»   » ಕನ್ನಡಕ್ಕೆ ಡಬ್ ಆಗಿ ಬಂದೇ ಬಿಡ್ತು 'ಸ್ಪೈಡರ್ ಮ್ಯಾನ್' ಟ್ರೈಲರ್

ಕನ್ನಡಕ್ಕೆ ಡಬ್ ಆಗಿ ಬಂದೇ ಬಿಡ್ತು 'ಸ್ಪೈಡರ್ ಮ್ಯಾನ್' ಟ್ರೈಲರ್

Posted by:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಆದ್ರೂ ಒಂದೊಂದೆ ಡಬ್ಬಿಂಗ್ ಚಿತ್ರಗಳು ಸ್ಯಾಂಡಲ್ ವುಡ್ ಗೆ ಲಗ್ಗೆಯಿಡುತ್ತಿದೆ.[ಕನ್ನಡದಲ್ಲಿ ಡಬ್ ಆಗುತ್ತಿದೆ ಹಾಲಿವುಡ್ 'ಸ್ಪೈಡರ್ ಮ್ಯಾನ್'!]

ಕಳೆದ ತಿಂಗಳಿನಲ್ಲಷ್ಟೇ 'ಸತ್ಯದೇವ್ ಐಪಿಎಸ್' ಚಿತ್ರ ರಾಜ್ಯದ ಹಲವು ಕಡೆ ಬಿಡುಗಡೆಯಾಗಿತ್ತು. ಈಗ ಹಾಲಿವುಡ್ ನಿಂದ 'ಸ್ಪೈಡರ್ ಮ್ಯಾನ್' ಚಿತ್ರ ಕನ್ನಡದಲ್ಲಿ ಡಬ್ ಆಗಿದೆ. ಈಗಾಗಲೇ 'ಸ್ಪೈಡರ್ ಮ್ಯಾನ್' ಚಿತ್ರದ ಕನ್ನಡ ಟ್ರೈಲರ್ ಬಿಡುಗಡೆಯಾಗಿದ್ದು, ಯ್ಯೂಟ್ಯೂಬ್ ನಲ್ಲಿ ಸಾವಿರಾರು ಜನರು ವೀಕ್ಷಿಸುತ್ತಿದ್ದಾರೆ. ಮುಂದೆ ಓದಿ.....

ಕನ್ನಡದಲ್ಲಿ ಬಂತು 'ಸ್ಪೈಡರ್ ಮ್ಯಾನ್' ಟ್ರೈಲರ್!

ಕನ್ನಡದಲ್ಲಿ ಬಂತು 'ಸ್ಪೈಡರ್ ಮ್ಯಾನ್' ಟ್ರೈಲರ್!

ಹಾಲಿವುಡ್ ಸೂಪರ್ ಹೀರೋ ಸೀರಿಸ್ ನ 'ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್' ಚಿತ್ರ ಕನ್ನಡದಲ್ಲಿ ಡಬ್ ಆಗಿದೆ. ಇಂಗ್ಲೀಷ್ ನಲ್ಲಿ ತಯಾರಾಗುತ್ತಿರುವ ಚಿತ್ರ ಕನ್ನಡದಲ್ಲೂ ಡಬ್ ಆಗಿದ್ದು, ಟ್ರೈಲರ್ ಕೂಡ ಬಿಡುಗಡೆ ಆಗಿದೆ.

ಭಾರತೀಯ 10 ಭಾಷೆಗಳಲ್ಲಿ ಬಿಡುಗಡೆ!

ಭಾರತೀಯ 10 ಭಾಷೆಗಳಲ್ಲಿ ಬಿಡುಗಡೆ!

ಕೇವಲ ಕನ್ನಡದಲ್ಲಿ ಮಾತ್ರವಲ್ಲ ಭಾರತೀಯ 10 ಭಾಷೆಗಳಲ್ಲಿ 'ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್' ಸಿನಿಮಾ ತೆರೆಕಾಣಲಿದೆಯಂತೆ. ಹಿಂದಿ, ತಮಿಳು, ತೆಲುಗು, ಗುಜರಾತಿ, ಮರಾಠಿ, ಭೋಜ ಪುರಿ, ಬೆಂಗಾಳಿ, ಪಂಜಾಬಿ, ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಆಗುತ್ತಿದೆಯಂತೆ.

ಟ್ರೈಲರ್ ಗೆ ಒಳ್ಳೆ ರೆಸ್ ಪಾನ್ಸ್!

ಟ್ರೈಲರ್ ಗೆ ಒಳ್ಳೆ ರೆಸ್ ಪಾನ್ಸ್!

'ಸ್ಪೈಡರ್ ಮ್ಯಾನ್' ಕನ್ನಡ ಟ್ರೈಲರ್ ಗೆ ಸಿನಿ ಅಭಿಮಾನಿಗಳಿಂದ ಒಳ್ಳೆ ರೆಸ್ ಪಾನ್ಸ್ ಸಿಕ್ಕಿದೆ. ಪರ-ವಿರೋಧದ ನಡುವೆಯೂ ಕನ್ನಡದಲ್ಲಿ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬಿಡುಗಡೆ ಯಾವಾಗ?

ಬಿಡುಗಡೆ ಯಾವಾಗ?

ಸದ್ಯ, ಟ್ರೈಲರ್ ರಿಲೀಸ್ ಮಾಡಿ ಕುತೂಹಲ ಹುಟ್ಟುಹಾಕಿರುವ 'ಸ್ಪೈಡರ್ ಮ್ಯಾನ್' ಜುಲೈ 7 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಹಾಲಿವುಡ್‌ನ ಖ್ಯಾತ ನಟ ಟಾಮ್ ಹೊಲೆಂಡ್ ಅಭಿನಯಿಸಿದ್ದಾರೆ. ಜಾನ್​ ವಾಟ್ಸ್​ ನಿರ್ದೇಶಿಸಿದ್ದಾರೆ.

ಕನ್ನಡದಲ್ಲಿ 'ಸ್ಪೈಡರ್ ಮ್ಯಾನ್' ಟ್ರೈಲರ್ ನೋಡಿ!

ಕನ್ನಡದಲ್ಲಿ 'ಸ್ಪೈಡರ್ ಮ್ಯಾನ್' ಟ್ರೈಲರ್ ನೋಡಿ!

ಈ ಲಿಂಕ್ ಕ್ಲಿಕ್ ಮಾಡಿ, ಕನ್ನಡದಲ್ಲಿ 'ಸ್ಪೈಡರ್ ಮ್ಯಾನ್' ಟ್ರೈಲರ್ ನೋಡಿ!

English summary
Hollywood Upcoming Movie 'Spiderman Homecoming' Kannada Version Trailer Released.
Please Wait while comments are loading...

Kannada Photos

Go to : More Photos