»   » ಚಿತ್ರಗಳು: 'ಕೋಟಿಗೊಬ್ಬ 2' ನಿರ್ದೇಶಕರ ಮಗಳ ಮದುವೆಯಲ್ಲಿ ಸುದೀಪ್ ಭಾಗಿ

ಚಿತ್ರಗಳು: 'ಕೋಟಿಗೊಬ್ಬ 2' ನಿರ್ದೇಶಕರ ಮಗಳ ಮದುವೆಯಲ್ಲಿ ಸುದೀಪ್ ಭಾಗಿ

Posted by:
Subscribe to Filmibeat Kannada

ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ 2' ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ತಮಿಳಿನ ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರ ದೊಡ್ಡ ಮಗಳು ಮಲ್ಲಿಕಾ ಅವರ ವಿವಾಹವು ಅರ್ಜುನ್ ಕೃಷ್ಣನ್ ಅವರ ಜೊತೆ ಮೇ 2 ರಂದು ಬಹಳ ಅದ್ದೂರಿಯಾಗಿ ಚೆನ್ನೈ ನ ಶ್ರೀವಾರು ವೆಂಕಟಾಚಲಪತಿ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿದೆ.

ಈ ಸಂಭ್ರಮದ ಮದುವೆ ಕ್ಷಣಗಳಲ್ಲಿ ತಮಿಳಿನ ಖ್ಯಾತ ನಟ-ನಟಿಯರು ಸೇರಿದಂತೆ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, 'ಚಕ್ರವ್ಯೂಹ' ಖ್ಯಾತಿಯ ನಟ ಅರುಣ್ ವಿಜಯ್, ಖ್ಯಾತ ಸಂಗೀತ ಮಾಂತ್ರಿಕ ಎಸ್.ಪಿ ಬಾಲಸುಬ್ರಮಣ್ಯಂ, ಪ್ರಭುದೇವ್ ಹಾಗೂ ಕಮಲ್ ಹಾಸನ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯಾತೀ ಗಣ್ಯರು ಪಾಲ್ಗೊಂಡು ನೂತನ ವಧು-ವರರಿಗೆ ಶುಭಾಶಯ ಕೋರಿದರು.[ಸದ್ಯದಲ್ಲೇ 'ಕೋಟಿಗೊಬ್ಬ 2' ಚಿತ್ರದ ಬಿಡುಗಡೆ ದಿನಾಂಕ ಘೋಷಣೆ]

In pics: Director KS Ravikumar's Daughter Marriage ceremony

ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರ ಮಗಳು ಮಲ್ಲಿಕಾ ಮತ್ತು ಅರ್ಜುನ್ ಕೃಷ್ಣನ್ ಅವರ ಮದುವೆ ಶಾಸ್ತ್ರಗಳು ಪಕ್ಕಾ ಹಿಂದು ಸಂಪ್ರದಾಯದಂತೆ ನೆರವೇರಿದ್ದು, ವಧು ಮಲ್ಲಿಕಾ ಅವರು ಸಂಪ್ರದಾಯದಂತೆ ತಿಳಿಗೆಂಪು ಬಣ್ಣದ ಕಾಂಚಿವರಂ ಸೀರೆ ಉಟ್ಟು ಕಂಗೊಳಿಸುತ್ತಿದ್ದರು.

ನಿನ್ನೆ ನಡೆದ ಆರತಕ್ಷತೆ ಸಮಾರಂಭದಲ್ಲಿ ನಮ್ಮ ಕನ್ನಡ ನಟ ಕಿಚ್ಚ ಸುದೀಪ್ ಅವರು ಬಹಳ ಸಿಂಪಲ್ ಆಗಿ ಭಾಗವಹಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು. ಅಂದಹಾಗೆ ಕೆ.ಎಸ್ ರವಿಕುಮಾರ್ ಅವರು ಯಾರೆಲ್ಲಾ ನಟ-ನಟಿಯರಿಗೆ ನಿರ್ದೇಶನ ಮಾಡಿದ್ದಾರೆ ಅವರೆಲ್ಲಾ ಈ ಸಂಭ್ರಮದ ಕ್ಷಣಗಳಲ್ಲಿ ಪಾಲ್ಗೊಂಡು ಹೊಸ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳಿಗೆ ಶುಭ ಹಾರೈಸಿದರು.[ಅಬ್ಬಾ.! ಅಂತೂ ಕಿಚ್ಚನ ಚಿತ್ರಕ್ಕೆ ಟೈಟಲ್ ಪಕ್ಕಾ ಆಯ್ತು]

ಕಿಚ್ಚ ಸುದೀಪ್ ಹಾಗೂ ಕೆ.ಎಸ್ ರವಿಕುಮಾರ್ ಜುಗಲ್ ಬಂದಿಯ 'ಕೋಟಿಗೊಬ್ಬ 2' ಚಿತ್ರದ ಎರಡು ಹಾಡುಗಳು ಶೂಟಿಂಗ್ ಗೆ ಬಾಕಿ ಉಳಿದಿದ್ದು, ಸದ್ಯದಲ್ಲೇ ಸಿನಿಮಾ ತೆರೆ ಕಾಣಲಿದೆ.[ಫೋಟೋ ಆಲ್ಬಂ: ತಮಿಳು ಸ್ಟಾರ್ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚ-ಶಿವಣ್ಣ ಭಾಗಿ]

ನವ ವಧು ಮಲ್ಲಿಕಾ ಮತ್ತು ವರ ಅರ್ಜುನ್ ಕೃಷ್ಣನ್ ಅವರ ಮದುವೆಯ ಫೋಟೋ ಆಲ್ಬಂ ಮತ್ತು ಆರತಕ್ಷತೆಯ ಫೋಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

ಅರ್ಜುನ್ ಸರ್ಜಾ ಕುಟುಂಬದವರು

ಚಿತ್ರಗಳು: 'ಕೋಟಿಗೊಬ್ಬ 2' ನಿರ್ದೇಶಕರ ಮಗಳ ಮದುವೆಯಲ್ಲಿ ಸುದೀಪ್ ಭಾಗಿ

'ಚಕ್ರವ್ಯೂಹ' ಖ್ಯಾತಿ ನಟ ಅರುಣ್ ವಿಜಯ್

'ಚಕ್ರವ್ಯೂಹ' ಖ್ಯಾತಿ ನಟ ಅರುಣ್ ವಿಜಯ್

-ನಟ ಕಮ್ ನಿರ್ದೇಶಕ ಪ್ರಭುದೇವ್

-ನಿರ್ದೇಶಕ ಕೆ.ಎಸ್ ರವಿಕುಮಾರ್ ದಂಪತಿ

-ಮಲಯಾಳಂ ನಟ ಜಯಾರಂ

-ನವ ವಧು ಮಲ್ಲಿಕಾ ಮತ್ತು ವರ ಅರ್ಜುನ್ ಕೃಷ್ಣನ್

-ನಟ ಕಮಲ್ ಹಾಸನ್

-ನಟಿ ಕೋವೈ ಸರಳಾ

-ನಟ ಅರುಲ್ನಿತಿ

-ನಟ ಪ್ರಶಾಂತ್

-ನಟ ಗುಂಡುಮಣಿ

-ನಟ ಬಾಬಿ ಸಿಂಹ ಮತ್ತು ಕಾರ್ತಿಕ್ ಸುಬ್ಬರಾಜು

-ನಟ ಚಿತ್ರಾ ಲಕ್ಷ್ಮನನ್

-ನಟ ಶ್ರೀಕಾಂತ್, ವಂದನಾ ಶ್ರೀಕಾಂತ್ ದಂಪತಿ

-ನಟ ಉದಯನಿಧಿ ಸ್ಟಾಲಿನ್

-ನಟಿ ಸುಹಾಸಿನಿ ಮತ್ತು ಮಣಿಕಾಂತ್ ದಂಪತಿ

-ನಟ ಜೀವಾ

-ನಟಿ ಮೀನಾ ಮತ್ತು ಮಗಳು ನೈನಿಕಾ (ತೆರಿ ಬೇಬಿ)

-ನಿರ್ದೇಶಕ ಎಸ್.ಶಂಕರ್

-ನಟ ವಿಶಾಲ್ ರೆಡ್ಡಿ

-ನಟ ವಿಶಾಲ್ ರೆಡ್ಡಿ

-ನಟ ಜೀವಾ ದಂಪತಿ

-ಮಲಯಾಳಂ ನಟ ಜಯಾರಂ

-ನಟ ಕಮಲ್ ಹಾಸನ್ ಮತ್ತು ಮಗಳು ಅಕ್ಷರಾ ಹಾಸನ್

-ನಿರ್ದೇಶಕ ಎಸ್ ಶಂಕರ್

-ಕಾಲೈಪುಲಿ ಎಸ್ ಮತ್ತು ತನು

-ಕಾಮಿಡಿ ನಟ ಸತೀಶ್

-ನಿರ್ದೇಶಕ ಎನ್ ಲಿಂಗು ಸ್ವಾಮಿ

-ನಿರ್ದೇಶಕ ಎಸ್.ಪಿ ಮುತ್ತುರಾಮನ್

-ನಿರ್ದೇಶಕ ಸುರೇಶ್ ಕೃಷ್ಣ

-ನಟ ಜೀವಾ ದಂಪತಿ

-ನಟ ಕಾರ್ತಿ ಮತ್ತು ನಿರ್ಮಾಪಕ ಶಿವಕುಮಾರ್ (ಕಾರ್ತಿ-ಸೂರ್ಯ ತಂದೆ)

-ನಿರ್ದೇಶಕ ಭಾಗ್ಯರಾಜ್

-ನಿರ್ದೇಶಕ ಕೆ.ಭಾಗ್ಯರಾಜ್ ದಂಪತಿ

-ನಟಿ ಮೀನಾ ಮತ್ತು ಮಗಳು ನೈನಿಕಾ

ನೇಸರ್

-ನಟ ಪ್ರಭು

-ಪ್ರೀತನ್ ವಿಜಯ್ ಕುಮಾರ್ ಮತ್ತು ಹರಿ

-ಕಾಮಿಡಿ ನಟ ತಂಬಿ ರಾಮಯ್ಯ

-ರಾಜಕೀಯ ವ್ಯಕ್ತಿ ಕಮ್ ನಟ ವಿಜಯ್ ಕುಮಾರ್

English summary
The wedding of Mallika, the daughter of versatile filmmaker KS Ravikumar, and Arjun Krishnan was held at Sri Vaaru Venkatachalapathy Palace Marriage Hall on Monday (May 2), in Chennai. The grand event was attended by the who's who of the Tamil film industry.
Please Wait while comments are loading...

Kannada Photos

Go to : More Photos