»   » ನೀವಂದುಕೊಂಡಂಗಿಲ್ಲ ಸುದೀಪ್-ಶಿವಣ್ಣ! ಅಚ್ಚರಿ ನೋಡಿ

ನೀವಂದುಕೊಂಡಂಗಿಲ್ಲ ಸುದೀಪ್-ಶಿವಣ್ಣ! ಅಚ್ಚರಿ ನೋಡಿ

Posted by:
Subscribe to Filmibeat Kannada

''ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ನಡುವೆ ಎಲ್ಲವೂ ಸರಿಯಿಲ್ಲ. ರಾಜ್ ಕಪ್ ನಲ್ಲಿ ಆದ ರಾದ್ಧಾಂತದ ಬಳಿಕ ಸುದೀಪ್ ಮತ್ತು ಶಿವಣ್ಣ ನಡುವೆ ದೊಡ್ಡ ಕಂದಕ ಸೃಷ್ಟಿಯಾಗ್ಬಿಟ್ಟಿದೆ. ಒಂದೇ ಜಾಗದಲ್ಲಿ ಇಬ್ಬರು ಮುಖಾಮುಖಿ ಆಗೋ ಚಾನ್ಸೇ ಇಲ್ಲ. ಒಬ್ಬರ ಮುಖವನ್ನ ಇನ್ನೊಬ್ಬರು ನೋಡೋದೇ ಇಲ್ಲ.''

ಹೀಗಂತ ಗಾಂಧಿನಗರದಲ್ಲಿ ದೊಡ್ಡ ಟಾಕ್ ಶುರುವಾಗಿತ್ತು. ಸಾಲದಕ್ಕೆ ಶಿವಣ್ಣನ ವಿರುದ್ಧ ಸುದೀಪ್ ಫ್ಯಾನ್ಸ್, ಸುದೀಪ್ ವಿರುದ್ಧ ಶಿವಣ್ಣನ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಕೆಸರೆರಚಾಡಿ ಕೊಂಡರು. ಇದನ್ನೆಲ್ಲಾ ನೋಡಿದವರು ಶಿವಣ್ಣ ಮತ್ತು ಸುದೀಪ್ ಒಂದಾಗುವುದಕ್ಕೆ ಸಾಧ್ಯವೇ ಇಲ್ಲ ಅಂದುಕೊಂಡರು.

ಸಂದರ್ಶನಗಳಲ್ಲಿ ಮಾತ್ರ 'ನಾವಿಬ್ಬರು ಚೆನ್ನಾಗಿದ್ದೀವಿ' ಅಂತ ಸುದೀಪ್ ಮತ್ತು ಶಿವಣ್ಣ ಹೇಳುತ್ತಲೇ ಇದ್ದರು. ಆದ್ರೆ, ಎಂದೂ ಒಟ್ಟಾಗಿ ಕಾಣಿಸಿಕೊಳ್ಳದ ಸುದೀಪ್-ಶಿವಣ್ಣ ಇದೀಗ ಎಲ್ಲಾ ಕನ್ನಡ ಸಿನಿ ಅಭಿಮಾನಿಗಳಿಗೆ ಬಿಗ್ ಸರ್ ಪ್ರೈಸ್ ನೀಡಿದ್ದಾರೆ. ಮುಂದೆ ಓದಿ....

ಕಿಚ್ಚ ಸುದೀಪ್ ಮನೆಯಲ್ಲಿ ಶಿವರಾಜ್ ಕುಮಾರ್

ಅಂತೂ ಗಾಂಧಿನಗರದಲ್ಲಿ ಎಂಟನೇ ಅದ್ಭುತ ನಡೆದೇ ಹೋಗಿದೆ. ಮೊನ್ನೆಯಷ್ಟೆ ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡುವ ಮೂಲಕ ''ಸುದೀಪ್ ಮತ್ತು ಶಿವಣ್ಣ ಒಂದಾಗೋಲ್ಲ'' ಅನ್ನುತ್ತಿದ್ದವರ ಬಾಯಿಗೆ ಬೀಗ ಹಾಕಿದ್ದಾರೆ ನಟ ಶಿವರಾಜ್ ಕುಮಾರ್.

ಮಗಳ ಮದುವೆಗೆ ಕರೆಯೋಲೆ

ಸುದೀಪ್ ಮನೆಗೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್, ಸುದೀಪ್ ಮತ್ತು ಕುಟುಂಬವನ್ನ ತಮ್ಮ ಪುತ್ರಿಯ ವಿವಾಹ ಮಹೋತ್ಸವಕ್ಕೆ ಆತ್ಮೀಯ ಆಮಂತ್ರಣ ನೀಡಿದರು.

ಶಿವಣ್ಣನ ಮಗಳ ಮದುವೆಗೆ ಬರ್ತಾರೆ ಕಿಚ್ಚ.!

ಶಿವಣ್ಣ ದಂಪತಿಯ ಆಮಂತ್ರಣ ಸ್ವೀಕರಿಸಿದ ಸುದೀಪ್, ಮದುವೆಗೆ ಕುಟುಂಬ ಸಮೇತ ಹಾಜರಾಗುವುದಾಗಿ ತಿಳಿಸಿದ್ದಾರೆ.

ಶಿವಣ್ಣ ದಂಪತಿಗೆ ಸಿಹಿ ಊಟ

ಶಿವಣ್ಣ ದಂಪತಿ ತಮ್ಮ ಮನೆಗೆ ಬಂದಿದ್ದರಿಂದ ಅವರಿಗಾಗಿ ವಿಶೇಷ ಸಿಹಿ ಊಟ ಮಾಡಿಸಿದ್ದರು ಸುದೀಪ್. ಅಲ್ಲದೇ, ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದರು.

ಇಬ್ಬರ ನಡುವೆ ವೈರತ್ವ ಇಲ್ಲ!

ಸುದೀಪ್ ಮತ್ತು ಶಿವಣ್ಣ ನಡುವೆ ಯಾವುದೇ ವೈರತ್ವ ಇಲ್ಲ ಅನ್ನೋದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಾ? ಕಲಾವಿದರೆಲ್ಲರು ಒಗ್ಗಟ್ಟಾಗಿ ಇರುತ್ತಾರೆ. ಅಭಿಮಾನಿಗಳು ಕೂಡ ಹಾಗೇ ವರ್ತಿಸಿದರೆ, ಸ್ಯಾಂಡಲ್ ವುಡ್ ನಲ್ಲಿ ವಿವಾದಗಳ ಸಂಖ್ಯೆ ಕಡಿಮೆ ಆಗ್ಬಹುದು.

English summary
Kannada Actor Shivarajkumar and Sudeep are snapped together in Sudeep's house recently. Shivarajkumar was in Sudeep's house to invite for his Daughter's marriage.
Please Wait while comments are loading...

Kannada Photos

Go to : More Photos