»   » ಈ ತಾರೆಯರ ಹೋಳಿ ಆಚರಣೆ ನೋಡಿದ್ರೆ ಹೊಟ್ಟೆ ಉರಿದುಕೊಳ್ಳುವುದು ಗ್ಯಾರಂಟಿ!

ಈ ತಾರೆಯರ ಹೋಳಿ ಆಚರಣೆ ನೋಡಿದ್ರೆ ಹೊಟ್ಟೆ ಉರಿದುಕೊಳ್ಳುವುದು ಗ್ಯಾರಂಟಿ!

Posted by:
Subscribe to Filmibeat Kannada

ದೇಶದ ವೈವಿಧ್ಯ ಸಂಸ್ಕೃತಿಗಳ ಐಕ್ಯತೆ ಮೂಡಿಸುವ ಹೋಳಿಯ ರಂಗಿನಾಟ ನಿನ್ನೆ(ಮಾರ್ಚ್ 8) ಎಲ್ಲೆಲ್ಲೂ ನಡೆದಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರೂ ಸಹ ಹೋಳಿ ಹಬ್ಬವನ್ನು ಸಂಭ್ರಮಿಸಿದ್ದಾರೆ.

ಹಳ್ಳಿಗಳಲ್ಲಿ ಊರಿನ ದೊಡ್ಡ ಹಬ್ಬಗಳಿಗೆ ಮಾತ್ರ ಸೀಮಿತವಾಗಿದ್ದ ಹೋಳಿ ಹಬ್ಬ ಇಂದು ಯಂಗ್ ಸ್ಟರ್ ಗಳು ಎಂಜಾಯ್ ಮಾಡುವ ಟ್ರೆಂಡಿ ಹಬ್ಬವೂ ಸಹ ಆಗಿದೆ. ಅಂದಹಾಗೆ ನಿನ್ನೆ ದೇಶದಾದ್ಯಂತ ಆಚರಿಸಲಾದ ಬಣ್ಣಗಳ ಹಬ್ಬದಲ್ಲಿ ನಮ್ಮ ಸ್ಯಾಂಡಲ್ ವುಡ್ ತಾರೆಯರು ಸಹ ಮಿಂದೆದ್ದಿದ್ದಾರೆ. ಬಣ್ಣಗಳ ರಂಗಿನಾಟವನ್ನು ಬೆಳ್ಳಿತೆರೆಯ ಯಾರೆಲ್ಲಾ ಆಚರಿಸಿ.. ಎಂಜಾಯ್ ಮಾಡಿದ್ದಾರೆ ತಿಳಿಯಬೇಕಾ?.. ಹಾಗಿದ್ರೆ ಇಲ್ಲಿನೋಡಿ...

ರಂಗಿನೋತ್ಸವದಲ್ಲಿ ರಿಯಲ್ ಸ್ಟಾರ್ ಮೆರುಗು

ರಂಗಿನೋತ್ಸವದಲ್ಲಿ ರಿಯಲ್ ಸ್ಟಾರ್ ಮೆರುಗು

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ಹೋಳಿ ಹಬ್ಬವನ್ನು ತಮ್ಮ ಮನೆಯಲ್ಲಿ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.

ಉಪೇಂದ್ರ ಮನೆಯಲ್ಲಿ ಗಣೇಶ್ ಹೋಳಿ ಆಚರಣೆ

ಉಪೇಂದ್ರ ಮನೆಯಲ್ಲಿ ಗಣೇಶ್ ಹೋಳಿ ಆಚರಣೆ

ಹೋಳಿ ಹಬ್ಬದ ಪ್ರಯುಕ್ತ ಗೋಲ್ಡೆನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್, ಉಪೇಂದ್ರ ಅವರ ಮನೆಗೆ ಆಗಮಿಸಿ ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಸೆಲೆಬ್ರೇಟ್ ಮಾಡಿದ್ದಾರೆ.

ಹೋಳಿ ಸಂಭ್ರಮಕ್ಕೆ ಡೋಲು ಮೇಳ

ಹೋಳಿ ಸಂಭ್ರಮಕ್ಕೆ ಡೋಲು ಮೇಳ

ಬಣ್ಣಗಳ ರಂಗಿನಾಟವನ್ನು ಡೋಲು ಭಾರಿಸುವ ಮೂಲಕ ಗಣೇಶ್, ಉಪೇಂದ್ರ ಮತ್ತು ಅವರ ಸ್ನೇಹಿತರು ಎಂಜಾಯ್ ಮಾಡಿದ್ದಾರೆ.

ಹರ್ಷಿಕಾ ಪೂಣಚ್ಚ

ಹರ್ಷಿಕಾ ಪೂಣಚ್ಚ

'ಬಿಗ್ ಬಾಸ್ ಕನ್ನಡ 2' ಖ್ಯಾತಿಯ ಹರ್ಷಿಕಾ ಪೂಣಚ್ಚ ಅವರು ಪ್ರಿಯಾಂಕ ಉಪೇಂದ್ರ ಮತ್ತು ಉಪೇಂದ್ರ ಅವರ ಜೊತೆ ಬಣ್ಣದ ಹೋಕುಳಿ ಸಂಭ್ರಮಕ್ಕೆ ಸೇರಿದ್ದರು.

ಪ್ರಿಯಾಂಕ ಉಪೇಂದ್ರ ಜೊತೆಯಲ್ಲಿ ಸ್ಯಾಂಡಲ್ ವುಡ್ ನಟಿಯರು

ಪ್ರಿಯಾಂಕ ಉಪೇಂದ್ರ ಜೊತೆಯಲ್ಲಿ ಸ್ಯಾಂಡಲ್ ವುಡ್ ನಟಿಯರು

ಪ್ರಿಯಾಂಕ ಉಪೇಂದ್ರ ಅವರ ಮನೆಗೆ ಗಣೇಶ್ ಕುಟುಂಬ ಮಾತ್ರವಲ್ಲದೇ, ನಟಿ ಮಾಳವಿಕ ಅವಿನಾಶ್, ರಾಗಿಣಿ ದ್ವಿವೇದಿ, ಸುಧಾರಾಣಿ ಮತ್ತು ಇತರರು ಆಗಮಿಸಿದ್ದರು.

ಬಣ್ಣದಲ್ಲಿ ಮಿಂದೆದ್ದ ಸೆಲೆಬ್ರಿಟಿಗಳು

ಬಣ್ಣದಲ್ಲಿ ಮಿಂದೆದ್ದ ಸೆಲೆಬ್ರಿಟಿಗಳು

ಪ್ರಿಯಾಂಕ ಉಪೇಂದ್ರ ದಂಪತಿ ಮನೆಗೆ ಹೋಳಿ ಪಾರ್ಟಿಗೆ ಆಗಮಿಸಿದ್ದ ಸೆಲೆಬ್ರಿಟಿಗಳು ಬಣ್ಣದಲ್ಲಿ ಮಿಂದೆದ್ದ ನಂತರ ಗ್ರೂಪ್ ಫೋಟೋಗೆ ಪೋಜ್ ಕೊಟ್ಟಿದ್ದು ಹೀಗೆ.

ಕಲರ್ ಫುಲ್ ಸೆಲ್ಫಿ

ಕಲರ್ ಫುಲ್ ಸೆಲ್ಫಿ

ಹೋಳಿ ಸೆಲೆಬ್ರೇಷನ್ ನಂತರ ಶಾಂತಿ ಮತ್ತು ವೈಭವದ ಹೊಸ ಪರ್ವಕ್ಕೆ ಗ್ರೀನ್ ಸಿಗ್ನಲ್ ನೀರಿಕ್ಷೆಯಲ್ಲಿ ಸೆಲ್ಫಿ ಕ್ಲಿಕ್ಕಿಂಗ್....

ರಂಗಿನೋತ್ಸವ ಸಂಭ್ರಮಿಸಿದ ತಾರಾಬಳಗ

ರಂಗಿನೋತ್ಸವ ಸಂಭ್ರಮಿಸಿದ ತಾರಾಬಳಗ

ಪರಸ್ಪರ ಬಣ್ಣ ಎರಚಾಟದ ನಂತರ ತಾರಾಬಳಗ ತೆಗೆಸಿಕೊಂಡ ಗ್ರೂಪ್ ಫೋಟೋ ನೋಡಿ..

ಶಿಲ್ಪಾ ಗಣೇಶ್ ಮತ್ತು ಮಾಳವಿಕ ಅವಿನಾಶ್

ಶಿಲ್ಪಾ ಗಣೇಶ್ ಮತ್ತು ಮಾಳವಿಕ ಅವಿನಾಶ್

ಶಿಲ್ಪಾ ಗಣೇಶ್ ಮತ್ತು ಮಾಳವಿಕ ಅವಿನಾಶ್ ಪರಸ್ಪರ ಒಂದೇ ರೀತಿಯ ಬಣ್ಣ ಹಚ್ಚಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

English summary
Sandalwood many celebraties are celebrated Holi Yesterday(march 12) in Real Star Upendra Home.
Please Wait while comments are loading...

Kannada Photos

Go to : More Photos