»   » ಪ್ರಿಯತಮೆ ಜೊತೆ ಸಪ್ತಪದಿ ತುಳಿದ ನಟ ವರುಣ್ ಸಂದೇಶ್

ಪ್ರಿಯತಮೆ ಜೊತೆ ಸಪ್ತಪದಿ ತುಳಿದ ನಟ ವರುಣ್ ಸಂದೇಶ್

Written by: Sony
Subscribe to Filmibeat Kannada

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಿನಿಮಾ ತಾರೆಯರೆಲ್ಲಾ ದಾಂಪತ್ಯ ಜೀವನಕ್ಕೆ ಕಾಲಿಡುವ ಮನಸ್ಸು ಮಾಡುತ್ತಿದ್ದಾರೆ. ಕೆಲವರು ತಾವು ಪ್ರೀತಿಸಿದವರ ಕೈ ಹಿಡಿದರೆ, ಇನ್ನೂ ಕೆಲವರು ಮನೆಯವರು ಮೆಚ್ಚಿದ ಹುಡುಗಿ/ಹುಡುಗನನ್ನು ಕೈ ಹಿಡಿಯುತ್ತಿದ್ದಾರೆ.

ಮೊನ್ನೆ-ಮೊನ್ನೆಯಷ್ಟೇ ದಕ್ಷಿಣ ಭಾರತದ ಖ್ಯಾತ ನಟ ಜೆಡಿ ಚಕ್ರವರ್ತಿ ಅವರು ತಾವು ಮೆಚ್ಚಿದ ಸಖಿಯನ್ನು ಮದುವೆಯಾದರೆ, ಕನ್ನಡ ನಟ ಯಶ್ ಅವರು ದೀರ್ಘ ಕಾಲದ ತಮ್ಮ ಮನದನ್ನೆ ನಟಿ ರಾಧಿಕಾ ಪಂಡಿತ್ ಅವರ ಜೊತೆ ನಿಶ್ಚಿತಾರ್ಥ ನೆರವೇರಿಸಿಕೊಂಡು, ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದಾರೆ.[ಗುಟ್ಟು-ಗುಟ್ಟಾಗಿ ಮದುವೆಯಾದ ದಕ್ಷಿಣ ಭಾರತದ ನಟ ಜೆಡಿ ಚಕ್ರವರ್ತಿ]

ಇವರೆಲ್ಲರಂತೆ, ಇದೀಗ ಟಾಲಿವುಡ್ ನಟ ವರುಣ್ ಮತ್ತು ಕನ್ನಡ 'ಅಂತೂ ಇಂತೂ ಪ್ರೀತಿ ಬಂತು' ಚಿತ್ರದ ಖ್ಯಾತಿಯ ನಟಿ ವಿತಿಕಾ ಶೆರು, ನಿನ್ನೆ (ಆಗಸ್ಟ್ 19) ತಾನೆ ಕುಟುಂಬದ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬರೀ ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಮದುವೆ ನೆರವೇರಿದ ಕಾರಣ, ಈ ಮದುವೆಯಲ್ಲಿ ಟಾಲಿವುಡ್ ಚಿತ್ರರಂಗದ ಗಣ್ಯರು ಉಪಸ್ಥಿತರಿರಲಿಲ್ಲ.

ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಅಧೀಕೃತವಾಗಿ ಸತಿ-ಪತಿಗಳಾಗಿದ್ದಾರೆ. ಈ ನಟ-ನಟಿಯ ಮದುವೆ ಆಲ್ಬಂ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

ನೂತನ ಜೀವನಕ್ಕೆ ಕಾಲಿಟ್ಟ ನಟ-ನಟಿ

ನೂತನ ಜೀವನಕ್ಕೆ ಕಾಲಿಟ್ಟ ನಟ-ನಟಿ

ತೆಲುಗು 'ಹ್ಯಾಪಿ ಡೇಸ್' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಚಿತ್ರರಂಗ ಕ್ಷೇತ್ರಕ್ಕೆ ಕಾಲಿಟ್ಟ ನಟ ವರುಣ್ ಸಂದೇಶ್ ಇದೀಗ ತಮ್ಮ ಪ್ರಿಯತಮೆ ನಟಿ ವಿತಿಕಾ ಶೆರು ಅವರನ್ನು ಅಗ್ನಿಸಾಕ್ಷಿಯಾಗಿ ತಾಳಿಕಟ್ಟಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.[ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ]

ಶುಭ ಮುಹೂರ್ತದಲ್ಲಿ ಮದುವೆ

ಶುಭ ಮುಹೂರ್ತದಲ್ಲಿ ಮದುವೆ

ಹೈದರಾಬಾದ್ ನ ರೆಸಾರ್ಟ್ ಒಂದರಲ್ಲಿ ನಿನ್ನೆ (ಆಗಸ್ಟ್ 19) ಶುಭ ಮುಂಜಾನೆ 3.14ರ ಶುಭ ಮುಹೂರ್ತದಲ್ಲಿ ನಟ ವರುಣ್ ಸಂದೇಶ್ ಅವರು ವಿತಿಕಾ ಅವರ ಕತ್ತಿಗೆ ತಾಳಿ ಕಟ್ಟಿದ್ದಾರೆ. ಪಕ್ಕಾ ಹಿಂದು ಸಂಪ್ರದಾಯದಂತೆ ಈ ಮದುವೆ ನೆರವೇರಿದೆ. ಜೊತೆಗೆ ಮದುವೆಯ ಹಿಂದಿನ ದಿನ (ಆಗಸ್ಟ್ 18) ಮದರಂಗಿ ಶಾಸ್ತ್ರ, ಸಂಗೀತ ಕಾರ್ಯಕ್ರಮ, ಪೆಳ್ಳಿ ಕೂದುರು ಸಮಾರಂಭ ಮತ್ತು ಆರತಕ್ಷತೆ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು.[ಮಾಧ್ಯಮಗಳ ಮುಂದೆ ಪ್ರೇಮ ಪುರಾಣ ಬಾಯ್ಬಿಟ್ಟ ಯಶ್-ರಾಧಿಕಾ]

ಖಾಸಗಿ ಕಾರ್ಯಕ್ರಮ

ಖಾಸಗಿ ಕಾರ್ಯಕ್ರಮ

ನಟ ವರುಣ್ ಮತ್ತು ನಟಿ ವಿತಿಕಾ ಅವರದು ಲವ್ ಕಮ್ ಆರೇಂಜ್ ಮದುವೆ ಆದ್ದರಿಂದ ಪಕ್ಕಾ ಖಾಸಗಿಯಾಗಿ ಮದುವೆಯಾಗಿದ್ದಾರೆ. ಬರೀ ಹತ್ತಿರದ ಗೆಳೆಯರು, ಸಂಬಂಧಿಕರು ಮಾತ್ರ ಈ ಮದುವೆಯಲ್ಲಿ ಭಾಗಿಯಾಗಿದ್ದರು. [ಬಿಗ್ ಬ್ರೇಕಿಂಗ್ : ಮತ್ತೊಂದು ಮದುವೆ ಆದ ದುನಿಯಾ ವಿಜಯ್.!]

ಲವ್ವಿ-ಡವ್ವಿ ಶುರುವಾಗಿದ್ದೇಗೆ.?

ಲವ್ವಿ-ಡವ್ವಿ ಶುರುವಾಗಿದ್ದೇಗೆ.?

'ಪಡ್ಡಾನಂಡಿ ಪ್ರೇಮಲೋ ಮರಿ' ಚಿತ್ರದಲ್ಲಿ ನಟ ವರುಣ್ ಸಂದೇಶ್ ಮತ್ತು ನಟಿ ವಿತಿಕಾ ಶೆರು ಅವರು ಒಂದಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಇವರಿಬ್ಬರಿಗೂ ಲವ್ ಆಗಿತ್ತು. ತದನಂತರ ಆರಂಭವಾದ ಇವರು ಲವ್ವಿ-ಡವ್ವಿ ಇದೀಗ ಮದುವೆ ಮೂಲಕ ಕೊನೆಗೊಂಡಿದೆ.

ಡಿಸೆಂಬರ್ ನಲ್ಲಿ ಎಂಗೇಜ್ ಆಗಿದ್ದರು

ಡಿಸೆಂಬರ್ ನಲ್ಲಿ ಎಂಗೇಜ್ ಆಗಿದ್ದರು

ಇವರಿಬ್ಬರ ಸುತ್ತಾಟದ ಬಗ್ಗೆ ಗಾಸಿಪ್ ಗಳು ಹರಡಲಾರಂಭಿಸಿದಾಗ, ಖುದ್ದಾಗಿ ನಟ-ನಟಿಯರು ಟ್ವಿಟ್ಟರ್ ನಲ್ಲಿ ತಮ್ಮಿಬ್ಬರ ಸಂಬಂಧದ ಬಗ್ಗೆ ಕನ್ಫರ್ಮ್ ಮಾಡಿದ್ದರು. ತದನಂತರ ಎರಡು ಮನೆಯವರ ಒಪ್ಪಿಗೆ ಮೇರೆಗೆ ಡಿಸೆಂಬರ್ 7 ರಂದು, ಅಪ್ ಸ್ಕೇಲ್ ಹೋಟೆಲ್, ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ನಟ ವರುಣ್ ಸಂದೇಶ್

ನಟ ವರುಣ್ ಸಂದೇಶ್

'ಹ್ಯಾಪಿ ಡೇಸ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟ ವರುಣ್ ಅವರು ತದನಂತರ, 'ಕೊತ್ತ ಬಂಗಾರು ಲೋಕಂ', 'ಎವರೈನ ಎಪುಡೈನ' ಹೀಗೆ ಸುಮಾರು 20 ಸಿನಿಮಾಗಳಲ್ಲಿ ಮಿಂಚಿ ತೆಲುಗು ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದರು.

ನಟಿ ವಿತಿಕಾ ಶೆರು

ನಟಿ ವಿತಿಕಾ ಶೆರು

ಮೊಟ್ಟ ಮೊದಲ ಬಾರಿಗೆ 'ಅಂತೂ ಇಂತೂ ಪ್ರೀತಿ ಬಂತು' ಎಂಬ ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಕಾಲಿಟ್ಟ ನಟಿ ತದನಂತರ 'ಉಲ್ಲಾಸ ಉತ್ಸಾಹ' ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ ತೆಲುಗಿಗೆ ಕಾಲಿಟ್ಟ ವಿತಿಕಾ ಪೂರ್ತಿ ಟಾಲಿವುಡ್ ನಲ್ಲೇ ಬಿಜಿಯಾಗಿ ಬಿಟ್ಟರು. ಫ್ಯಾಶನ್ ಡಿಸೈನಿಂಗ್ ನಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಮುಗಿಸಿರುವ ನಟಿ ವಿತಿಕಾ ತಮ್ಮ 11ನೇ ವಯಸ್ಸಿನಲ್ಲಿ ನಟನಾ ವೃತ್ತಿಯನ್ನು ಆರಂಭಿಸಿದ್ದರು. ತಮ್ಮ ಚಿಕ್ಕದಾದ ಸಿನಿ ಜರ್ನಿಯಲ್ಲಿ ವಿತಿಕಾ ತಮಿಳು-ತೆಲುಗು, ಕನ್ನಡ ಸೇರಿದಂತೆ ಸುಮಾರು 10 ಸಿನಿಮಾಗಳಲ್ಲಿ ನಟಿಸಿದ್ದಾರೆ.

English summary
Tollywood actor Varun Sandesh on August 19 morning tied knot with actress Vithika Sheru in a grand way at a resort in Hyderabad. The extravagant marriage ceremony included mehendi party, sangeeth, pelli koothuru as well as a reception party on August 18.
Please Wait while comments are loading...

Kannada Photos

Go to : More Photos