»   » 'ಸ್ಪೈಡರ್ ಮ್ಯಾನ್' ಆದ ನವರಸ ನಾಯಕ ಜಗ್ಗೇಶ್!

'ಸ್ಪೈಡರ್ ಮ್ಯಾನ್' ಆದ ನವರಸ ನಾಯಕ ಜಗ್ಗೇಶ್!

Posted by:
Subscribe to Filmibeat Kannada

''ಪ್ಯಾಂಟು ಮೇಲೆ ಚಡ್ಡಿ ಹಾಕಿ ನಿಲ್ಲೋನು ಸೂಪರ್ ಮ್ಯಾನ್...ಪ್ರಾಬ್ಲಂ ಫೇಸು ಮಾಡಿ ನಿಲ್ಲೋನೇ ಪೆಸಲ್ ಮ್ಯಾನ್..'' - 'ಕೃಷ್ಣಲೀಲಾ' ಚಿತ್ರದ ಈ ಹಾಡು ನೀವು ಕೇಳಿರಬಹುದು.

ಈಗ ಸೂಪರ್ ಮ್ಯಾನ್ ಮತ್ತು ಪೆಸಲ್ ಮ್ಯಾನ್ ಬಗ್ಗೆ ನಾವು ಗುನುಗುವುದಕ್ಕೆ ಕಾರಣ ನವರಸ ನಾಯಕ ಜಗ್ಗೇಶ್.! ಪ್ಯಾಂಟು ಮೇಲೆ ಚಡ್ಡಿ ಹಾಕಿ 'ಸಖತ್ ಪೆಸಲ್' ಅವತಾರ ತಾಳಿದ್ದಾರೆ ಜಗ್ಗೇಶ್. ಅದು 'ನೀರ್ ದೋಸೆ' ಚಿತ್ರಕ್ಕಾಗಿ. ಬೇಕಾದ್ರೆ, ನೀವೇ ಈ ಫೋಟೋ ನೋಡಿ....

In Pic-Jaggesh as spider man in 'Neer Dose'

ನಿಮ್ಮ ಕಣ್ಣನ್ನ ನೀವು ನಂಬೋಕೆ ಸಾಧ್ಯವಾಗದೇ ಇದ್ದರೂ, ಇದು 100% ಜಗ್ಗೇಶ್ ರವರ ಹೊಸ ಗೆಟಪ್. ಸನ್ಮಾನ್ಯ ನಿರ್ದೇಶಕ ವಿಜಯ್ ಪ್ರಸಾದ್ ರವರು ಜಗ್ಗೇಶ್ ರವರಿಗಾಗಿ 'ನೀರ್ ದೋಸೆ' ಚಿತ್ರದಲ್ಲಿ 'ಆಧುನಿಕ ಸ್ಪೈಡರ್ ಮ್ಯಾನ್' ಗೆಟಪ್ ಹಾಕಿಸಿದ್ದಾರೆ. ಹಾಗಂತ ಸ್ವತಃ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಹೇಳಿ ಕೇಳಿ ಕಾಮಿಡಿ ಕಚಗುಳಿ ಇಡುವುದರಲ್ಲಿ ಜಗ್ಗೇಶ್ ಎಕ್ಸ್ ಪರ್ಟ್. ಅಂದ್ಮೇಲೆ ಇಂತಹ 'ಪೆಸಲ್' ಗೆಟಪ್ ಹಾಕಿದ್ಮೇಲೆ 'ನೀರ್ ದೋಸೆ' ಚಿತ್ರದಲ್ಲಿ ಹಾಸ್ಯದ ಹೊನಲನ್ನೇ ಹರಿಸುವುದರಲ್ಲಿ ಡೌಟ್ ಬೇಡ. [ಹಾಟ್ ಲುಕ್ ನಲ್ಲಿ ಪಡ್ಡೆಹೈಕಳ ನಿದ್ದೆಗೆಡಿಸುವ, ನೀರ್ ದೋಸೆ' ಬೆಡಗಿ]

ಅಷ್ಟಕ್ಕೂ, 'ನೀರ್ ದೋಸೆ' ಸಿನಿಮಾದಲ್ಲಿ ಜಗ್ಗೇಶ್ 'ಆಧುನಿಕ ಸ್ಪೈಡರ್ ಮ್ಯಾನ್' ಆಗೋದು ಹೇಗೆ ಅನ್ನೋದಿನ್ನೂ ಬಹಿರಂಗವಾಗಿಲ್ಲ. ಸದ್ಯಕ್ಕೆ ಚಿತ್ರೀಕರಣ ನಡೆಯುತ್ತಿದೆ. ಹರಿಪ್ರಿಯಾ, ಸುಮನ್ ರಂಗನಾಥ್, ದತ್ತಣ್ಣ ತಾರಾಬಳಗದಲ್ಲಿದ್ದಾರೆ.

English summary
Kannada Actor Jaggesh in 'Spider-Man' look for Kannada Movie 'Neer Dose'. Check out the picture.
Please Wait while comments are loading...

Kannada Photos

Go to : More Photos