»   » ಒಬ್ಬ ಹೀರೋಯಿನ್ ಸಾಕಾಗಲ್ಲ ಇಬ್ಬರು ಬೇಕು!

ಒಬ್ಬ ಹೀರೋಯಿನ್ ಸಾಕಾಗಲ್ಲ ಇಬ್ಬರು ಬೇಕು!

Written by: ಜೀವನರಸಿಕ
Subscribe to Filmibeat Kannada

ಗಾಂಧಿನಗರ ಇತ್ತೀಚೆಗೆ ಹೊಸದೊಂದು ಟ್ರೆಂಡ್ ಕಡೆಗೆ ತನ್ನಷ್ಟಕ್ಕೆ ತಾನೇ ತೆರೆದುಕೊಂಡುಬಿಟ್ಟಿದೆ. ಒಂದು ಸ್ಟಾರ್ ಸಿನಿಮಾ ಅಂದ್ರೆ ಅಲ್ಲಿ ಇಬ್ಬರು ಹೀರೋಯಿನ್ ಗಳು ಇರಬೇಕು. ಇಬ್ಬರು ಹೀರೋಯಿನ್ ಗಳಿದ್ರೆ ಗ್ಲಾಮರ್ ಡಬ್ಬಲ್ ಆಗುತ್ತೆ ಅನ್ನೋದೇ ಚಿತ್ರತಂಡಕ್ಕೆ ಪ್ಲಸ್ ಪಾಯಿಂಟ್. ಹೇಳಿ ಕೇಳಿ ಇದು ಸುಲಭದ ವಿಚಾರ.

ಇಬ್ಬರು ಹೀರೋಗಳನ್ನು ಸೇರಿಸ್ಬೇಕು ಅಂದ್ರೆ ಕೋಟಿಗಳ ಲೆಕ್ಕದಲ್ಲಿ ಹಣ ಸುರೀಬೇಕು. ಆದ್ರೆ ಹೀರೋಯಿನ್ ಗಳಾದ್ರೆ ಲಕ್ಷಗಳಲ್ಲಿ ಸಿಕ್ಕಿಬಿಡ್ತಾರೆ. ಪೋಸ್ಟರ್ ನಲ್ಲಿ ಎಡಕ್ಕೊಂದು ಬಲಕ್ಕೊಂದು ಗ್ಲಾಮರ್ ಡಾಲ್ ಇಟ್ರೆ ಆಸೆಗಣ್ಣಿಂದ ಬರೋ ಪ್ರೇಕ್ಷಕರು ಮಿನಿಮಮ್ ಗ್ಯಾರಂಟಿ.

ಆದ್ರೆ ಈ ಟ್ರೆಂಡ್ ಕನ್ನಡದಲ್ಲ. ತೆಲುಗಿನಲ್ಲಿ ಶುರುವಾದ ಈ ಟ್ರೆಂಡ್ ರೀಮೇಕ್ ಸಿನಿಮಾಗಳ ಮೂಲಕ ಕನ್ನಡಕ್ಕೂ ಕಾಲಿಟ್ಟಿದೆ. ಕನ್ನಡದ ಸ್ಟಾರ್ ನಟರ ಸಿನಿಮಾಗಳಲ್ಲಂತೂ ಇಬ್ಬರು ನಟಿಯರು ಪಕ್ಕಾ. ಅದ್ರಲ್ಲೂ ಲೆಕ್ಕಾಚಾರದಂತೆ ಒಬ್ರು ಔಟ್ ಅಂಡ್ ಔಟ್ ಗ್ಲಾಮರಸ್ ಆದ್ರೆ ಮತ್ತೊಬ್ಬರು ಪ್ರೇಮ ಮತ್ತು ಫ್ಯಾಮಿಲಿ ಪ್ರೇಕ್ಷಕರಿಗೆ. ಅಂತಹಾ ಸಿನಿಮಾಗಳ ಲಿಸ್ಟ್ ಇಲ್ಲಿದೆ ನೋಡಿ.

ಅಂಬರೀಶ ಡಬ್ಬಲ್ ಧಮಾಕಾ

ಅಂಬರೀಶ ಡಬ್ಬಲ್ ಧಮಾಕಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಬೆಲ್ ಸ್ಟಾರ್ ಅಂಬಿ ಮತ್ತೆ ಒಂದಾಗಿ ಕಾಣಿಸಿಕೊಳ್ತಿರೋ ಅಂಬರೀಶ ಸಿನಿಮಾದಲ್ಲಿ ಗ್ಲಾಮರ್ ಗೆ ಪ್ರಿಯಾಮಣಿ ಇದ್ರೆ ಫ್ಯಾಮಿಲಿ ಪ್ರೇಕ್ಷಕರಿಗೆ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಇದ್ದಾರೆ.

ರಣವಿಕ್ರಮನಿಗೂ ಇಬ್ಬರು ರಾಣಿಯರು

ರಣವಿಕ್ರಮನಿಗೂ ಇಬ್ಬರು ರಾಣಿಯರು

ಪವರ್ ಸ್ಟಾರ್ ಪುನೀತ್ ಮುಂದಿನ ಸಿನಿಮಾ 'ರಣವಿಕ್ರಮ'ದಲ್ಲಿ ಟಾಲಿವುಡ್ ತಾರೆ ಅಂಜಲಿ, ಮತ್ತೊಬ್ಬ ಬೆಡಗಿ ಆಧಾ ಶರ್ಮ ಇಬ್ಬರು ಪವರ್ ಗೆ ಗ್ಲಾಮರ್ ನ ಸಾಥ್ ಕೊಡಲಿದ್ದಾರೆ.

ಖುಷಿ ಖುಷಿಯಾಗಿ ಎರಡು ತಗೊಳ್ಳಿ

ಖುಷಿ ಖುಷಿಯಾಗಿ ಎರಡು ತಗೊಳ್ಳಿ

'ಖುಷಿ ಖುಷಿಯಾಗಿ' ಚಿತ್ರ ತೆಲುಗಿನ ಗುಂಡೇಜಾರಿ ಗಲ್ಲಂತಯ್ಯಿಂದಿ ಚಿತ್ರದ ರೀಮೇಕ್. ಇಲ್ಲಿ ಅಮೂಲ್ಯಾ ಮುಖ್ಯಪಾತ್ರದಲ್ಲಿದ್ರೆ ನಂದಿನಿ ಮತ್ತೊಂದು ಪಾತ್ರ ಮಾಡಿದ್ದಾರೆ. ಇಬ್ಬರಲ್ಲಿ ಯಾರನ್ನ ಪ್ರೀತಿಸ್ತಿದ್ದೀನಿ ಅನ್ನೋ ಗೊಂದಲದ ಪಾತ್ರ ಗಣೇಶ್ ರದ್ದು.

'ನೀನಾದೆನಾ'ದಲ್ಲೂ ಹೀರೋಯಿನ್ ಗಳ ನೀನಾದ

'ನೀನಾದೆನಾ'ದಲ್ಲೂ ಹೀರೋಯಿನ್ ಗಳ ನೀನಾದ

ಡೈನಾಮಿಕ್ ಹೀರೋ ದೇವರಾಜ್ ಪ್ರೊಡಕ್ಷನ್ಸ್ ಮೊದಲ ಚಿತ್ರ ಬಹುನಿರೀಕ್ಷಿತ 'ನೀನಾದೆನಾ' ಚಿತ್ರದಲ್ಲೂ ಇಬ್ಬರು ಬೆಡಗಿಯರಿದ್ದಾರೆ. ನಾಯಕನಿಗೆ ಡಬ್ಬಲ್ ರೋಮ್ಯಾನ್ಸ್ ಆದ್ರೆ ಪ್ರೇಕ್ಷಕರಿಗೆ ಡಬ್ಬಲ್ ಥ್ರಿಲ್'

ಮಾಣಿಕ್ಯನಿಗೆ ಇಬ್ಬರು ಮುತ್ತುಗಳು

ಮಾಣಿಕ್ಯನಿಗೆ ಇಬ್ಬರು ಮುತ್ತುಗಳು

ಈ ವರ್ಷ ತೆರೆಕಂಡು ಸೂಪರ್ ಹಿಟ್ಟಾದ ತೆಲುಗಿನ 'ಮಿರ್ಚಿ' ರೀಮೇಕ್ 'ಮಾಣಿಕ್ಯ'ದಲ್ಲೂ ತಮಿಳಿನ ವರಲಕ್ಷ್ಮಿ ಮತ್ತು ಚಿಕ್ಕಮಗಳೂರ ಚಿಕ್ಕಮಲ್ಲಿಗೆ ರಣ್ಯಾ ಇದ್ರು. ಇಬ್ಬಿಬ್ಬರಿಗೆ ಕಿಚ್ಚನ ಸಾಥ್ ಸೂಪರ್ರಾಗಿತ್ತು.

ರನ್ನದ ಜೊತೆಗೆ ಚಿನ್ನ ಮುನ್ನ

ರನ್ನದ ಜೊತೆಗೆ ಚಿನ್ನ ಮುನ್ನ

ಕಿಚ್ಚ ಸುದೀಪ್ ಮುಂದಿನ ಸಿನಿಮಾ ರನ್ನದ ಬಗ್ಗೆ ಹೇಳ್ಬೇಕಾಗೀನೇ ಇಲ್ಲ. ಅತ್ತಾರಿಂಟಿಕಿ ದಾರೇದಿಯಲ್ಲಿ ಎರಡನೇ ನಾಯಕಿಯಾಗಿ ನಮ್ಮ ಕನ್ನಡದ ಪ್ರಣೀತಾ ಕೂಡ ಇದ್ರು. ಇನ್ನು ಕನ್ನಡದ ರನ್ನನಿಗೆ ಚಿನ್ನ ಮುನ್ನ ಆಗಿ ರಚಿತಾರಾಮ್, ಹರಿಪ್ರಿಯಾ ಸೆಲೆಕ್ಟ್ ಆಗಿದ್ದಾರೆ.

English summary
In Recent days Sandalwood film industry following new trend, such as using two heroines in single movie. Upcoming movies like Ambareesha (Darshan), Ranavikrama (Puneeth Rajkumar), Khushi Khusiyagi (Golden Star Ganesh), Ranna (Sudeep) had two heroines.
Please Wait while comments are loading...

Kannada Photos

Go to : More Photos