»   » 'ನೀರ್ ದೋಸೆ' ಅಡ್ಡದಲ್ಲಿ ಶಾರದಾಮಣಿ ಸುಮನ್ ರಂಗನಾಥ್

'ನೀರ್ ದೋಸೆ' ಅಡ್ಡದಲ್ಲಿ ಶಾರದಾಮಣಿ ಸುಮನ್ ರಂಗನಾಥ್

Posted by:
Subscribe to Filmibeat Kannada

ಗೋಲ್ಡನ್ ಗರ್ಲ್ ರಮ್ಯಾ ಅಭಿನಯದ ವಿಜಯ್ ಪ್ರಸಾದ್ ನಿರ್ದೇಶನದ 'ಸಿದ್ಲಿಂಗು' ಚಿತ್ರದಲ್ಲಿ ಆಂಡಳಮ್ಮ ಟೀಚರ್ ಪಾತ್ರ ನಿರ್ವಹಿಸಿದ್ದ ಸುಮನ್ ರಂಗನಾಥ್ ಇದೀಗ 'ನೀರ್ ದೋಸೆ' ಅಡ್ಡಕ್ಕೆ ಎಂಟ್ರಿಕೊಟ್ಟಿದ್ದಾರೆ.

'ನೀರ್ ದೋಸೆ' ಚಿತ್ರದಲ್ಲಿ ನೃತ್ಯಗಾರ್ತಿ ಶಾರದಾಮಣಿ ಪಾತ್ರ ಪೋಷಿಸುತ್ತಿರುವ ಸುಮನ್ ರಂಗನಾಥ್ ಶೂಟಿಂಗ್ ಸ್ಪಾಟ್ ನಲ್ಲಿ ಕಂಡುಬಂದಿದ್ದು ಹೀಗೆ......

In Pic-Suman Ranganath as Sharadamani in 'Neer Dose'

ಅಷ್ಟಕ್ಕೂ ನೃತ್ಯಗಾರ್ತಿ ಶಾರದಾಮಣಿ ಪಾತ್ರವನ್ನ ನಟಿ ಭಾವನಾ ನಿರ್ವಹಿಸಬೇಕಿತ್ತು. ತಾವು ನಿರೀಕ್ಷಿಸಿದಷ್ಟು ಸಂಭಾವನೆ ಸಿಗಲಿಲ್ಲ ಎಂದು ಭಾವನಾ 'ನೀರ್ ದೋಸೆ' ತಂಡದಿಂದ ಹೊರನಡೆದರು ಎಂದು ಈ ಹಿಂದೆ ವರದಿ ಆಗಿತ್ತು.[ರಮ್ಯಾ 'ನೀರ್ ದೋಸೆ'ಯಲ್ಲಿ ಮತ್ತೆ ಬದಲಾವಣೆ]

In Pic-Suman Ranganath as Sharadamani in 'Neer Dose'

ಈಗ ಭಾವನಾ ಜಾಗಕ್ಕೆ ಬಂದಿರುವ ಸುಮನ್ ರಂಗನಾಥ್ 'ನೀರ್ ದೋಸೆ' ಚಿತ್ರಕ್ಕೆ ಹೊಸ ಕಳೆ ತುಂಬಿದ್ದಾರೆ.

ನವರಸ ನಾಯಕ ಜಗ್ಗೇಶ್ ಈ ಚಿತ್ರದ ನಾಯಕ. ಹರಿಪ್ರಿಯಾ ನಾಯಕಿ. ಬಿ.ಎಸ್.ಸುಧೀಂದ್ರ ಹಾಗೂ ವಿ.ಬಾಬು ಸಿನಿಮಾ ನಿರ್ಮಾಪಕರು. ವಿಜಯ್ ಪ್ರಸಾದ್ 'ನೀರ್ ದೋಸೆ' ನಿರ್ದೇಶಕ.

English summary
Kannada Actress Suman Ranganath is playing as Dancer Sharadamani in 'Neer Dose'. Check out the pictures.
Please Wait while comments are loading...

Kannada Photos

Go to : More Photos