»   » ಫೋಟೋ ನೋಡಿ: ಸ್ಟೈಲಿಶ್ ಆಗಿದೆ ಗಣೇಶ್ 'ಮುಗುಳ್ನಗೆ'

ಫೋಟೋ ನೋಡಿ: ಸ್ಟೈಲಿಶ್ ಆಗಿದೆ ಗಣೇಶ್ 'ಮುಗುಳ್ನಗೆ'

Posted by:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಟ, ನಿರ್ದೇಶಕ ರಮೇಶ್ ಅರವಿಂದ್ ಕಾಂಬಿನೇಷನ್ ನಲ್ಲಿ ಮೂಡಿಬಂದ 'ಸುಂದರಾಂಗ ಜಾಣ' ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಹೀಗಿರುವಾಗಲೇ, 'ಮುಗುಳ್ನಗೆ' ಚಿತ್ರದ ಚಿತ್ರೀಕರಣಕ್ಕೆ ಗಣೇಶ್ ಚಾಲನೆ ಕೊಟ್ಟಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ಮೂರನೇ ಚಿತ್ರ 'ಮುಗುಳ್ನಗೆ'. ಈ ಸಿನಿಮಾದಲ್ಲಿ ಗಣಿ 'ಮುಗುಳ್ನಗೆ' ನೋಡುವ ಕಾತರ ನಿಮಗೆ ಇದ್ದರೆ, ಈ ಫೋಟೋಗಳನ್ನ ತಪ್ಪದೇ ನೋಡಿ....

ಸ್ಟೈಲಿಶ್ ಗಣೇಶ್

ಸ್ಟೈಲಿಶ್ ಗಣೇಶ್

'ಮುಗುಳ್ನಗೆ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಸ್ಟೈಲಿಶ್ ಆಗಿ ಕಾಣ್ತಾರೆ. ಅದಕ್ಕೆ ಸಾಕ್ಷಿ ಈ ಫೋಟೋ. [ಪುನೀತ್ ಗೆ 'ಜಾಮೂನು' ತಿನ್ನಿಸಿದ್ದ ಭಟ್ಟರು, ಗಣೇಶ್ ಗೂ 'ಜಾಮೂನು' ಕೊಟ್ಟರು!]

ಗಣೇಶ್ 'ಮುಗುಳ್ನಗೆ'

ಗಣೇಶ್ 'ಮುಗುಳ್ನಗೆ'

'ಮುಗುಳ್ನಗೆ' ಚಿತ್ರದಲ್ಲಿ ಗಣೇಶ್ ಹೇರ್ ಸ್ಟೈಲ್ ಕೂಡ ಬದಲಾಗಿದೆ. ಹೊಸ ಬಗೆಯ ಹೇರ್ ಸ್ಟೈಲ್ ನಲ್ಲಿ ಗಣೇಶ್ ಮಿಂಚುತ್ತಿದ್ದಾರೆ. [ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ನಾಯಕಿಯರು ಬೇಕಾಗಿದ್ದಾರೆ?]

'ಮುಗುಳ್ನಗೆ' ಚಿತ್ರದಲ್ಲಿ ಎಷ್ಟು ಜನ ನಾಯಕಿಯರು.?

'ಮುಗುಳ್ನಗೆ' ಚಿತ್ರದಲ್ಲಿ ಎಷ್ಟು ಜನ ನಾಯಕಿಯರು.?

'ಮುಗುಳ್ನಗೆ' ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಅಮೂಲ್ಯ ಆಯ್ಕೆ ಆಗಿದ್ದಾರೆ. ಉಳಿದಂತೆ 'ಕ್ರೇಜಿಬಾಯ್' ನಾಯಕಿ ಆಶಿಕ, ನಿಖಿತಾ ನಾರಾಯಣ್ ಕೂಡ ಪ್ರಮುಖ ಪಾತ್ರದಲ್ಲಿ ಇದ್ದಾರೆ.

ಇಡೀ ಸಿನಿಮಾದಲ್ಲಿ ನಗು ಮೂಡ್.!

ಇಡೀ ಸಿನಿಮಾದಲ್ಲಿ ನಗು ಮೂಡ್.!

ಇಡೀ ಸಿನಿಮಾ ನಗು ಮೂಡ್ ನಲ್ಲಿ ಸಾಗುವುದರಿಂದ ಚಿತ್ರಕ್ಕೆ 'ಮುಗುಳ್ನಗೆ' ಅಂತ ಹೆಸರಿಡಲಾಗಿದೆ.

ಚಿತ್ರೀಕರಣ ಎಲ್ಲೆಲ್ಲಿ.?

ಚಿತ್ರೀಕರಣ ಎಲ್ಲೆಲ್ಲಿ.?

ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಪಾಂಡಿಚೇರಿ ಮುಂತಾದ ಕಡೆಗಳಲ್ಲಿ 'ಮುಗುಳ್ನಗೆ' ಚಿತ್ರೀಕರಣ ನಡೆಯಲಿದೆ.

English summary
Golden Star Ganesh look in 'Mugulnage' is out. Check out the pictures.
Please Wait while comments are loading...

Kannada Photos

Go to : More Photos