»   » ರವಿತೇಜಾ ಜೊತೆ 'ವಜ್ರಕಾಯ' ಹರ್ಷ ಆಟ ನೋಡಿ...

ರವಿತೇಜಾ ಜೊತೆ 'ವಜ್ರಕಾಯ' ಹರ್ಷ ಆಟ ನೋಡಿ...

Posted by:
Subscribe to Filmibeat Kannada

ಕನ್ನಡದ ಜನಪ್ರಿಯ ನೃತ್ಯ ನಿರ್ದೇಶಕ ಹರ್ಷ ಟಾಲಿವುಡ್ ಗೆ ಹಾರಿದ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ.

ಮೊಟ್ಟ ಮೊದಲ ಬಾರಿಗೆ ತೆಲುಗು ಸಿನಿ ಅಂಗಳಕ್ಕೆ ಹಾರಿರುವ ಹರ್ಷ, ರವಿತೇಜಾಗಾಗಿ ಸೂಪರ್ ಸಾಂಗ್ ಗಳನ್ನ ಕೊರಿಯೋಗ್ರಾಫ್ ಮಾಡುತ್ತಿದ್ದಾರೆ.

ರವಿತೇಜಾ ಅಭಿನಯದ 'ಬೆಂಗಾಲ್ ಟೈಗರ್' ಚಿತ್ರದ ಮೂರು ಹಾಡುಗಳಿಗೆ ಹರ್ಷ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ.

ಹೈದರಾಬಾದ್ ನಲ್ಲಿ ಹಾಡುಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. 'ಬೆಂಗಾಲ್ ಟೈಗರ್' ಚಿತ್ರದ ಅಡ್ಡದಿಂದ ಬಂದಿರುವ ಮೇಕಿಂಗ್ ಸ್ಟಿಲ್ಸ್ ಇಲ್ಲಿದೆ. ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಮಾತ್ರ....

ಮೊದಲ ಬಾರಿಗೆ ತೆಲುಗು ಹಾಡಿಗೆ ಕೊರಿಯೋಗ್ರಫಿ

ಮೊದಲ ಬಾರಿಗೆ ತೆಲುಗು ಹಾಡಿಗೆ ಕೊರಿಯೋಗ್ರಫಿ

ಕನ್ನಡದ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದ ಹರ್ಷ ಮೊದಲ ಬಾರಿಗೆ ಟಾಲಿವುಡ್ ಗೆ ಕಾಲಿಟ್ಟಿರುವುದು 'ಬೆಂಗಾಲ್ ಟೈಗರ್' ಚಿತ್ರದ ಮೂಲಕ. [ಟಾಲಿವುಡ್ಡಿಗೆ ಹಾರಿದ 'ಭಜರಂಗಿ' ನಿರ್ದೇಶಕ ಹರ್ಷ]

ರವಿತೇಜಾ ರಿಂದ ಬುಲಾವ್

ರವಿತೇಜಾ ರಿಂದ ಬುಲಾವ್

ಹರ್ಷ ಅವರಿಗೆ ಟಾಲಿವುಡ್ ನಲ್ಲಿ ರೆಡ್ ಕಾರ್ಪೆಟ್ ಸ್ವಾಗತ ನೀಡಿದವರು ಟಾಲಿವುಡ್ ಮಾಸ್ ಮಹಾರಾಜ ರವಿತೇಜಾ. ಅವರ ಕೋರಿಕೆಯ ಮೇರೆಗೆ ಹರ್ಷ ಟಾಲಿವುಡ್ ಗೆ ಜಿಗಿದಿದ್ದಾರಂತೆ.

'ವಜ್ರಕಾಯ' ಚಿತ್ರದಲ್ಲಿ ಒಂದಾಗಿದ್ದ ರವಿತೇಜಾ-ಹರ್ಷ

'ವಜ್ರಕಾಯ' ಚಿತ್ರದಲ್ಲಿ ಒಂದಾಗಿದ್ದ ರವಿತೇಜಾ-ಹರ್ಷ

ಹರ್ಷ ನೃತ್ಯ ಸಂಯೋಜನೆಯಲ್ಲಿ 'ವಜ್ರಕಾಯ' ಚಿತ್ರದ ಟೈಟಲ್ ಸಾಂಗ್ ಗೆ ರವಿತೇಜಾ ಸೂಪರ್ ಸ್ಟೆಪ್ ಹಾಕಿದರು. ಆಗ ಹರ್ಷ ಅವರ ಪತ್ರಿಭೆ ಗುರುತಿಸಿದ ರವಿತೇಜಾ ತಮ್ಮ ಚಿತ್ರಕ್ಕೂ ನೃತ್ಯ ಸಂಯೋಜನೆ ಮಾಡುವಂತೆ ಕೇಳಿದರಂತೆ. ['ವಜ್ರಕಾಯ' ಶಿವಣ್ಣ ಜೊತೆ ರವಿತೇಜಾ ಆಟ ನೋಡಿ...]

ರೆಡಿಯಾಗ್ತಿದೆ ಮಾಸ್ ಸಾಂಗ್

ರೆಡಿಯಾಗ್ತಿದೆ ಮಾಸ್ ಸಾಂಗ್

'ಬೆಂಗಾಲ್ ಟೈಗರ್' ಅಡ್ಡದಿಂದ ಬಂದಿರುವ ಈ ಮೇಕಿಂಗ್ ಸ್ಟಿಲ್ಸ್ ನೋಡಿದ್ರೆ, ಮಾಸ್ ಸಾಂಗ್ ಗೆ ಹರ್ಷ ಕೋರಿಯೋಗ್ರಫಿ ಮಾಡುತ್ತಿರುವಂತಿದೆ. ಸಖತ್ ಕಲರ್ ಫುಲ್ ಆಗಿ ಹಾಡು ರೆಡಿಯಾಗ್ತಿದೆ.

ಮಾಸ್ ಸಿನಿಮಾ 'ಬೆಂಗಾಲ್ ಟೈಗರ್'

ಮಾಸ್ ಸಿನಿಮಾ 'ಬೆಂಗಾಲ್ ಟೈಗರ್'

ರವಿತೇಜಾ ಮತ್ತು ತಮನ್ನಾ ಕಾಂಬಿನೇಷನ್ ನಲ್ಲಿ ರೆಡಿಯಾಗುತ್ತಿರುವ ಚಿತ್ರ 'ಬೆಂಗಾಲ್ ಟೈಗರ್'. ಸಂಪತ್ ನಂದಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೆಪ್ಟೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

English summary
Kannada Choreographer A.Harsha has made his Tollywood Debut with Ravi Teja's 'Bengal Tiger'. A.Harsha is choreographing 3 songs for the film. Check out the making stills of 'Bengal Tiger'
Please Wait while comments are loading...

Kannada Photos

Go to : More Photos