»   » ಚಿತ್ರಗಳು: ನವ ಬಾಳಿಗೆ ಕಾಲಿಟ್ಟ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ನಿರ್ದೇಶಕ ಸುನಿ

ಚಿತ್ರಗಳು: ನವ ಬಾಳಿಗೆ ಕಾಲಿಟ್ಟ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ನಿರ್ದೇಶಕ ಸುನಿ

Posted by:
Subscribe to Filmibeat Kannada
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಖ್ಯಾತಿಯ ನಿರ್ದೇಶಕ ಸಿಂಪಲ್ ಸುನಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಎಲ್.ಎಲ್.ಬಿ ಪದವಿ ಪಡೆದಿರುವ ಸೌಂದರ್ಯ ಗೌಡ-ಸುನಿ ದಾಂಪತ್ಯ ಜೀವನಕ್ಕೆ ಅಡಿ ಇಟ್ಟಿದ್ದಾರೆ.[ಪ್ರೀತಿಸಿದ ಹುಡುಗಿ ಜೊತೆ ಹೊಸ ಬಾಳಿಗೆ ಕಾಲಿಟ್ಟ ಸಿಂಪಲ್ ಸುನಿ]

ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಸಿಂಪಲ್ ಸುನಿ ಮತ್ತು ಸೌಂದರ್ಯ ಗೌಡ ಚಿಕ್ಕಮಗಳೂರಿನಲ್ಲಿ ಕುಟುಂಬದ ಸಮ್ಮುಖದಲ್ಲಿ ನೆನ್ನೆ(ಫೆ.17) ಶುಭ ಮಹೂರ್ತದಲ್ಲಿ ಹಸೆಮಣೆ ಏರಿದರು. ಅಂತೂ ಸಿಂಪಲ್ ಸುನಿ ಈಗ ಬ್ಯಾಚುಲರ್ ಲೈಫ್ ಗೆ ಬಾಯ್ ಹೇಳಿದ್ದಾರೆ. ಅವರ ಮದುವೆ ಫೋಟೋ ಆಲ್ಬಂ ಇಲ್ಲಿದೆ ನೋಡಿ.

ಸಿಂಪಲ್ಲಾಗಿ ನವ ಬಾಳಿಗೆ ಕಾಲಿಟ್ಟ ಸುನಿ

ಸಿಂಪಲ್ಲಾಗಿ ನವ ಬಾಳಿಗೆ ಕಾಲಿಟ್ಟ ಸುನಿ

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಗಾಂದೀನಗರದಲ್ಲಿ ಖ್ಯಾತಿ ಗಳಿಸಿದ ಸುನಿ ಲವ್ ಕಮ್ ಆರೇಂಜ್ಡ್ ಮ್ಯಾರೇಜ್ ಮೂಲಕ ನವ ಬಾಳಿಗೆ ಕಾಲಿಟ್ಟಿದ್ದಾರೆ.[ಇದೇ ಶುಕ್ರವಾರ ಪ್ರೀತಿಸಿದ ಹುಡುಗಿ ಜೊತೆ 'ಸಿಂಪಲ್' ಸುನಿ ವಿವಾಹ]

ಮೇಡ್ ಫಾರ್ ಈಚ್ ಅದರ್

ಮೇಡ್ ಫಾರ್ ಈಚ್ ಅದರ್

ಲವ್ ಸ್ಟೋರಿ ಮೂಲಕ ನಿರ್ದೇಶನದಲ್ಲಿ ಕ್ಲಿಕ್ ಆದ ಸಿಂಪಲ್ ಸುನಿ ಮದುವೆ ಆಗಿರೋದು ಪ್ರೀತಿಸಿದ ಹುಡುಗಿಯನ್ನೇ. ಅವರ ಜೋಡಿ ಮೇಡ್ ಫಾರ್ ಈಚ್ ಅದರ್ ಅನ್ಸಲ್ವಾ..?[ಚಿತ್ರಗಳು: ಸಿಂಪಲ್ ಸುನಿ ಮದುವೆ ]

ಪಕ್ಕಾ ಲವ್ ಮ್ಯಾರೇಜ್

ಪಕ್ಕಾ ಲವ್ ಮ್ಯಾರೇಜ್

ಡೈರೆಕ್ಟರ್ ಸಿಂಪಲ್ ಸುನಿ ಮತ್ತು ಸೌಂದರ್ಯ ಅವರದ್ದು ಪಕ್ಕಾ ಲವ್ ಕಮ್ ಆರೇಂಜ್ಡ್ ಮ್ಯಾರೇಜ್. ಟ್ವಿಟರ್ ಮೂಲಕ ಪರಿಚಯವಾಗಿ ಪ್ರೇಮಿಗಳಾದ ಇವರು, ಕುಟುಂಬದವರ ಸಮ್ಮುಖದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.[ಚಿತ್ರಗಳು: ಸಿಂಪಲ್ ಸುನಿ ಮದುವೆ]

ವಧು-ವರರಿಗೆ ಶುಭ ಕೋರಿದ ಶೆಟ್ಟಿ

ವಧು-ವರರಿಗೆ ಶುಭ ಕೋರಿದ ಶೆಟ್ಟಿ

ಚಿಕ್ಕಮಂಗಳೂರಿನಲ್ಲಿ ನಡೆದ ಮದುವೆಗೆ ನಟ ರಕ್ಷಿತ್ ಶೆಟ್ಟಿ ಆಗಮಿಸಿ, ಸುನಿ- ಸೌಂದರ್ಯ ಗೌಡ ಅವರ ದಾಂಪತ್ಯ ಜೀವನಕ್ಕೆ ಹಾರೈಸಿದ್ದಾರೆ.

ಸುನಿ ಸಿನಿ ಜರ್ನಿಗೆ ಸೌಂದರ್ಯ ಸಾತ್

ಸುನಿ ಸಿನಿ ಜರ್ನಿಗೆ ಸೌಂದರ್ಯ ಸಾತ್

ಎಲ್.ಎಲ್.ಬಿ ಪದವಿ ಪಡೆದಿರುವ ಸೌಂದರ್ಯ ಗೌಡ ಬರಹಗಾರ್ತಿ ಸಹ ಹೌದು. ಸಿಂಪಲ್ ಸುನಿಗೆ ಸಿನಿಮಾ ನಿರ್ದೇಶನ ಜರ್ನಿಗೆ ಇನ್ನುಮುಂದೆ ಸೌಂದರ್ಯ ಸಹ ಸಾತ್ ಕೊಡುತ್ತಾರಂತೆ.

ಮದುವೆ ಸಂಭ್ರಮದಲ್ಲಿ ಸುನಿ

ಮದುವೆ ಸಂಭ್ರಮದಲ್ಲಿ ಸುನಿ

ಮದುವೆ ಸಂಭ್ರಮದಲ್ಲಿ ಸಿಂಪಲ್ ಸುನಿ ಸ್ನೇಹಿತರ ಮಧ್ಯೆ ಮಿಂಚುತ್ತಿರುವುದು.

ಸೆಲ್ಫಿ ವಿತ್ ಸ್ನೇಹಿತರು

ಸೆಲ್ಫಿ ವಿತ್ ಸ್ನೇಹಿತರು

ಧಾರಾ ಮಹೂರ್ತದ ನಂತರ ಆರತಕ್ಷತೆಯಲ್ಲಿ ವಧು-ವರರೊಂದಿಗೆ ಸ್ನೇಹಿತರು ಸೆಲ್ಫಿ ಕ್ಲಿಕ್ಕಿಸಿದರು.

ಸುನಿ ವಿವಾಹದಲ್ಲಿ ಪ್ರವೀಣ್

ಸುನಿ ವಿವಾಹದಲ್ಲಿ ಪ್ರವೀಣ್

ಸಿಂಪಲ್ ಸುನಿ ಮದುವೆಗೆ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಚಿತ್ರದ ನಾಯಕ ಪ್ರವೀಣ್ ಸಹ ಆಗಮಿಸಿದ್ದರು.

ಮದುವೆಯಲ್ಲಿ ಮಾತುಕತೆ

ಮದುವೆಯಲ್ಲಿ ಮಾತುಕತೆ

ಸುನಿ-ಸೌಂದರ್ಯ ಗೌಡ ಆರತಕ್ಷತೆ ವೇಳೆ ಸ್ನೇಹಿತರೊಂದಿಗೆ ಮಾತನಾಡುತ್ತ ಸೆಲ್ಫಿ ಗೆ ಸ್ಮೈಲ್ ಕೊಟ್ಟರು.

ಫೆಬ್ರವರಿ 19 ರಂದು ಆರತಕ್ಷತೆ

ಫೆಬ್ರವರಿ 19 ರಂದು ಆರತಕ್ಷತೆ

ಚಿಕ್ಕಮಗಳೂರಿನಲ್ಲಿ ಧಾರಾ ಮಹೋತ್ಸವವನ್ನು ಮುಗಿಸಿರುವ ಸುನಿ-ಸೌಂದರ್ಯ ಗೌಡ, ನಾಳೆ(ಫೆಬ್ರವರಿ 19) ರಂದು ಬೆಂಗಳೂರಿನ ಅರಮನೆ ಮೈದಾನದ 'ಕಿಂಗ್ಸ್ ಕೋರ್ಟ್ ನಲ್ಲಿ ಸಂಜೆ 6.30 ರಿಂದ ಆರತಕ್ಷತೆ ಹಮ್ಮಿಕೊಂಡಿದ್ದಾರೆ.

English summary
Kannada Director 'Simple' Suni has tied knot with Soundarya Gowda yesterday (Feb 17th) in Chikkamagaluru. Check out the wedding album of this cute couple.
Please Wait while comments are loading...

Kannada Photos

Go to : More Photos