twitter
For Quick Alerts
ALLOW NOTIFICATIONS
For Daily Alerts

ಫೇಸ್ ಬುಕ್ ನಲ್ಲಿ ''ಹುಚ್ಚು'' ವೆಂಕಟನಿಗೆ ಮಹಾ ಮಂಗಳಾರತಿ

By Harshitha

'ಹುಚ್ಚ ವೆಂಕಟ್' ಈ ಹೆಸರು ಕೇಳಿದವರೆಲ್ಲಾ, ಒಮ್ಮೆ ಕಿಸಕ್ಕನೆ ನಗುವುದು ಸಾಮಾನ್ಯ. ಹೆಸರಲ್ಲೇ 'ಹುಚ್ಚ' ಅಂತ ಸೇರಿಸಿಕೊಂಡಿರುವ ಈ ವೆಂಕಟ್ ಆಡುವ ತಲೆಕಟ್ಟ ಮಾತುಗಳನ್ನ ಕೇಳಿಸಿಕೊಂಡು ಎಲ್ಲರೂ ನಕ್ಕಿದ್ದೀರಾ.

ಕನ್ನಡ ಪ್ರೇಕ್ಷಕರು ನಕ್ಕು ನಲಿದಷ್ಟು ದಿನದಿಂದ ದಿನಕ್ಕೆ ವೆಂಕಟನ ಆರ್ಭಟ ಜೋರಾಗುತ್ತಿದೆ. ಯೂಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ದಿನಕ್ಕೊಂದು 'ಹುಚ್ಚ ವೆಂಕಟ್'ನ ವೀಡಿಯೋ ರಾರಾಜಿಸುತ್ತಿದೆ. ಎಲ್ಲದರಲ್ಲೂ, ಕನ್ನಡ ಪ್ರೇಕ್ಷಕರನ್ನ ಮುಖ ಮೂತಿ ನೋಡದೆ ಹಿಗ್ಗಾ ಮುಗ್ಗಾ ಜಾಡಿಸುತ್ತಿರುವ 'ಹುಚ್ಚ ವೆಂಕಟ್' ಏಕ್ದಂ ಫೇಮಸ್ ಆಗುತ್ತಿದ್ದಾನೆ.

venkat

ಕನ್ನಡ ಮತ್ತು ಕನ್ನಡ ಪ್ರೇಕ್ಷಕರ ಬಗ್ಗೆ 'ಹುಚ್ಚ ವೆಂಕಟ್' ಮನಬಂದಂತೆ ಆಡಿರುವ ಮಾತುಗಳನ್ನ ಅದೇ ಕನ್ನಡ ಪ್ರೇಕ್ಷಕರು ಲೈಕ್ ಮಾಡುತ್ತಿರುವುದೇ ವಿಪರ್ಯಾಸದ ಸಂಗತಿ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಜನಪ್ರಿಯತೆಯಲ್ಲಿ ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ರನ್ನ ಹಿಂದಿಕ್ಕಿರುವ 'ಹುಚ್ಚ ವೆಂಕಟ್'ನ ಹುಚ್ಚಾಟಕ್ಕೆ ಇಷ್ಟೊಂದು ಬಿಲ್ಡಪ್ ಬೇಕಾ....??

venkat2

ಯುವ ಪ್ರತಿಭೆಗಳಿಗೆ ಸದಾ ಮಣೆ ಹಾಕುವ ಕನ್ನಡ ಪ್ರೇಕ್ಷಕರಿಗೆ 'ಹುಚ್ಚ ವೆಂಕಟ್'ನಿಂದ ಬೈಗುಳ ಕೇಳುವ ದರ್ದು ಏನಿದೆ? ಈ ಪ್ರಶ್ನೆಯನ್ನ ಸಾಮಾಜಿಕ ಜಾಲತಾಣದಲ್ಲಿ ಎತ್ತಿರುವುದು ನಿರ್ದೇಶಕ ವೀರೇಂದ್ರ (ವೈರಸ್ ವೀರು)

ಯೋಗರಾಜ್ ಭಟ್ರ ಶಿಷ್ಯನಾಗಿ ಅನೇಕ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿರುವ ವೀರೇಂದ್ರ, 'ಪ್ರೀತಿ ಗೀತಿ ಇತ್ಯಾದಿ' ಚಿತ್ರದ ನಿರ್ದೇಶಕ ಕೂಡ ಹೌದು. ಕಳೆದ ಕೆಲ ದಿನಗಳಿಂದ ಎಲ್ಲೆಡೆ 'ಹುಚ್ಚ ವೆಂಕಟ'ನ ಹುಚ್ಚಾಟವನ್ನ ನೋಡಿ ಬೇಸೆತ್ತಿರುವ ವೀರೇಂದ್ರ, ಕನ್ನಡ ಪ್ರೇಕ್ಷಕರಿಗೆ ಒಂದು ಕಿವಿಮಾತನ್ನ ಹೇಳಿದ್ದಾರೆ. ಅದೇನೆಂದರೆ.........

''ನನ್ ಹೆಸರು ಕೆಲವರಿಗೆ ಗೊತ್ತಿಲ್ಲ.. ಅಲ್ವಾ..? ಹುಚ್ಚ ವೆಂಕಟ್ ಗೊತ್ತಿಲ್ಲ ಅಲ್ವಾ..? ಹುಚ್ಚ ವೆಂಕಟ್ ಸಿನೆಮಾ ರಿಲೀಸ್ ಆಯ್ತಾ..? ಹುಚ್ಚ ವೆಂಕಟ್ ಪಿಕ್ಚರ್ ರಿಲೀಸ್ ಆಗತ್ತಾ..? ಸಿನೆಮಾ ಮಾಡಿದ್ದೀರಾ..? ಇಡೀ ಕರ್ನಾಟಕಕ್ಕೆ ನನ್ನ ಎಕ್ಕಡ..!" ಈ ಥರ ಛೀಮಾರಿ ಹಾಕಿ ಚೀರಾಡ್ತಾ ಇದ್ದಾನೆ ಈ ಹುಚ್ ವೆಂಕಟ..!! "ನನ್ ಹೆಸ್ರು ಹುಚ್ಚ ವೆಂಕಟ್, ನೋಡ್ಕೋಳಿ.. ಕ್ಲೋಸ್ ಹಾಕಿ.. ಝೂಮ್ ಹಾಕಿ..!" ಅಂತ ಪದೇ ಪದೇ "ತನ್ನನ್ನನ್ನನ್ನನ್ನನ್ನ" ಪರಿಚಯ ಮಾಡ್ಕೋತಾನೆ...''

Director Veerendra reaction

''ಹುಚ್ಚ ವೆಂಕಟ್...ಯಾರವನು..? ಅವನು ಮಾತಾಡೋದನ್ನೆಲ್ಲ ನಮ್ ಜನ ಯಾಕೆ ಶೇರ್ ಮಾಡ್ತಾರೆ..? ಅವನೇನಾದ್ರೂ ದೇಶಕ್ಕೋ, ನಾಡು-ನುಡಿಗಾಗೋ ಹೋರಾಡಿದವನಾ...? ಅವನೇನಾದ್ರೂ ಪ್ರವಾದಿಯಾ..? ಅವನ ಎಕ್ಕಡವೇನಾದ್ರೂ ಪುಣ್ಯಪುರಷರು ಕುಂತು ಎದ್ದ ಪವಿತ್ರ ಪೀಠವೇ...? ಯಾಕವನಿಗಷ್ಟು ಇಂಪಾರ್ಟೆನ್ಸ್ ಕೊಡಬೇಕಿದೆ..? ಒಬ್ಬ "ಅಪ್ರಬುದ್ಧ" ಮತ್ತು ಅರೆಹುಚ್ಚ, ಆತ ಪೂರ್ತಿ ಹುಚ್ಚನಲ್ಲ.. ತನ್ನ ತಾಯಿ-ತಂದೆಗೂ.. ಹೆಂಡತಿ-ಪ್ರೇಯಸಿಯರಿಗೂ ಇರೋ ವ್ಯತ್ಯಾಸವಂತೂ ಗೊತ್ತಿದೆ ಅವನಿಗೆ.. ಬೇಕಂತಲೇ ತನ್ನೊಡಲಿನ ತೆವಲಿನಂದ ಹಚ್ಚಿಕೊಂಡ ಬೆಂಕಿಯನ್ನ "ಹುಚ್ಚುಚ್ಚಾಗಿ ಉಗುಳುತ್ತಿದ್ದಾನವನು..!"

''ಆ ಹುಚ್ಚಿಗೆ ಕಾರಣವಾದರೂ ಏನು..? ಕರ್ನಾಟಕ ಅಥವ ಕನ್ನಡಿಗರೇನಾದರೂ ಅವನ ಮನೆಗೆ ಕನ್ನ ಹಾಕಿ ದರೋಡೆ ಮಾಡಿ ಅವನನ್ನ ಬೀದಿಗೆ ತಂದಿದ್ದಾರಾ..? ಅವನ "ತೆವಲಿಗೆ" ಒಂದು ಸಿನೆಮಾ ಮಾಡಿದ್ದಾನೆ.. ಅವನು ಹೇಳಬಹುದು, "ನಾನು ತೆವಲಿಗೆ ಸಿನೆಮಾ ಮಾಡಿಲ್ಲಾ.. ಕಲೆಗೆ ಪೂಜಿಸ್ತೀನಿ..!" ಅಂತ, ತನ್ನ ಮನೆಯ ಕಾಸು ತಂದು ತಾನೇ ಹೀರೋ ಆಗುವುದನ್ನ ತೆವಲೆನ್ನದೇ ಬೇರೇನನ್ನಲು ಆಗ್ತದೆ..?''

''ಮಾಧ್ಯಮವನ್ನು "ಛೀ.. ಥೂ.." ಅಂತ ಬೈತಾ ಇರ್ತಾನೆ ಅವನು, ಅದಾಗ್ಯೂ ಮಾಧ್ಯಮದವರು ಅವನ ಹಿಂದೆ ಬಿದ್ದಿರುವುದೇತಕ್ಕೆ..? ಅಷ್ಟೊಂದು ಟಿ.ಆರ್.ಪಿ. ಹಸಿವಿದೆಯಾ ನಮ್ಮ ಮಾಧ್ಯಮದವರಿಗೆ..? ಇದನ್ನೆಲ್ಲಾ ನೋಡಿದರೆ ಅವನನ್ನ ಹುಚ್ಚ ಅನ್ನೋಕಿಂತ 'ಅವನ ಮಾತುಗಳಿಗೆ ಮೊದಮೊದಲು ಚಪ್ಪಾಳೆ-ಶಿಳ್ಳೆ-ಲೈಕು ಹೊಡೆದು ಬೆಂಬಲಿಸಿದ ಜನರು ಹುಚ್ಚರೋ..?''

Director Veerendra reaction2

''ಅವನು ಸಿನೆಮಾ ವಿತರಕರು ಮತ್ತು ಪ್ರೇಕ್ಷಕರ ವಿರುದ್ಧ ಮಾತಾಡಿದ್ದಕ್ಕೇ ಇಂಪ್ರೆಸ್ ಆಗಿ ಅವನನ್ನ ಆತುರಾತುರವಾಗಿ ತಮ್ ತಮ್ಮ ಛಾನೆಲ್ಲುಗಳಲ್ಲಿ ಕೂರಿಸ್ಕೊಂಡು TRPಗೋ ಮತ್ತೇನಕ್ಕೋ ಕಾರ್ಯಕ್ರಮ ಮಾಡಿದ ಮಾಧ್ಯಮದವರು ಹುಚ್ಚರೋ..? ಗೊತ್ತಾಗ್ತಿಲ್ಲ..!!''

"ನಾಟ್ಕಗಳು ಯಾಕ್ ಆಡ್ತೀರಾ... ಮಾಡ್ ಕೂಡದು..!" ಅಂತ ಅಬ್ಬರಿಸಿ ಬೊಬ್ಬಿರಿಯೋ ಈ ಹುಚ್ಚನ ನಾಟಕಕ್ಕೆ ಜನ "ಕ್ಕಿಕ್ಕಿಕ್ಕಿ..!" ಅಂತ ನಕ್ಕು ಮನರಂಜನೆ ತಗೋತಾ ಇದ್ದಾರೆ.. ಫೇಸ್ಬುಕ್ಕು, ಯೂಟ್ಯೂಬಿನಲಿ ಶೇರ್ ಮಾಡ್ತಾ ಇದ್ದಾರೆ.. ಟಿವಿಯಲ್ಲಿ ಸುದ್ಧಿವಾಹಿನಿಗಳಲ್ಲೂ ಹಾಕ್ಕೋಂಡ್ ಚಚ್ತಾ ಅವರೆ ಇವನ ಮಾತುಗಳನ್ನ...!!''

Post by ಸಾಮಾನ್ಯ ಕನ್ನಡಿಗ -Samanya Kannadiga.

"ನಾನು ರೌಡಿಸಂ ಮಾಡ್ತೀನಿ, ಅವರನ್ನ ಕೊಲೆ ಮಾಡ್ತೀನಿ, ಇವರನ್ನ ಸಾಯಿಸ್ತೀನಿ, ಪೊಲೀಸವರಿಗೂ ಹೊಡೀತೀನಿ..!" ಅಂತ ವದರಾಡ್ತಾ ಇದ್ದಾನೆ.. "ಕನ್ನಡ ಭಾಷೆಗೆ ಬೈಯ್ಯೋಲ್ಲ, ಕರ್ನಾಟಕಕ್ಕೆ ಕನ್ನಡಿಗರಿಗೆ ನನ್ನ ಎಕ್ಕಡ ಹಾಕ" ಅಂತಾವ್ನೆ..! ಅಸಲು ಈ ಮನುಷ್ಯ ಕನ್ನಡದವನಾ..? ಅವನ ಭಾಷಾಬಳಕೆಯನ್ನ ನೋಡಿದ್ರೆ ಕನ್ನಡ ತಾಯಿಯ ಹೊಟ್ಟೇಲಿ ಹುಟ್ಟಿದಂಗೆ ಕಾಣಲ್ಲ, ಇರಲಿ.., ಇವನನ್ನು ಹೆತ್ತ ತಪ್ಪಿಗೋ, ಪುಣ್ಯಕ್ಕೋ ಆತನ ತಂದೆ ತಾಯಿಯ ಹೆಸರನ್ನ ಪದೇ ಪದೇ ಬಳಸ್ತಾನೆ.. "ತಾನು ಮಾಡಿದ ಸಿನೆಮಾ ಕರ್ನಾಟಕಕ್ಕೆ ತನ್ನ ತಂದೆ ಕೊಟ್ಟ ಭಿಕ್ಷೆ..!" ಅಂತಾನೆ..''

Director Veerendra reaction3

''ನೀನು ಸೋತದಕ್ಕೆ ನ್ಯೂಸ್ ಛಾನೆಲ್ಲು, ಸೀರಿಯಲ್ಲು, ಎಫ್.ಎಂ.ರೇಡಿಯೋ, ನ್ಯೂಸ್ ಪೇಪರ್ರುಗಳನ್ನ ಬಂದ್ ಮಾಡಿ ಜನರಿಗೆ ಶಿಕ್ಷೆ ಕೊಡ್ತೀನಿ ಅನ್ನೋ ನಿನ್ನ ಮನಸ್ಥಿತಿಗೆ "ಅಯ್ಯೋ" ಅನ್ಸತ್ತೆ..! "ಲೋ ಹುಚ್ಚಪ್ಪ, ನೀನಲ್ಲ, ಜಗತ್ತಿನಲ್ಲಿ ಯಾರು ಸಿನೆಮಾ ಮಾಡದೇ ಇದ್ದರೂ ಜನರಿಗೇನೂ ಲಾಸ್ ಇಲ್ಲ ಮಾರಾಯಾ.. ಎಲ್ಲಾರಿಗೂ ಅವರವರ ಬದುಕು ಬವಣೆ ಇದೆ.. ಸಿನೆಮಾ ಇಲ್ಲದೇ ಇದ್ರೆ ಜನರು ಬದುಕ್ಕಾಗಲ್ಲ ಅನ್ನೋ ಮೂಢನಂಬಿಕೆಯನ್ನ ನಿನ್ನ ತಲೆಗೆ ತುಂಬಿದವರು ಯಾರಪ್ಪ..?" [ಜೀ ಕನ್ನಡದಲ್ಲಿ 'ವೆಂಕಟ'ನ ಹುಚ್ಚಾವತಾರ]

''ನಿನ್ನ ಸಿನೆಮಾ ಹಾಡುಗಳನ್ನ ಯೂಟ್ಯೂಬಿನಲ್ಲಿ ನೋಡಕ್ಕೇ ಆಗಲ್ಲ, ಥಿಯೇಟರಿನಲ್ಲಿ ಜನಗಳು ಹೇಗೆ ನೋಡಬೇಕು..? ನಿನ್ನಲ್ಲಿಲ್ಲದ ಕಲೆಯನ್ನು ತುಳಿಯುವುದಾದ್ರೂ ಹೇಗೆ..? ಇಲ್ಲದ ಸಗಣಿಯನ್ನ ತುಳಿದು ವಾಸನೆ ಅಂತ ಮೂಗು ಮುಚ್ಕೊಳೋ ಮತಿಗೆಟ್ಟವರು ಇಲ್ಲಿ ಯಾರೂ ಇಲ್ಲ..! ಸೋತವನು ನೀನೊಬ್ಬನೇ ಅನ್ನೋಥರ ಆಡ್ತಾ ಇದೀಯಲ್ಲ ಮಾರಾಯಾ..?''

vd

''ಸಿನೆಮಾ ಚೆನ್ನಾಗಿಲ್ಲಾಂದ್ರೆ ರಜನಿಕಾಂತನ್ನು ಕೇರ್ ಮಾಡಲ್ಲ, ಚೆನ್ನಾಗಿದ್ರೆ ಡೈರೆಕ್ಟರ್ರು-ನಟ-ನಟಿಯರ ಹೆಸ್ರುಗಳಿಲ್ಲದ "6-5=2" ಸಿನೆಮಾನೂ ಸೂಪರ್ ಹಿಟ್ ಮಾಡಿಸ್ತಾರೆ ಪ್ರೇಕ್ಷಕರು..!! ನಿನ್ನ ಸೋಲಿಗೆ ನೀನೇ ಕಾರಣ, ಮತ್ಯಾರ ಮೇಲೋ ಗೂಬೆ ಕೂರಿಸಿ ನಿನ್ನನ್ನ ನೀನು ಸಮಾಧಾನ ಮಾಡ್ಕೋಳೋ ಹಾಗಿದ್ರೆ ನಿಮ್ಮಪ್ಪನ ಮುಂದೆ ಹೋಗಿ ಮಾತಾಡು... ಪಾಪ, ಒಪ್ಕೋತಾರೆ..!''

''ಕೋಟಿ ಕೋಟಿ ಖರ್ಚು ಮಾಡಿ ಕಳ್ಕೊಂಡು ಮತ್ತೆ ಮತ್ತೆ ಸಿನೆಮಾಗೆ "ತನು-ಮನ-ಮನೆ-ಧನ" ಅರ್ಪಿಸಿಕೊಂಡಿರುವ "ಕ್ರೇಝಿಸ್ಟಾರ್ ರವಿಚಂದ್ರನ್" ಅವ್ರಂಥವರೇ ಒಮ್ಮೆ ಕೂಡ ತಮ್ಮ ಸೋಲಿಗೆ ಪ್ರೇಕ್ಷಕರನ್ನ ಹೊಣೆ ಮಾಡಿದ್ದಿಲ್ಲ... "ಯಾಕೋ ನಾನು ಮಾಡಿರೋ ಸಿನೆಮಾ ಪ್ರೇಕ್ಷಕರಿಗೆ ಇಷ್ಟ ಆಗಿಲ್ಲ, ಮತ್ತೆ ಆಥರದ ಸಿನೆಮಾ ಮಾಡಲ್ಲ..!" ಎಂದು ಹೇಳಿ ತಮ್ಮನ್ನ ತಾವು ಪ್ರೇಕ್ಷಕರ ಮುಂದೆ ನಾನಾ ಥರನಾಗಿ ತೋರಿಸ್ಕೊಳ್ಳೋ ಪ್ರಯತ್ನ ಮಾಡ್ತಾ ಬಂದಿದ್ದಾರೆ.. ಗೆದ್ದಿದ್ದಾರೆ ಕೂಡ..! ಇದ್ಯಾರು ಈಯಪ್ಪ ಮಾಡಿರೋ ಒಂದು ಸಿನೆಮಾ ಕಾಲೆತ್ಕೊಂಡದ್ದಕ್ಕೆ ಕನ್ನಡಿಗರಿಗೆಲ್ಲಾ ಈ ಪರಿ ಬಗ್ಗಿಸ್ಕೊಂಡು ಎಕ್ಕಡದಲ್ಲಿ ಬಾರಿಸ್ತಾ ಅವ್ನೆ..!!?'' [ಹೊಸ ಹುಚ್ಚು ವೆಂಕ್ಟನ ವಿಡಿಯೋ ಸಖತ್ ಬೊಂಬಾಟ್!]

''ಅವನ ಮಾತಿಗೆ "ಶಬ್ಬಾಸ್" ಅಂತಾವ್ರೆ ಜನಗಳು..! ಒಂದೋ ಯಾರಾದ್ರೂ ಇವನ್ನ ಎತ್ಕೊಂಡ್ ಹೋಗಿ ಹುಚ್ಚಾಸ್ಪತ್ರೆಗೆ ಹಾಕಿ ಅವನಿರೋ ವಾರ್ಡಿಗೆ "ಹುಚ್ಚ ವೆಂಕಟ್.. ನೋ ಆಕ್ಷನ್, ಓನ್ಲಿ ಕಟ್..!" ಅಂತ ಬೋರ್ಡ್ ಹಾಕ್ಬೇಕು.. ಇಲ್ಲಾಂದ್ರೆ ಅವನಾಡಿರೋ ಮಾತುಗಳಿಗೆ ಕಾನೂನುರೀತ್ಯಾ ಕ್ರಮ ತಗೋಬೇಕು...! ದಿನಾ ಬೆಳಗ್ಗೆ ಎದ್ದು ವಾಟ್ಸಪ್ಪಲ್ಲಿ ಅವನಾಡೋ ದರಿದ್ರ ಮಾತುಗಳನ್ನ ಕೇಳೋಕೆ ಆಗ್ತಾ ಇಲ್ಲ.. ಅಸಹ್ಯ ಆಗ್ತದೆ, ಕೋಪ ಬರ್ತದೆ.. ಆ ಕೋಪದಲ್ಲೇ ಇದನ್ನ ಬರೀತಾ ಇದೀನಿ, ಅರ್ಥ ಆಯ್ತಾ...!?''

Post by Virrus Veeru.

ಹೀಗಂತ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ವೀರೇಂದ್ರ ಸ್ಟೇಟಸ್ ಹಾಕಿದ್ದಾರೆ. ಹಾಗೆ ನೋಡಿದ್ರೆ, ವೀರೇಂದ್ರ ಕೋಪದಲ್ಲಿ ಬರೆದಿರುವ ಮಾತುಗಳಲ್ಲಿ ಅರ್ಥ ಇದೆ. ಕನ್ನಡ ಸಿನಿ ಪ್ರಿಯರು, ಕನ್ನಡಾಭಿಮಾನಿಗಳು, ಸದಭಿರುಚಿಯ ಕನ್ನಡ ಚಿತ್ರಗಳನ್ನ ಸದಾ ಪ್ರೋತ್ಸಾಹಿಸುವವರು ವೀರೇಂದ್ರ ಮಾತುಗಳನ್ನ ಖಂಡಿತ ಒಪ್ಪಿಕೊಳ್ಳುತ್ತಾರೆ. ಏನಂತೀರಿ... (ಫಿಲ್ಮಿಬೀಟ್ ಕನ್ನಡ)

English summary
Huccha Venkat's mad act and abusive comments on Kannada Audience is becoming viral on YouTube. Director Veerendra of Preethi Geethi Ithyadhi Fame has reacted to this and made an open statement on Facebook.
Wednesday, January 14, 2015, 18:43
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X