬಂದು ನಿಂತಿದೆ.

ಹೌದು, ''ಹೆಬ್ಬುಲಿ' ಚಿತ್ರ ಗೆದ್ದ ಖುಷಿಯಲ್ಲಿರುವ ನಿರ್ದೇಶಕ ಕೃಷ್ಣ ಅವರು ಹೊಸ ಕಾರ್ ಖರೀದಿಸಿದ್ದಾರೆ. '5599' ನಂಬರಿನಲ್ಲಿ ಬೂದು ಬಣ್ಣದ (Grey colour) ಆಡಿ ಕಾರ್ ತೆಗೆದುಕೊಂಡಿದ್ದಾರೆ.[ಸ್ಯಾಂಡಲ್ ವುಡ್ ನ 'ಆಲ್ ಟೈಮ್ ರೆಕಾರ್ಡ್' ಉಡೀಸ್ ಮಾಡಿದ 'ಹೆಬ್ಬುಲಿ']

Hebbuli Krishna Bought New Audi Car

ಇನ್ನು 'ಹೆಬ್ಬುಲಿ' ಕೃಷ್ಣ ಅವರು ಕಾರ್ ಕೊಂಡಿರುವುದಕ್ಕೆ ಕಿಚ್ಚ ಸುದೀಪ್ ಟ್ವಿಟ್ಟರ್ ಮೂಲಕ ಶುಭ ಕೋರಿದ್ದಾರೆ.['ಹೆಬ್ಬುಲಿ' ನಿರ್ದೇಶಕ ಕೃಷ್ಣ & ಸುದೀಪ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ..]

Hebbuli Krishna Bought New Audi Car

ಸದ್ಯ, ಕೃಷ್ಣ ನಿರ್ದೇಶನದ 'ಹೆಬ್ಬುಲಿ' ರಾಜ್ಯಾದ್ಯಂತ 25 ದಿನಗಳನ್ನ ಪೂರೈಸಿ, 50ನೇ ದಿನದತ್ತ ಮುನ್ನುಗ್ಗಿದೆ. ಇದಕ್ಕೂ ಮುಂಚೆ ಕನ್ನಡದ ಹಲವು ಚಿತ್ರಗಳಲ್ಲಿ ಸಿನಿಮಾಟೋಗ್ರಾಫರ್ ಆಗಿದ್ದರು. ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಗಜಕೇಸರಿ' ಚಿತ್ರವನ್ನ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಪಟ್ಟ ಪಡೆದುಕೊಂಡಿದ್ದರು. ಈಗ 'ಹೆಬ್ಬುಲಿ' ನಂತರ ಸುದೀಪ್ ಅವರ ಜೊತೆಯಲ್ಲೇ ಮತ್ತೊಂದು ಚಿತ್ರವನ್ನ ಮಾಡಲಿದ್ದಾರಂತೆ.

English summary
Director Krishna Bought New Audi Car. Krishna is Director of Kiccha Sudeep Starerr 'Hebbuli'
Please Wait while comments are loading...

Kannada Photos

Go to : More Photos