»   » ಚಿತ್ರಗಳು ; 'ರಂಗಿತರಂಗ' ನಿರೂಪ್ ಭಂಡಾರಿ ಮದುವೆ ಸಂಭ್ರಮ

ಚಿತ್ರಗಳು ; 'ರಂಗಿತರಂಗ' ನಿರೂಪ್ ಭಂಡಾರಿ ಮದುವೆ ಸಂಭ್ರಮ

Posted by:
Subscribe to Filmibeat Kannada

ಎಷ್ಟು ಹುಡುಗಿಯರಿಗೆ ಇದು ಹಾರ್ಟ್ ಬ್ರೇಕಿಂಗ್ ನ್ಯೂಸ್ ಆಗುತ್ತೋ ಗೊತ್ತಿಲ್ಲ.

ಕಳೆದ ವರ್ಷ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಎಬ್ಬಿಸಿ, ಶತದಿನೋತ್ಸವ ಆಚರಿಸಿ, ಸೂಪರ್ ಡ್ಯೂಪರ್ ಹಿಟ್ ಆಗಿದ್ದ 'ರಂಗಿತರಂಗ' ಚಿತ್ರದ ನಾಯಕ ನಿರೂಪ್ ಭಂಡಾರಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

ದೀರ್ಘಕಾಲದ ಗೆಳತಿ ಧನ್ಯಾ ಜೊತೆ ಸಪ್ತಪದಿ ತುಳಿದಿದ್ದಾರೆ ಚಾಕಲೇಟ್ ಹೀರೋ ನಿರೂಪ್ ಭಂಡಾರಿ. [ಗೆಳತಿ ಜೊತೆ 'ರಂಗಿತರಂಗ' ನಾಯಕ ನಿರೂಪ್ ನಿಶ್ಚಿತಾರ್ಥ]

ನಿನ್ನೆ ಮೈಸೂರಿನ Silent Shores ರೆಸಾರ್ಟ್ ನಲ್ಲಿ ನಿರೂಪ್ ಭಂಡಾರಿ - ಧನ್ಯಾ ಮದುವೆ ಅದ್ಧೂರಿಯಾಗಿ ನೆರವೇರಿದೆ. ಹೊಸ ಜೀವನಕ್ಕೆ ಕಾಲಿಟ್ಟ ನಿರೂಪ್ ಭಂಡಾರಿ - ಧನ್ಯಾ ಮದುವೆ ಸಂಭ್ರಮದ ಫೋಟೋ ಆಲ್ಬಂ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ....

ಹೊಸ ಜೀವನಕ್ಕೆ ಅಡಿಯಿಟ್ಟ ನಿರೂಪ್ ಭಂಡಾರಿ

ಹೊಸ ಜೀವನಕ್ಕೆ ಅಡಿಯಿಟ್ಟ ನಿರೂಪ್ ಭಂಡಾರಿ

ಸ್ಯಾಂಡಲ್ ವುಡ್ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಿದ ಒಂದೇ ವರ್ಷದಲ್ಲಿ ನಾಯಕ ನಟ ನಿರೂಪ್ ಭಂಡಾರಿ ಗೆಳತಿ ಧನ್ಯಾ ಜೊತೆ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ.

ಮೇಡ್ ಫಾರ್ ಈಚ್ ಅದರ್

ಮೇಡ್ ಫಾರ್ ಈಚ್ ಅದರ್

ನಿರೂಪ್ ಭಂಡಾರಿ - ಧನ್ಯಾ ರವರದ್ದು ಮೇಡ್ ಫಾರ್ ಈಚ್ ಅದರ್ ಜೋಡಿ ಅಲ್ವಾ?

ಲವ್ ಮ್ಯಾರೇಜ್!

ಲವ್ ಮ್ಯಾರೇಜ್!

ಹಲವು ವರ್ಷಗಳಿಂದ ನಿರೂಪ್ ಭಂಡಾರಿ ಹಾಗೂ ಧನ್ಯಾ ಸ್ನೇಹಿತರು. ಸ್ನೇಹ ಪ್ರೀತಿಗೆ ತಿರುಗಿ, ಇದೀಗ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಹಾಕಿಸಿಕೊಂಡಿದೆ ಈ ಜೋಡಿ.

ಮೈಸೂರಿನಲ್ಲಿ ವಿವಾಹ

ಮೈಸೂರಿನಲ್ಲಿ ವಿವಾಹ

ನಿರೂಪ್ ಭಂಡಾರಿ ವಿವಾಹ ನಿನ್ನೆಯಷ್ಟೇ ಮೈಸೂರಿನಲ್ಲಿ ನಡೆದಿದೆ.

ರೆಸಾರ್ಟ್ ನಲ್ಲಿ ಆರತಕ್ಷತೆ

ರೆಸಾರ್ಟ್ ನಲ್ಲಿ ಆರತಕ್ಷತೆ

ನಿನ್ನೆ ಸಂಜೆ ಮೈಸೂರಿನ Silent Shores ರೆಸಾರ್ಟ್ ನಲ್ಲಿ ಆರತಕ್ಷತೆ ಅದ್ಧೂರಿಯಾಗಿ ನೆರವೇರಿದೆ.

ಶುಭ ಹಾರೈಸಿದ್ರು ವಿನಯ್ ರಾಜ್ ಕುಮಾರ್

ಶುಭ ಹಾರೈಸಿದ್ರು ವಿನಯ್ ರಾಜ್ ಕುಮಾರ್

ನಿರೂಪ್ ಭಂಡಾರಿಗೆ ಶುಭ ಕೋರಲು ನಟ ವಿನಯ್ ರಾಜ್ ಕುಮಾರ್ ಹಾಗೂ 'ರನ್ ಆಂಟನಿ' ಚಿತ್ರತಂಡ ಆರತಕ್ಷತೆಗೆ ಹಾಜರಿತ್ತು.

ಅಣ್ಣ ಅನೂಪ್ ಭಂಡಾರಿ

ಅಣ್ಣ ಅನೂಪ್ ಭಂಡಾರಿ

ಸಹೋದರನ ಮದುವೆ ಸಂಭ್ರಮದಲ್ಲಿ ಅನೂಪ್ ಭಂಡಾರಿ ರವರನ್ನ ನೀವು ಚಿತ್ರದಲ್ಲಿ ಕಾಣಬಹುದು.

ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರ್ಸ್

ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರ್ಸ್

ನಿರೂಪ್ ಭಂಡಾರಿ ಹಾಗೂ ಧನ್ಯಾ ಸಾಫ್ಟ್ ವೇರ್ ಎಂಜಿನಿಯರ್ಸ್.

ನಟನೆಯಲ್ಲಿ ಆಸಕ್ತಿ

ನಟನೆಯಲ್ಲಿ ಆಸಕ್ತಿ

ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದರೂ ಭಂಡಾರಿ ಬ್ರದರ್ಸ್ ಗೆ ಸಿನಿಮಾ ಅಂದ್ರೆ ಆಸಕ್ತಿ. ಇದೇ ಕಾರಣಕ್ಕೆ ವೃತ್ತಿಯಿಂದ ಕೊಂಚ ಬ್ರೇಕ್ ತೆಗೆದುಕೊಂಡು ಅನೂಪ್ ಭಂಡಾರಿ ಹಾಗೂ ನಿರೂಪ್ ಭಂಡಾರಿ 'ರಂಗಿತರಂಗ' ಸಿನಿಮಾ ಮಾಡಿದ್ದು.

ಸೂಪರ್ ಡ್ಯೂಪರ್ ಹಿಟ್ ಆದ 'ರಂಗಿತರಂಗ'

ಸೂಪರ್ ಡ್ಯೂಪರ್ ಹಿಟ್ ಆದ 'ರಂಗಿತರಂಗ'

ಹೊಸಬರ ಚಿತ್ರವೇ ಆದರೂ 'ರಂಗಿತರಂಗ' ಸಿನಿಮಾ ಸೂಪರ್ ಹಿಟ್ ಆಯ್ತು. ಶತದಿನೋತ್ಸವ ಆಚರಿಸಿತು.

ಕಳೆದ ವರ್ಷ ನಿಶ್ಚಿತಾರ್ಥ

ಕಳೆದ ವರ್ಷ ನಿಶ್ಚಿತಾರ್ಥ

'ರಂಗಿತರಂಗ' ಸಿನಿಮಾ ಹಿಟ್ ಆದ ಬೆನ್ನಲ್ಲೆ, ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಾಯಕ ನಿರೂಪ್ ಭಂಡಾರಿ ಕಳೆದ ವರ್ಷ ಗೆಳತಿ ಧನ್ಯಾ ಜೊತೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಧನ್ಯಾ ಬಗ್ಗೆ....

ಧನ್ಯಾ ಬಗ್ಗೆ....

ನಿರೂಪ್ ಭಂಡಾರಿ ಕೈ ಹಿಡಿದಿರುವ ಧನ್ಯಾ ಅಮೇರಿಕಾದ ಕಂಪನಿಯೊಂದರ ಉದ್ಯೋಗಿ.

ಧನ್ಯಾ ಕೂಡ ಕಲಾವಿದೆ!

ಧನ್ಯಾ ಕೂಡ ಕಲಾವಿದೆ!

ನಿರೂಪ್ ಭಂಡಾರಿ ಪತ್ನಿ ಧನ್ಯಾ ಕೂಡ ಕಲಾವಿದೆ. ನ್ಯೂಯಾರ್ಕ್ ನ ಲೀ ಸ್ಟಾರ್ಸ್ ಬರ್ಗ್ ಥಿಯೇಟರ್ ಅಂಡ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆ ತರಬೇತಿ ಪಡೆದಿದ್ದಾರೆ ಧನ್ಯಾ.

ನಿರೂಪ್ ಮುಂದಿನ ಚಿತ್ರ

ನಿರೂಪ್ ಮುಂದಿನ ಚಿತ್ರ

ಸದ್ಯಕ್ಕೆ ನವ ಜೀವನಕ್ಕೆ ಕಾಲಿಟ್ಟಿರುವ ನಿರೂಪ್ ಭಂಡಾರಿ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಇಲ್ಲ

ಹ್ಯಾಪಿ ಮ್ಯಾರೀಡ್ ಲೈಫ್

ಹ್ಯಾಪಿ ಮ್ಯಾರೀಡ್ ಲೈಫ್

ಮದುವೆ ಸಂಭ್ರಮದಲ್ಲಿರುವ ನಿರೂಪ್ ಭಂಡಾರಿ ಮತ್ತು ಧನ್ಯಾಗೆ ನೀವೂ ವಿಶ್ ಮಾಡಿ....

English summary
'Rangitaranga' Hero Nirup Bhandari has tied knot with his long-time girl friend Dhanya, yesterday (March 27th) in Mysore. Check out the marriage pics here.
Please Wait while comments are loading...

Kannada Photos

Go to : More Photos