»   » ಚಿತ್ರಗಳು ; ಕಿಚ್ಚ ಸುದೀಪ್ - ಪುನೀತ್ ಒಂದಾಗೇಬಿಟ್ಟರು ನೋಡಿ.!

ಚಿತ್ರಗಳು ; ಕಿಚ್ಚ ಸುದೀಪ್ - ಪುನೀತ್ ಒಂದಾಗೇಬಿಟ್ಟರು ನೋಡಿ.!

Posted by:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರದ ಮೊದಲ ಶೋನ ಇಂಟರ್ವಲ್ ನಲ್ಲಿ ಕಿಚ್ಚ ಸುದೀಪ್ ನಟಿಸಿದ 'ರನ್ನ' ಸಿನಿಮಾದ ಟೀಸರ್ ಪ್ರದರ್ಶನ ಮಾಡಿದ್ದಕ್ಕೆ ಅಭಿಮಾನಿಗಳು ಮಾಡಿದ ರಾದ್ಧಾಂತದ ಫ್ಲ್ಯಾಶ್ ಬ್ಯಾಕ್ ನಿಮಗೆ ಗೊತ್ತಿರಲೇಬೇಕು.

ಒಂದ್ವೇಳೆ ಆ ಘಟನೆ ನಿಮಗೆ ಮರೆತುಹೋಗಿದ್ದರೆ, ಈ ಲಿಂಕ್ ಕ್ಲಿಕ್ ಮಾಡಿ..['ರಣವಿಕ್ರಮ' ನಡುವೆ 'ರನ್ನ'ನ ಕಂಡು ರೊಚ್ಚಿಗೆದ್ದ ಅಭಿಮಾನಿಗಳು]


ಕಿಚ್ಚ ಸುದೀಪ್ ಗೂ ರಾಜ್ ಕುಟುಂಬಕ್ಕೂ ಆಗ್ಬರಲ್ಲ ಅಂತ ಯಾರು ಎಷ್ಟೇ ಬಾಯ್ ಬಡ್ಕೊಂಡ್ರೂ, ಅದು ಕೇವಲ 'ಗಾಸಿಪ್' ಮಾತ್ರ. ಇಬ್ಬರೂ 'ಸ್ನೇಹಜೀವಿಗಳು' ಅನ್ನೋದಕ್ಕೆ ಇಲ್ಲಿದೆ ನೋಡಿ ಪುರಾವೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....


'ಚಕ್ರವ್ಯೂಹ' ಚಿತ್ರದಲ್ಲಿ ಕಿಚ್ಚ ಸುದೀಪ್!

'ಚಕ್ರವ್ಯೂಹ' ಚಿತ್ರದಲ್ಲಿ ಕಿಚ್ಚ ಸುದೀಪ್!

'ಚಕ್ರವ್ಯೂಹ' ಚಿತ್ರಕ್ಕಾಗಿ ಕಿಚ್ಚ ಸುದೀಪ್ ಧ್ವನಿ ನೀಡುತ್ತಿದ್ದಾರೆ ಎಂಬ ಸುದ್ದಿ ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನಾವೇ ಪ್ರಕಟಿಸಿದ್ವಿ. ಅದನ್ನ ಓದಿ ನೀವು ಜಸ್ಟ್ ಗಾಸಿಪ್ ಅಂತ ಮೂಗು ಮುರಿದಿದ್ದರೆ, ಇಲ್ಲಿದೆ ನೋಡಿ ಅದಕ್ಕೆ ಸಾಕ್ಷಿ....ಮುಂದಿನ ಸ್ಲೈಡ್ ಕ್ಲಿಕ್ಕಿಸಿ....


ವಾಯ್ಸ್ ನೀಡಿದ ಕಿಚ್ಚ ಸುದೀಪ್

ವಾಯ್ಸ್ ನೀಡಿದ ಕಿಚ್ಚ ಸುದೀಪ್

'ಚಕ್ರವ್ಯೂಹ' ಚಿತ್ರದ ಸ್ಟೋರಿ ನರೇಷನ್ ಗೆ ವಾಯ್ಸ್ ಓವರ್ ನೀಡಿದ್ದಾರೆ ಕಿಚ್ಚ ಸುದೀಪ್.[ಪುನೀತ್ ಕಟ್ಟಾ ಅಭಿಮಾನಿಗಳಿಗೆ 'ಕಿಚ್ಚು' ಹಚ್ಚಿಸುವ ಸುದ್ದಿ ಇದು!]


ಖುದ್ದು ಬರ ಮಾಡಿಕೊಂಡರು ಪುನೀತ್ ರಾಜ್ ಕುಮಾರ್

ಖುದ್ದು ಬರ ಮಾಡಿಕೊಂಡರು ಪುನೀತ್ ರಾಜ್ ಕುಮಾರ್

ಕಿಚ್ಚ ಸುದೀಪ್ ವಾಯ್ಸ್ ಓವರ್ ನೀಡಲು ಬಂದಾಗ ಅವರನ್ನ ಸ್ಟುಡಿಯೋಗೆ ಬರಮಾಡಿಕೊಂಡಿದ್ದು ಖುದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.


ಸ್ನೇಹಪೂರ್ವಕವಾಗಿ ಕಿಚ್ಚ ಸುದೀಪ್

ಸ್ನೇಹಪೂರ್ವಕವಾಗಿ ಕಿಚ್ಚ ಸುದೀಪ್

ಅಪ್ಪು ಅಭಿನಯದ 'ಚಕ್ರವ್ಯೂಹ' ಚಿತ್ರದ ಒಂದು ಭಾಗದಲ್ಲಿ ಸ್ಟೋರಿ ನರೇಷನ್ ಇರುವುದರಿಂದ ಅದಕ್ಕೆ ವಾಯ್ಸ್ ಓವರ್ ನೀಡುವಂತೆ ಚಿತ್ರತಂಡ ಸುದೀಪ್ ರವರನ್ನ ಸಂಪರ್ಕ ಮಾಡಿತ್ತು. ಪುನೀತ್ ಜೊತೆಗಿನ ಸ್ನೇಹದಿಂದಾಗಿ ಕೂಡಲೆ ಅದಕ್ಕೆ ಸುದೀಪ್ ಸಮ್ಮತಿ ಸೂಚಿಸಿದರು.


ಇದು ಮೊದಲೇನಲ್ಲ!

ಇದು ಮೊದಲೇನಲ್ಲ!

ದರ್ಶನ್ ಅಭಿನಯದ 'ಸಂಗೊಳ್ಳಿ ರಾಯಣ್ಣ' ಸೇರಿದಂತೆ ಅನೇಕ ಚಿತ್ರಗಳಿಗೆ ಈಗಾಗಲೇ ಸುದೀಪ್ ವಾಯ್ಸ್ ಓವರ್ ನೀಡಿದ್ದಾರೆ.


ಅಪ್ಪು ಚಿತ್ರಕ್ಕೆ ಇದೇ ಮೊದಲು!

ಅಪ್ಪು ಚಿತ್ರಕ್ಕೆ ಇದೇ ಮೊದಲು!

ಆದ್ರೆ, ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಕ್ಕೆ ಸುದೀಪ್ ವಾಯ್ಸ್ ಓವರ್ ನೀಡುತ್ತಿರುವುದು ಇದೇ ಮೊದಲು.


ಜೂ.ಎನ್.ಟಿ.ಆರ್ ಹಾಡು ಕೇಳಿದ್ದೀರಾ?

ಪುನೀತ್ ರಾಜ್ ಕುಮಾರ್ ಅಭಿನಯದ 'ಚಕ್ರವ್ಯೂಹ' ಚಿತ್ರಕ್ಕೆ ಟಾಲಿವುಡ್ ಸ್ಟಾರ್ ಜೂ.ಎನ್.ಟಿ.ಆರ್ ಗಾನ ಸುಧೆ ಹರಿಸಿದ್ದಾರೆ. ಆ ಹಾಡು ಇಲ್ಲಿದೆ ನೋಡಿ....[ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR]


ಕಾಜಲ್ ಅಗರ್ವಾಲ್ ಕೂಡ ಹಾಡಿದ್ದಾರೆ!

ಕಾಜಲ್ ಅಗರ್ವಾಲ್ ಕೂಡ ಹಾಡಿದ್ದಾರೆ!

ಇದೇ ಚಿತ್ರದ ಹಾಡಿಗಾಗಿ ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಕೂಡ ದನಿ ನೀಡಿದ್ದಾರೆ.[ಅಪ್ಪು 'ಚಕ್ರವ್ಯೂಹಕ್ಕೆ' ಕಾಜಲ್ ಸಖತ್ತಾಗಿ ಹಾಡಿದ್ರು]


ಪವರ್ ಸ್ಟಾರ್ ಚಿತ್ರಕ್ಕೆ ಸುದೀಪ್ ಕಂಚಿನ ಕಂಠ

ಪವರ್ ಸ್ಟಾರ್ ಚಿತ್ರಕ್ಕೆ ಸುದೀಪ್ ಕಂಚಿನ ಕಂಠ

ಹಲವು ವಿಶೇಷತೆಗಳಿಂದ ಸದ್ದು ಸುದ್ದಿ ಮಾಡಿರುವ 'ಚಕ್ರವ್ಯೂಹ' ಚಿತ್ರಕ್ಕೆ ಸುದೀಪ್ ಧ್ವನಿ ನೀಡಿರುವುದು ಮತ್ತೊಂದು ಇಂಟ್ರೆಸ್ಟಿಂಗ್ ಅಂಶ.


'ಚಕ್ರವ್ಯೂಹ' ರಿಲೀಸ್ ಡೇಟ್ ಫಿಕ್ಸ್ ಆಯ್ತಾ?

'ಚಕ್ರವ್ಯೂಹ' ರಿಲೀಸ್ ಡೇಟ್ ಫಿಕ್ಸ್ ಆಯ್ತಾ?

ಮೂಲಗಳ ಪ್ರಕಾರ, ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದೇ 'ಚಕ್ರವ್ಯೂಹ' ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.


ವಿಡಿಯೋ ನೋಡಿ....

'ಚಕ್ರವೂಹ' ಚಿತ್ರಕ್ಕೆ ಸುದೀಪ್ ವಾಯ್ಸ್ ಓವರ್ ನೀಡಿರುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ವಿಡಿಯೋ ನೋಡಿ...


English summary
Kiccha Sudeep has given voice over for Kannada Actor Puneeth Rajkumar and Kannada Actress Rachita Ram starrer Kannada Movie 'Chakravyuha'. Check out the pics.
Please Wait while comments are loading...

Kannada Photos

Go to : More Photos