»   » ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಿರಿಕ್ ಪಾರ್ಟಿ' ನಿರ್ದೇಶಕ ರಿಶಬ್ ಶೆಟ್ಟಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಿರಿಕ್ ಪಾರ್ಟಿ' ನಿರ್ದೇಶಕ ರಿಶಬ್ ಶೆಟ್ಟಿ

Posted by:
Subscribe to Filmibeat Kannada

'ಕಿರಿಕ್ ಪಾರ್ಟಿ' ಚಿತ್ರದ ನಿರ್ದೇಶಕ ರಿಶಬ್ ಶೆಟ್ಟಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಪರ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಪ್ರಗತಿ ಶೆಟ್ಟಿ ಜೊತೆ ರಿಶಬ್ ಶೆಟ್ಟಿ ಇಂದು ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ.

ಇಂದು (ಫೆಬ್ರವರಿ 9) ಮಧ್ಯಾಹ್ನ 12.25ಕ್ಕೆ ಇದ್ದ ಶುಭ ಮುಹೂರ್ತದಲ್ಲಿ ರಿಶಬ್-ಪ್ರಗತಿ ಹಸೆಮಣೆ ಏರಿದರು. ಉಡುಪಿ ಜಿಲ್ಲೆಯ ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ರಿಶಬ್ ಶೆಟ್ಟಿ-ಪ್ರಗತಿ ಶೆಟ್ಟಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಫೋಟೋ ಆಲ್ಬಂ ಇಲ್ಲಿದೆ ನೋಡಿ....

ಹೊಸ ಬಾಳಿಗೆ ನೀ ಜೊತೆಯಾದೆ....

ಹೊಸ ಬಾಳಿಗೆ ನೀ ಜೊತೆಯಾದೆ....

ಎಲ್ಲರೂ ಅಂದುಕೊಳ್ಳುವ ಹಾಗೆ ರಿಶಬ್ ಶೆಟ್ಟಿ ರವರದ್ದು ಲವ್ ಮ್ಯಾರೇಜ್ ಅಲ್ಲ. ಕುಟುಂಬದವರು ನಿಶ್ಚಯಿಸಿದ ಮದುವೆ.[ಫೆಬ್ರವರಿ 9 ರಂದು 'ಕಿರಿಕ್ ಪಾರ್ಟಿ' ನಿರ್ದೇಶಕ ರಿಶಬ್ ಶೆಟ್ಟಿ ಮದುವೆ]

ಅರೇಂಜ್ಡ್ ಮ್ಯಾರೇಜ್

ಅರೇಂಜ್ಡ್ ಮ್ಯಾರೇಜ್

ರಿಶಬ್ ಶೆಟ್ಟಿ ಸಹೋದರಿ ಕೆಲಸ ಮಾಡುವ ಸಾಫ್ಟ್ ವೇರ್ ಕಂಪನಿಯಲ್ಲಿಯೇ ಪ್ರಗತಿ ಶೆಟ್ಟಿ ಕೂಡ ಉದ್ಯೋಗಿ. ಸಹೋದರಿ ಮೂಲಕ ರಿಶಬ್ ಹಾಗೂ ಕುಟುಂಬದವರಿಗೆ ಪ್ರಗತಿಯ ಪರಿಚಯವಾಗಿದೆ. ಈಗ ಕುಟುಂಬದವರ ಇಚ್ಛೆಯಂತೆಯೇ ರಿಶಬ್-ಪ್ರಗತಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಮೇಡ್ ಫಾರ್ ಈಚ್ ಅದರ್

ಮೇಡ್ ಫಾರ್ ಈಚ್ ಅದರ್

ರಿಶಬ್ ಶೆಟ್ಟಿ-ಪ್ರಗತಿ ಶೆಟ್ಟಿ ಜೋಡಿ ನೋಡಿದ್ರೆ, ಮೇಡ್ ಫಾರ್ ಈಚ್ ಅದರ್ ಅನ್ಸಲ್ವಾ.?

ನವ ವಧು-ವರರಿಗೆ ಶುಭ ಕೋರಿದ ಸುದೀಪ್

ನವ ವಧು-ವರರಿಗೆ ಶುಭ ಕೋರಿದ ಸುದೀಪ್

ಉಡುಪಿಯ ಸಹನಾ ಕನ್ವೆನ್ಷನ್ ಸೆಂಟರ್ ಗೆ ಆಗಮಿಸಿ, ನವ ವಧು-ವರರಾದ ರಿಶಬ್ ಹಾಗೂ ಪ್ರಗತಿಗೆ ಕಿಚ್ಚ ಸುದೀಪ್ ಶುಭ ಹಾರೈಸಿದರು.

ಶೆಟ್ರ ಮದುವೆಯಲ್ಲಿ ರಕ್ಷಿತ್

ಶೆಟ್ರ ಮದುವೆಯಲ್ಲಿ ರಕ್ಷಿತ್

ರಿಶಬ್ ಶೆಟ್ಟಿ ಮದುವೆಯಲ್ಲಿ ರಕ್ಷಿತ್ ಶೆಟ್ಟಿ ಕೂಡ ಮಿಂಚುತ್ತಿದ್ದರು.

ಶೀತಲ್ ಶೆಟ್ಟಿ ಕೂಡ ಬಂದಿದ್ದರು

ಶೀತಲ್ ಶೆಟ್ಟಿ ಕೂಡ ಬಂದಿದ್ದರು

ರಿಶಬ್ ಹಾಗೂ ರಕ್ಷಿತ್ ಶೆಟ್ಟಿಗೆ ಅತ್ಯಾಪ್ತರಾಗಿರುವ ಶೀತಲ್ ಶೆಟ್ಟಿ ಕೂಡ ನವವಧು-ವರರಿಗೆ ಶುಭ ಕೋರಿದರು.

ಸಿಂಪಲ್ ಸುನಿ

ಸಿಂಪಲ್ ಸುನಿ

ಹೊಸ ಬಾಳಿಗೆ ಕಾಲಿಟ್ಟಿರುವ ರಿಶಬ್ ಶೆಟ್ಟಿಗೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಖ್ಯಾತಿಯ ಸುನಿ ಕೂಡ ವಿಶ್ ಮಾಡಿದರು.

ಕುಟುಂಬ-ಆಪ್ತರಷ್ಟೇ ಭಾಗಿ

ಕುಟುಂಬ-ಆಪ್ತರಷ್ಟೇ ಭಾಗಿ

ಇಂದು ನಡೆದ ರಿಶಬ್-ಪ್ರಗತಿ ಶೆಟ್ಟಿ ಮದುವೆ ಕುಟುಂಬ ಹಾಗೂ ಆಪ್ತರಿಗೆ ಮಾತ್ರ ಸೀಮಿತವಾಗಿತ್ತು.

ನೀವೂ ವಿಶ್ ಮಾಡಿ...

ನೀವೂ ವಿಶ್ ಮಾಡಿ...

ಈಗಷ್ಟೇ ಹೊಸ ಬದುಕಿಗೆ ಕಾಲಿಟ್ಟಿರುವ ರಿಶಬ್ ಹಾಗೂ ಪ್ರಗತಿ ಶೆಟ್ಟಿಗೆ ನೀವೂ ವಿಶ್ ಮಾಡಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಿಮ್ಮ ಶುಭಾಶಯಗಳನ್ನು ತಿಳಿಸಿ...

English summary
Kannada Director Rishab Shetty has tied knot with Pragathi Shetty today (Feb 9th) in Sahana Convention Centre, Udupi. Check out the wedding album of this cute couple.
Please Wait while comments are loading...

Kannada Photos

Go to : More Photos