»   » ರಾಯಣ್ಣ-ಟಿಂಗರ ಬುಡ್ಡಣ್ಣ ಇಬ್ಬರೂ ಒಂದೇ ರೀತಿ ಡೈಲಾಗೂ

ರಾಯಣ್ಣ-ಟಿಂಗರ ಬುಡ್ಡಣ್ಣ ಇಬ್ಬರೂ ಒಂದೇ ರೀತಿ ಡೈಲಾಗೂ

Written by: ಜೋಕೇಶ
Subscribe to Filmibeat Kannada

ಸಾಮಾಜಿಕ ಸಿನಿಮಾಗಳಲ್ಲೂ ಐತಿಹಾಸಿಕ ಡೈಲಾಗ್ ಗಳನ್ನು ಗಮನಿಸಿದ್ದೀರಾ? ಅದೇನ್ರೀ ಐತಿಹಾಸಿಕ ಡೈಲಾಗ್ ಅಂತೀರಾ, 'ಮಯೂರ' ಸಿನಿಮಾದಲ್ಲಿ ರೋಷಾವೇಶದಿಂದ ಮಯೂರ ಪಾತ್ರಧಾರಿ ರಾಜಕುಮಾರ್, ಕನ್ನಡಿಗರ ಶೌರ್ಯ, ಧೈರ್ಯ ಅಂತೆಲ್ಲ ಡೈಲಾಗ್ ಹೊಡೆಯುತ್ತಿದ್ದರೆ ಅಬ್ಬಾ ಅನಿಸುತ್ತೆ ನೋಡಿ, ಅದು.

ಅದೊಂದು ಐತಿಹಾಸಿಕ ಸಿನಿಮಾ. ಅದರಲ್ಲಿ ಕಣ್ಣೀರೇಕೆ, ಬಿಸಿಯುಸಿರೇಕೆ ಅನ್ನುವ ಹಾಡೂ, ರೋಷಾವೇಶದ ಡೈಲಾಗ್ ಹೊಂದಿಕೆ ಆಗ್ತಿತ್ತು. ಆದರೆ ಇತ್ತೀಚೆಗೆ ಏನಾಗಿದೆ ಅಂದರೆ, ಯಾವುದೋ ಒಂದು ಗಲ್ಲಿಯಲ್ಲಿ ಪೊರಕಿ ಥರ ಓಡಾಡುವ ಹೀರೋ ಪಾತ್ರಧಾರಿ, ನಾನು ಕರೆದರೆ ಇಡೀ ಕರ್ನಾಟಕವೇ ಎದ್ದು ಬರುತ್ತೆ ಅಂತಿರ್ತಾನೆ.

how-the-heros-image-affecting-the-movie-in-kannada-023431

ಮಂಡ್ಯವೋ, ಮದ್ದೂರೋ, ಮಳವಳ್ಳಿಯಲ್ಲೋ ಇನ್ ಸ್ಪೆಕ್ಟರ್ ಆಗಿರೋ ಹೀರೋ, ನಾನು ಒಂದು ಕೂಗು ಹಾಕಿದರೆ ಕನ್ನಡಿಗರೆಲ್ಲ ಸೇರಿ ನಿನ್ನ ಅಪ್ಪಚ್ಚಿ ಮಾಡಿಬಿಡ್ತಾರೆ ಅಂತ ಬೊಬ್ಬಿರಿಯುತ್ತಾನೆ. ಹೀರೋಗಳು ತಮ್ಮ ಇಮೇಜಿನಿಂದ ಆಚೆ ಬಂದು, ಕಥೆಯ ಪಾತ್ರದೊಳಗೆ ಪ್ರವೇಶವೇ ಮಾಡಿರಲ್ಲವಾ? ತಮ್ಮನ್ನು ತಾವು ಏನಂದುಕೊಂಡಿರ್ತಾರೆ?

ಸಂಗೊಳ್ಳಿ ರಾಯಣ್ಣನೂ ಟಿಂಗರ ಬುಡ್ಡಣ್ಣಾನೂ ಒಂದೇ ಥರ ಡೈಲಾಗ್ ಹೊಡೆದರೆ ಹೇಗೆ ಹೇಳಿ.?ತೆಲುಗಿನಲ್ಲಿ ಬಾಲಕೃಷ್ಣ ಅಭಿನಯಿಸಿದ್ದ ಪಲನಾಟಿ ಬ್ರಹ್ಮ ನಾಯ್ಡು ಅನ್ನೋ ಸಿನಿಮಾ ಇದೆ. ಅದರಲ್ಲಿ ಹೀರೋ ಬಾಲಕೃಷ್ಣ ಕೈ ಬೆರಳು ತೋರಿಸಿದರೆ ರೈಲಂಥ ರೈಲೇ ವಾಪಸ್ ಹೋಗುತ್ತೆ. ಈ ಬಗ್ಗೆ ಅವರನ್ನೇ ಇತ್ತೀಚೆಗೆ ಒಂದು ಇಂಟರ್ ವ್ಯೂನಲ್ಲಿ ಪ್ರಶ್ನೆ ಕೇಳಿದಾಗ, ನನಗೆ ಆಗ ಗೊತ್ತಾಗದೆ ಮಾಡಿಬಿಟ್ಟೆ. ಆ ಮೇಲೆ ಬಹಳ ಜನ ಹೀಗೆ ಮಾಡಬಾರದಿತ್ತು ಎಂದರು ಅನ್ನೋದನ್ನು ಹೇಳಿದ್ದರು.

ಇನ್ನು ಜೆಸಿಬಿ ಯಂತ್ರದ ಮುಂಭಾಗದಲ್ಲಿ ಇಷ್ಟುದ್ದ ಇರುವ ಕಬ್ಬಿಣದ ದೊಡ್ಡ ಹಲ್ಲಿನಂಥದ್ದನ್ನು ಕೈಲಿ ಹೊಡೆದು ಸೊಂಯ್ ಟಪಕ್ ಅಂತ ಮುರಿದು ಹಾಕೋದು, ಭಯಂಕರ ಬಡವನಾದ ನಾಯಕನ ಪಾತ್ರ ಇದ್ದರೂ ಎರಡೂ ಕೈಲಿ ನಾಲ್ಕು ನಾಲ್ಕು ಉಂಗುರ ಹಾಕೋದು, ಎಷ್ಟೆಲ್ಲ ತಂತ್ರಜ್ಞಾನ ಮುಂದುವರಿದಿದ್ದರೂ ಒಬ್ಬನೇ ವ್ಯಕ್ತಿ ಎರಡು ರೋಲ್ ಅಂತ ತೋರಿಸೋದು...ಎಂಥ ಕಾಮಿಡಿ ಸೀನ್ ಗಳು ಅಂತೀರಾ?

ಈ ಹಿಂದೆ ತುಂಬ ಹೆಸರಾದ ಹೀರೋ ಒಬ್ಬರನ್ನು ರೈತರ ಪಾತ್ರದಲ್ಲಿ ತೋರಿಸಿದ್ದ ನಿರ್ದೇಶಕರು, ಹೀರೋ ಕೈ ಬೆರಳು ಕೂಡ ಮಣ್ಣಾಗದ ಹಾಗೆ ಇಡೀ ಸಿನಿಮಾವನ್ನೇ ಮುಗಿಸಿದ್ದರು. ಗರಿಗರಿ ಬಿಳಿ ಷರಟು, ತಲೆಗೆ ಪೇಟ... ಎಂಥ ಮುದ್ದು ಬರುತ್ತಿದ್ದರು ಗೊತ್ತಾ ಆ ಹೀರೋ? ಆ ಸಿನಿಮಾದಲ್ಲಿ ರೈತ ಅಂತ ಆದ ಮೇಲೆ ಒಂದು ದೃಶ್ಯವಾದರೂ ಮಣ್ಣಿನ ಮಧ್ಯೆ ಇಲ್ಲ ಅಂದರೆ ಹೇಗೆ ಅಂತ ಯೋಚಿಸಬೇಕು ಅಲ್ಲವಾ?

ಚಿರಂಜೀವಿಯ ಒಂದು ಸಿನಿಮಾ ಇದೆ. ಅದರಲ್ಲಿ ಬೈಕ್ ನ ಬಸ್ ಕೆಳಗೆ ನುಗ್ಗಿಸಲ್ವಾ, ಅದೇ ಥರ ಕುದುರೇನಾ ಬಸ್ ಕೆಳಗೆ ನುಗ್ಗಿಸ್ತಾರೆ, ನೋಡಬೇಕು ಆ ದೃಶ್ಯವನ್ನು. ಅದು ಫೈಟಿಂಗ್ ಸೀನ್, ಎಂಥ ಕಾಮಿಡಿ ಇದೆ ಅಂದರೆ..ಅಬ್ಬಬ್ಬಾ! ಇನ್ನು ಹೀರೋಯಿನ್ ಗಳಿಗೆ ಬಟ್ಟೆಗಳನ್ನು ಡಿಸೈನ್ ಮಾಡೋರು ಮನೀಷ್ ಮಲ್ಹೊತ್ರಾ ಅದು ಇದು ಅಂತ ಸಿನಿಮಾಗಳಲ್ಲಿ ತೋರಿಸ್ತಾರೆ. ಈಗೆಲ್ಲ ವೆಪನ್ ಡಿಸೈನ್, ಕಾನ್ಸೆಪ್ಟ್ ಅಂತೆಲ್ಲ ಬಂದ ಹಾಗಿದೆ.

ನಿರ್ದೇಶಕ ರಾಜಮೌಳಿ ಅಂತಹವರು ತಮ್ಮ ಪ್ರತಿ ಸಿನಿಮಾದ ಆಯುಧಗಳನ್ನು ತಾವೇ ಡಿಸೈನ್ ಮಾಡ್ತಾರಂತೆ. ಇನ್ನು ವಿಚಿತ್ರ ಅನ್ನಿಸೋದು ಏನೆಂದರೆ ಈ ಜಗತ್ತು ಉದ್ಧಾರ ಆಗಬೇಕು ಅಂದರೆ ರೌಡಿಗಳು, ಕೊಲೆಗಡುಕರು ಹಾಗೂ ಕಳ್ಳರಿಂದಲೇ ಅನ್ನೋದು ಸಿನಿಮಾದವರು ತೀರಾ ಬಲವಾಗಿ ನಂಬಿರುವ ಹಾಗಿದೆ. ಕನ್ನಡದ ಬುದ್ಧಿವಂತ ನಿರ್ದೇಶಕರೊಬ್ಬರ ಪ್ರತಿ ಸಿನಿಮಾದಲ್ಲೂ ಅದೇ ಕಥೆಯ ಹೂರಣ.

ರೌಡಿಗಳದೊಂದು ಗುಂಪು, ಅದಕ್ಕೆ ಕಾರ್ಪೋರೇಟ್ ಟಚ್, ಅವರೆಲ್ಲ ಟೈ, ಬೂಟು ಹಾಕಿಕೊಂಡು ಓಡಾಡ್ತಿರ್ತಾರೆ. ಏಳನೇ ಕ್ಲಾಸ್ ಕೂಡ ಪಾಸಾಗಿಲ್ಲದವರ ಥರ ಪೊಲೀಸನವರು ಹೀರೋ ಬುದ್ಧಿವಂತಿಕೆ ಮೆಚ್ಚುತ್ತಿರ್ತಾರೆ. ಮತ್ತೊಂದು ಕಾಮಿಡಿ ಅಂದರೆ ಕನ್ನಡದಲ್ಲೊಬ್ಬರು ಐವತ್ತಕ್ಕೂ ಹೆಚ್ಚು ಸಿನಿಮಾ ನಿರ್ದೇಶನ ಮಾಡಿದವರ ಶೇ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಭೇದಿ ಮಾತ್ರೆಯೇ ಜೋಕಿಗೆ ಮೂಲ. ಚೊಂಬು, ಭೇದಿ ಮಾತ್ರೆ, ಇನ್ನೂ ವಿಚಿತ್ರ ಅಂದರೆ ಅದೇ ಪಾತ್ರಧಾರಿಯಿಂದಲೇ ಜೋಕು...

ಇನ್ನೊಬ್ಬ ಕ್ರಿಯಾಶೀಲ ನಿರ್ದೇಶಕ ಕಂ ನಟರ ಎಲ್ಲ ಸಿನಿಮಾಗಳಲ್ಲೂ ತಮ್ಮ ಪಕ್ಕದಲ್ಲಿರುವವರ ಕಪಾಳಕ್ಕೆ ಹೊಡೆದರಷ್ಟೇ ಜೋಕು. ಅಯ್ಯಯ್ಯೋ ಎಂಬ ಉದ್ಗಾರ...ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಅಂದರೆ, ಇಂದು ವರ್ಲ್ಡ್ ಲಾಫ್ಟರ್ ಡೇ.

English summary
Image of Kannada movie heros affecting on dailogue and content. Which is decribed in the lighter way.
Please Wait while comments are loading...

Kannada Photos

Go to : More Photos