»   » ಕರ್ನಾಟಕ ಬಂದ್: ಎಲ್ಲಾ ಚಿತ್ರಮಂದಿರಗಳಿಗೂ ಬಿದ್ದ ಬೀಗ.!

ಕರ್ನಾಟಕ ಬಂದ್: ಎಲ್ಲಾ ಚಿತ್ರಮಂದಿರಗಳಿಗೂ ಬಿದ್ದ ಬೀಗ.!

Posted by:
Subscribe to Filmibeat Kannada

ಕೆ.ಜಿ ರೋಡ್ ನ ಪ್ರಮುಖ ಚಿತ್ರಮಂದಿರಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಕಲ್ಪನಾ-2', ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ 'ಸಂತೆಯಲ್ಲಿ ನಿಂತ ಕಬೀರ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಡೀಲ್ ರಾಜಾ' ಸೇರಿದಂತೆ ಅನೇಕ ಸಿನಿಮಾಗಳು ಇಂದು ಖಾಲಿ ಹೊಡೆಯುತ್ತಿವೆ.

ಕಾರಣ, ಇವತ್ತಿನ ಕರ್ನಾಟಕ ಬಂದ್ ಗೆ ಸ್ಯಾಂಡಲ್ ವುಡ್ ನೀಡಿರುವ ಸಂಪೂರ್ಣ ಬೆಂಬಲ.! [ಕರ್ನಾಟಕ ಬಂದ್: ಶಿವಣ್ಣ ಸಾರಥ್ಯದಲ್ಲಿ ಬೃಹತ್ ಪ್ರತಿಭಟನೆ]

ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದೆ ಓದಿ.....

ಎಲ್ಲಾ ಚಿತ್ರಮಂದಿರಗಳಿಗೆ ಬೀಗ.!

ಎಲ್ಲಾ ಚಿತ್ರಮಂದಿರಗಳಿಗೆ ಬೀಗ.!

ಕರ್ನಾಟಕ ಬಂದ್ ಪರಿಣಾಮ ಬೆಂಗಳೂರಿನ ಎಲ್ಲಾ ಚಿತ್ರಮಂದಿರಗಳಿಗೆ ಬೀಗ ಜಡಿಯಲಾಗಿದೆ. ಚಿತ್ರ ಪ್ರದರ್ಶನ ಸ್ಥಗಿತಗೊಂಡಿದೆ. ['ನೋಡಿ ಮುಸಿಮುಸಿನಗಲು ನಾವೇನು ಜೋಕರ್ ಗಳಲ್ಲ']

ಬಿಕೋ ಎನ್ನುತ್ತಿರುವ ಥಿಯೇಟರ್ ಗಳು

ಬಿಕೋ ಎನ್ನುತ್ತಿರುವ ಥಿಯೇಟರ್ ಗಳು

ಕೆ.ಜಿ.ರೋಡ್ ನ ಪ್ರಮುಖ ಚಿತ್ರಮಂದಿರಗಳಾದ ಸಂತೋಷ್, ನರ್ತಕಿ ಬಿಕೋ ಎನ್ನುತ್ತಿದೆ.

ಪ್ರತಿಭಟನೆಯ ಕೇಂದ್ರವಾಗಿದೆ ಮೆಜೆಸ್ಟಿಕ್

ಪ್ರತಿಭಟನೆಯ ಕೇಂದ್ರವಾಗಿದೆ ಮೆಜೆಸ್ಟಿಕ್

ಸದಾ ವಾಹನ ಸಂಚಾರ ಹಾಗೂ ಚಲನಚಿತ್ರಗಳ ಅಬ್ಬರದಿಂದ ಗಿಜಿಗುಡುತ್ತಿದ್ದ ಬೆಂಗಳೂರಿನ ಮೆಜೆಸ್ಟಿಕ್ ಇಂದು ಪ್ರತಿಭಟನೆಯ ಕೇಂದ್ರವಾಗಿದೆ.

ಸ್ಯಾಂಡಲ್ ವುಡ್ ನಟರ ಮೆರವಣಿಗೆ ಆರಂಭ

ಸ್ಯಾಂಡಲ್ ವುಡ್ ನಟರ ಮೆರವಣಿಗೆ ಆರಂಭ

ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಮಾರ್ಗವಾಗಿ ಸೆಂಚುರಿ ಕಿಂಗ್ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರ ಬೃಹತ್ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿದೆ.

English summary
Kannada Film Industry is supporting Karnataka Bandh today (July 30th) to protest against the interim order passed by Mahadayi Tribunal. Hence, all theaters have closed and Film shows are cancelled. Check out the latest pics.
Please Wait while comments are loading...

Kannada Photos

Go to : More Photos