»   » 'ಕಿಲ್ಲಿಂಗ್ ವೀರಪ್ಪನ್' ಟ್ರೈಲರ್ ಮೆಚ್ಚಿದ ಸೂಪರ್ ಸ್ಟಾರ್ ಬಿಗ್ ಬಿ

'ಕಿಲ್ಲಿಂಗ್ ವೀರಪ್ಪನ್' ಟ್ರೈಲರ್ ಮೆಚ್ಚಿದ ಸೂಪರ್ ಸ್ಟಾರ್ ಬಿಗ್ ಬಿ

Posted by:
Subscribe to Filmibeat Kannada

ಆರ್.ಜಿ.ವಿ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾಗೆ ಎಷ್ಟೇ ಕಂಟಕ ಬಂದರೂ ಕೂಡ ಚಿತ್ರದ ಪ್ರಚಾರ ಕಾರ್ಯ ಮಾತ್ರ ನಿಂತಿಲ್ಲ. ಜೊತೆಗೆ ಬಿಡುಗಡೆಗೆ ಮುನ್ನವೇ ಚಿತ್ರ ಟ್ರೈಲರ್ ಮೂಲಕ ಎಲ್ಲರ ಮೆಚ್ಚುಗೆ ಕೂಡ ಗಳಿಸುತ್ತಿದೆ.

ಹೌದು ವರ್ಮಾ ಅವರು ಬಿಡುಗಡೆ ಮಾಡಿದ ನೂತನ ಟ್ರೈಲರನ್ನು ಮೆಚ್ಚಿ ಬಾಲಿವುಡ್ ಸೂಪರ್ ಸ್ಟಾರ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಬಾಯ್ತುಂಬ ಹೊಗಳಿದ್ದಾರೆ.[ವರ್ಮಾ ವಿರುದ್ಧ ಕೇಸ್: 'ಕಿಲ್ಲಿಂಗ್ ವೀರಪ್ಪನ್'ಗೆ ಮತ್ತೊಂದು ಕಂಟಕ]

ಆರ್.ಜಿ.ವಿ ಅವರ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದ ಟ್ರೈಲರ್ ಲಿಂಕ್ ಅನ್ನು ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಹಾಕಿಕೊಂಡು 'ಸಾಕಷ್ಟು ದಿಗ್ಭ್ರಮೆಯನ್ನುಂಟುಮಾಡುವ' ಟ್ರೈಲರ್ ಎಂದು ಹಿರಿಯ ನಟ ಬಿಗ್ ಬಿ ಟ್ವೀಟ್ ಮಾಡಿದ್ದಾರೆ.

ಅಂದಹಾಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಬಹಳ ಹಿಂದಿನಿಂದಲೂ ಒಟ್ಟಿಗೆ ಕೆಲಸ ಮಾಡಿರುವ ದೀರ್ಘ ಸಂಬಂಧ ಇದೆ.[ಪೊಲೀಸ್ ಇಲಾಖೆಗೆ 'ಕಿಲ್ಲಿಂಗ್ ವೀರಪ್ಪನ್' ಸ್ಪೆಶಲ್ ಶೋ]

ಇದೀಗ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಸಿನಿಮಾ ಮಾಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಯಾವುದೇ ಡೈಲಾಗ್ ಇಲ್ಲದ ಮತ್ತು ಧ್ವನಿ ಇಲ್ಲದ ವಿಭಿನ್ನ ಟ್ರೈಲರ್ ರಿಲೀಸ್ ಮಾಡಿದ್ದಾರೆ.

ಸ್ಪೆಷಲ್ ಆಫೀಸರ್ ಪಾತ್ರದಲ್ಲಿ ಶಿವಣ್ಣ, ಸೂಪರ್ ಕಾಪ್ ಪಾತ್ರದಲ್ಲಿ ಪಾರುಲ್ ಯಾದವ್, ಮುತ್ತುಲಕ್ಷ್ಮಿ ಪಾತ್ರದಲ್ಲಿ ಯಜ್ಞಾ ಶೆಟ್ಟಿ, ದಂತಚೋರ ವೀರಪ್ಪನ್ ಪಾತ್ರದಲ್ಲಿ ಸಂದೀಪ್ ಭಾರದ್ವಾಜ್ ಕಾಣಿಸಿಕೊಂಡಿರುವ ಈ ಸಿನಿಮಾ ಜನವರಿ 1 ರಂದು ಭರ್ಜರಿಯಾಗಿ ತೆರೆ ಕಾಣುತ್ತಿದೆ.

English summary
Bollywood superstar Amitabh Bachchan has heaped praise on the film Killing Veerappan. Tweeting the link to the trailer of the film the veteran star has called it "pretty astounding".
Please Wait while comments are loading...

Kannada Photos

Go to : More Photos