»   » 'ವೀರಪ್ಪನ್' ಆಗೋಕೆ ಸಂದೀಪ್ ಏನೆಲ್ಲಾ ಮಾಡಿದ್ರು ಗೊತ್ತಾ

'ವೀರಪ್ಪನ್' ಆಗೋಕೆ ಸಂದೀಪ್ ಏನೆಲ್ಲಾ ಮಾಡಿದ್ರು ಗೊತ್ತಾ

Posted by:
Subscribe to Filmibeat Kannada

'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಹಿಟ್ ಆದಾಗ ಎಲ್ಲರ ಬಾಯಲ್ಲಿ ಬಂದ ಒಂದೇ ಉದ್ಘಾರ ಅಬ್ಬಾ ಎಂತಹ ನಟನೆ ಎಂಬುದು. ಅದೂ ವಿಶೇಷವಾಗಿ 'ವೀರಪ್ಪನ್' ಪಾತ್ರ ವಹಿಸಿದ ನಟ ಸಂದೀಪ್ ಭಾರದ್ವಾಜ್ ಬಗ್ಗೆ.

ಎಲ್ಲಿಯ ಚಾಕಲೇಟ್ ಹೀರೋ ಎಲ್ಲಿಯ 'ವೀರಪ್ಪನ್' ಅಜಗಜಾಂತರ ವ್ಯತ್ಯಾಸ ಇದ್ದರೂ ಸಂದೀಪ್ ಅವರು ಪಕ್ಕಾ ವೀರಪ್ಪನ್ ತದ್ರೂಪಿಯಂತೆ ನಟಿಸಿ ಇಡೀ ಕರ್ನಾಟಕದ ಪ್ರೇಕ್ಷಕರನ್ನು ಮೆಚ್ಚಿಸಿದ್ದರು.['ಆರ್.ಜಿ.ವಿ' ಆಪರೇಷನ್ ಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?]ಅಂದಹಾಗೆ 'ವೀರಪ್ಪನ್'ನಂತೆ ಕಾಣಿಸಿಕೊಳ್ಳಲು ನಟ ಸಂದೀಪ್ ಅವರು ಏನೆಲ್ಲಾ ಕಸರತ್ತು ಮಾಡಿರಬಹುದು ಅಂತ ನೀವು ಊಹಿಸಿದ್ದೀರಾ?.


ಹೌದು ಮಾಡೆಲ್ ಆಗಿದ್ದ ಸಂದೀಪ್ ಅವರು ಬಿಳಿ ಬಿಳಿ ಆಗಿ ಸಖತ್ ಹ್ಯಾಂಡ್ಸಮ್ ಮತ್ತು ಫಿಟ್ ಬಾಡಿ ಲಾಂಗ್ವೇಜ್ ಅನ್ನು ಹೊಂದಿದ್ದರು. ಇವರು ನರಹಂತಕ ವೀರಪ್ಪನ್ ಪಾತ್ರ ಮಾಡಲು ಅದೆಷ್ಟು ಕಷ್ಟ ಪಟ್ಟಿದ್ದಾರೆ ಅಂತ ಸ್ವತಃ ಸಂದೀಪ್ ಅವರೇ ಹಂಚಿಕೊಂಡಿದ್ದಾರೆ.


'ನಾನೇ ವೀರಪ್ಪನ್ ಪಾತ್ರ ಮಾಡೋದು ಅಂತ ಪಕ್ಕಾ ಆದಾಗ ನಿರ್ದೇಶಕ ವರ್ಮಾ ಅವರು ಮೊದಲು ಹೇಳಿದ್ದು ನಾನು ಕಪ್ಪಾಗಬೇಕು ಅಂತ. ಅದಕ್ಕಾಗಿ ಅವರು ನನ್ನನ್ನು ಚೆನ್ನೈಗೆ ಕಳುಹಿಸಿ ದೇಹವನ್ನು ಟ್ಯಾನ್ ಮಾಡಿಕೋ ಎಂದರು.[ಹಾಲಿವುಡ್ ನಲ್ಲೂ 'ವೀರಪ್ಪನ್' ಹವಾ ಶುರು ಮಾಡ್ತಾರಂತೆ ವರ್ಮಾ]'ನಾನು ಚೆನ್ನೈನ ಬಿಸಿಲಿನಲ್ಲಿ ಕಪ್ಪಾಗುವಷ್ಟು ಓಡಾಡಿದೆ. ಜೊತೆಗೆ ಒಂದಿಷ್ಟು ತೂಕ ಬೇರೆ ಇಳಿಸಿಕೊಳ್ಳಬೇಕಿತ್ತು. ಆವಾಗ ಸುಮಾರು ಒಂಭತ್ತು ಕೆ.ಜಿಯಷ್ಟು ತೂಕ ಇಳಿಸಿಕೊಂಡೆ. ಮತ್ತೆ ನೀಟಾಗಿ ಸಿಲ್ಕಿ ಆಗಿದ್ದ ಕೂದಲಿಗೂ ಕತ್ತರಿ ಹಾಕಿಸಿಕೊಂಡು ಹೇರ್ ಸ್ಟೈಲ್ ಬದಲಾಯಿಸಿಕೊಂಡೆ' ಎಂದು ಸಂದೀಪ್ ನಗುತ್ತಾರೆ.


ಅಂದಹಾಗೆ ಸಂದೀಪ್ ಅವರನ್ನು ಥೇಟ್ ವೀರಪ್ಪನ್ ನಂತೆ ತಯಾರು ಮಾಡಿದ್ದು ಮಾತ್ರ ಮೇಕಪ್ಪ್ ಮ್ಯಾನ್ ವಿಕ್ರಂ ಗಾಯಕ್ ವಾಡ್. ಮಾತ್ರವಲ್ಲದೆ ವರ್ಮಾ ಅವರು ತಮ್ಮ ಕನಸಿನ ವೀರಪ್ಪನ್ ನ ಹುಡುಕಾಟದಲ್ಲಿದ್ದಾಗ ವಿಕ್ರಂ ಅವರು ಸಹಾಯ ಮಾಡಿದ್ದರು. ಅದಕ್ಕಾಗಿ ವಿಕ್ರಂ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಸಂದೀಪ್ ಧನ್ಯವಾದ ತಿಳಿಸುತ್ತಾರೆ.[ವರ್ಮಾ ಅವರ 'ವೀರಪ್ಪನ್' 10 ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?]


ಒಟ್ನಲ್ಲಿ ಸಿನಿಮಾ ಹಿಟ್ ಆಗಿ ಕೋಟಿ ಕೋಟಿ ಬಾಚಿಕೊಂಡು ಬಾಕ್ಸಾಫೀಸನ್ನು ಚಿಂದಿ ಚಿತ್ರಾನ್ನ ಮಾಡಿದೆ. ಈಗಾಗಲೇ ಕನ್ನಡ ಮತ್ತು ತೆಲುಗಿನಲ್ಲಿ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಮುಂದಿನ ವಾರ ಹಿಂದಿ ಮತ್ತು ತಮಿಳು ಭಾಷೆಯಲ್ಲಿ ತೆರೆ ಕಾಣಲಿದೆ. ಈ ನಡುವೆ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾವನ್ನು ಹಾಲಿವುಡ್ ನಲ್ಲೂ ತರುವ ಆಲೋಚನೆಯನ್ನು ನಿರ್ದೇಶಕರು ಮಾಡಿದ್ದಾರೆ.

English summary
Kannada Actor Sandeep Bhardwaj explained his experience How became Veerappan in Ram Gopal Varma's Kannada Movie 'Killing Veerappan'. Kannada Actor Shiva Rajkumar, Kannada Actress Parul Yadav, Actress Yagna Shetty in the lead role.
Please Wait while comments are loading...

Kannada Photos

Go to : More Photos